SUDDILIVE || SHIVAMOGGA
ಆಯನೂರು-ಶಿವಮೊಗ್ಗ ನಡುವಿನ ರಸ್ತೆಯಲ್ಲಿರುವ ಮರಗಳು ಧರೆಗೆ-Trees on the road between Ayanur-Shivamogga fell to the ground
ಪುಷ್ಯ ಮಳೆಯ ಆರ್ಭಟದಿಂದಾಗಿ ಮರಗಳೆಲ್ಲಾ ಧಾರಾಶಾಹಿಗಳಾಗುತ್ತಿವೆ. ಹೊನ್ನಾವರ ಬೆಂಗಳೂರು ರಸ್ತೆಯ ಬದಿಗಿರುವ ಮರಗಳು ಮಳೆ ಮತ್ತು ಗಾಳಿಗೆ ಧರೆಗುರುಳುತ್ತಿವೆ.
ಆಯನೂರು-ಶಿವಮೊಗ್ಗ ರಸ್ತೆಯ ನಡುವಿನ ಮರವೊಂದು ದಿಡೀರ್ ಎಂದು ಧರೆಗೆ ಉರುಳಿದೆ. ಇದರಿಂದಗಿ ಕೆಲ ಸಮಯದ ಟ್ರಾಫಿಕ್ ಜ್ಯಾಮ್ ಆಗಿದ್ದವು. ಇನ್ನು ಘಟಿ ಬಳಿ ಹೋದರೆ ಮಳೆಗೆ ದಿನಕ್ಕೆ ಮೂರು ನಾಲ್ಕು ಮರಗಳು ಧರೆಗುರುಳುತ್ತಿವೆ.
ನಿನ್ನೆ ತೀರ್ಥಹಳ್ಳಿ ತಾಲೂಕು ಹೊನ್ನೆತಾಳು ಮತ್ತು ಚಂಗಾರು ಗ್ರಾಮದಲ್ಲಿ ಭಾರಿ ಹಾನಿಯಾಗಿವೆ. ನೇತ್ರಾವತಿ ಬಾಬು ಪೂರಾಜ್ ಎಂಬುವರ ಕೊಟ್ಟಿಗೆಯ ಮೇಲೆ ಮರಗಳು ಧರೆಗುರುಳಿ ಕೊಟ್ಟಿಗೆ ಮತ್ತು ಅಡಿಕೆ ಮರಗಳು ಹಾನಿಯಾಗಿವೆ. ನಿನ್ನೆ ಬೆಳಗ್ಗಿನ ಜಾವ 3 ಗಂಟೆಗೆ ಈ ಘಟನೆ ನಡೆದಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Trees on the road between Ayanur-Shivamogga fell to the ground