ad

ಗ್ಯಾರೆಂಟಿಯ ಬಗ್ಗೆ ರಾಜ್ಯ ಸರ್ಕಾರವೇ ಉತ್ತರ ಕೊಡಬೇಕು-ನಿಖಿಲ್ ಕುಮಾರ ಸ್ವಾಮಿ-The state government should answer about the guarantee - Nikhil Kumaraswamy

 SUDDILIVE || SHIVAMOGGA

ಗ್ಯಾರೆಂಟಿಯ ಬಗ್ಗೆ ರಾಜ್ಯ ಸರ್ಕಾರವೇ ಉತ್ತರ ಕೊಡಬೇಕು-ನಿಖಿಲ್ ಕುಮಾರ ಸ್ವಾಮಿ-The state government should answer about the guarantee - Nikhil Kumaraswamy

Nikhil, kumarswamy

ಚುನಾವಣೆಯ ಸಂದರ್ಭದಲ್ಲಿ ಮಾತ್ರ ಪಕ್ಷ ಸಂಘಟಿಸುವುದಲ್ಲ. ಕಾರ್ಯಕರ್ತರ ಚುನಾವಣೆಗೂ ಪಕ್ಷ ಸಂಘಟಿಸಬೇಕಿದೆ ಎಂದು ಜೆಡಿಎಸ್ ನ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿ ತಿಳಿಸಿದರು. 

ಅವರು ದೇವಜ್ಞ ಕಲ್ಯಾಣ ಮಂದಿರದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶವನ್ನ ಉದ್ಘಾಟಿಸಿ ಮಾತನಾಡಿ, ಕಳೆದ ಎರಡು ವರ್ಷದಲ್ಲಿ ಸರ್ಕಾರದ ಆಡಳಿತ ಗ್ಯಾರೆಂಟಿಯನ್ನ ಸಮರ್ಪಕವಾಗಿ ನೀಡಲಾಗಿದೆಯಾ ಎಂದು ಸರ್ಕಾರವೇ ನೀಡಬೇಕು. ಡಿಸಿಎಂ ಘಂಟಾಘೋಷವಾಗಿ ಗೃಹಲಕ್ಷ್ಮಿ ಕೊಡಗತೀವಿ ಎಂದು ಹೇಳಿದ್ದರು ನಂತ ಕೊಡಲು ಆಗಲಿಲ್ಲ. ನಂತರ ಯಾವಾಗ ತೆರಿಗೆ ಹಾಕ್ತೀವಿ ಆಗೆಲ್ಲ ಗೃಹಲಕ್ಷ್ಮಿ ಕೊಡ್ತೀವಿ ಎಂದಿದ್ದರು. ಅದು ಸಾನಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. 

ಹೀಗೆ ಸರ್ಕಾರ ನಡೆದುಕೊಳ್ಳುತ್ತಿದೆ. ಯುಪಿಐನಿಂದ ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ಹೊಟ್ಟೆಯ ಮೇಲೆ ಹೊಡೆಯಬೇಡಿ. ಕುಳಿತು ಸಿಎಂ ಮಾತುಕತೆ ನಡೆಸಿ ಎಂದ ನಿಖಿಲ್ ಕುಮಾರ ಸ್ವಾಮಿ ಹಿಂದುಳಿದ ವರ್ಗಗಳ ಚಾಂಪಿಯನ್ ಎನ್ನುವ ಸಿಎಂ ಸಿದ್ದರಾಮಯ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನ‌ ಬೇರೆಡೆ ಬಳಕೆ ಮಾಡಿದ ಬಗ್ಗೆ ಅವರ ಬಳಿ ಉತ್ತರವಿಲ್ಲವೆಂಬಂತಾಗಿದೆ ಎಂದು ವಾಗ್ದಾಳಿ ನಡೆಸಿದರು. 

ಲಾಟರಿ ಮತ್ತು ಸಾರಾಯಿಯನ್ನ ಕುಮಾರ ಸ್ವಾಮಿ ಅವರು ನಿಷೇಧಿಸಿದ್ದಾರೆ. ನಿಷೇಧಿಸದಂತೆ ಕುಮಾರ ಸ್ವಾಮಿ ಅವರು ಸಿಎಂ ಆಗಿದ್ದಾಗ ಒತ್ತಡ ಬಂದಿತ್ತು. ಆದರೂ ಮಹಿಳೆಯರನ್ನ ಸಬಲೀಕರಣಕ್ಕೆ ಈ ಎರಡೂ ವಿಷಯಗಳು ಅಡ್ಡಿ ಬರುತ್ತದೆ ಎಂದು ನಿಷೇಧಿಸಿದರು. ಮಹಿಳೆಯರ ಸಬಲೀಕರಣಕ್ಕೆ ಮೀಸಲಾತಿಗೆ ಹೋರಾಡಿದವರು ದೇವೇಗೌಡರು. ಆದರೆ ಅವರ ಕೈಯಲ್ಲಿ ಸಾಧ್ಯವಾಗಲಿಲ್ಲ. ಈಗ ಪ್ರಧಾನಿ ಮೋದಿಗೆ ಅದು ಸಾಧ್ಯವಾಗಿದೆ ಎಂದರು. 

ಮುಂದೆ ಬರುವ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಜೆಡಿಎಸ್ ಕೋರ್  ಕಮಿಟಿ ಸದಸ್ಯರ ವಿಶ್ವಾಸ ಪಡೆದು ಟಿಕೇಟ್ ಹಂಚುವ ಭರವಸೆ ನೀಡಿದರು. 


The state government should answer about the guarantee - Nikhil Kumaraswamy

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close