ad

ಜಿಲ್ಲೆಗೆ ಸಚಿವರ ಕೊಡುಗೆ ಏನು-ಹಾಲಪ್ಪ

 SUDDILIVE || SHIVAMOGGA

ಜಿಲ್ಲೆಗೆ ಸಚಿವರ ಕೊಡುಗೆ ಏನು-ಹಾಲಪ್ಪ-What is the minister's contribution to the district - Halappa

Halappa, contribution

ದಿ. ಬಂಗಾರಪ್ಪನವರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ನಿಜ. ಆದರೆ, ಈ ಮಧು ಬಂಗಾರಪ್ಪ ಯಾವ ಅಭಿವೃದ್ಧಿ ಮಾಡಿದ್ದಾರೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಪ್ರಶ್ನಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧು ಬಂಗಾರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡು ಅಪ್ಪ ಮಾಡಿದ್ದು ನಿಜ ನೀನೇನು ಅಭಿವೃದ್ಧಿ ಮಾಡಿದ್ದೀಯಪ್ಪ. ಅದನ್ನು ಬಹಿರಂಗಪಡಿಸು ಎಂದು ಸವಾಲು ಹಾಕಿದರು.

ಮಧು ಬಂಗಾರಪ್ಪ ತಮ್ಮ ಅಸಂಬದ್ಧ ಪ್ರಲಾಪಗಳನ್ನು ಬದಿಗೆ ಇರಿಸಿ ಜಿಲ್ಲೆಯ ಅಭಿವೃದ್ಧಿ ಮತ್ತು ರೈತರ ರಕ್ಷಣೆ ಕಡೆಗೆ ಗಮನ ಕೊಡಲಿ. ಒಬ್ಬ ಪ್ರಬುದ್ಧ ರಾಜಕಾರಣಿಯ ಮಗನಾಗಿ ಇವರ ಮಾತು ಅಸಹ್ಯ ಹುಟ್ಟಿಸುತ್ತಿದೆ. ತಮಗೆ ಪ್ರಬುದ್ಧತೆ ಇಲ್ಲ ಎಂದು ಅವರೇ ತೋರಿಸಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇದು ವಿದ್ಯಾವಂತರ ಜಿಲ್ಲೆ. ಜಿಲ್ಲೆಯ ಆಡಳಿತ ಮತ್ತು ಅಧಿಕಾರಿಗಳ ಮೇಲೆ ಉಸ್ತುವಾರಿ ಸಚಿವರಿಗೆ ಹಿಡಿತ ಇರಬೇಕಿತ್ತು. ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಕಡೆಗೆ ಗಮನ ಕೊಡಬೇಕಾಗಿತ್ತು. ರೈತ ಗೋರಾಟ, ಸಮಾಜವಾದಿ ಚಳುವಳಿ, ಕಾಗೋಡು ಚಳುವಳಿ, ದಲಿತ ಸಂಘರ್ಷ ಸಮಿತಿ ಹುಟ್ಟು ಜೊತೆಗೆ ಬಿಜೆಪಿ ಕೂಡ ಪ್ರಬಲವಾಗಿರುವ ಜಿಲ್ಲೆಯಾಗಿದೆ. ನಾಲ್ವರು ಮುಖ್ಯಮಂತ್ರಿಗಳನ್ನು ಕಂಡಿರುವ ಜಿಲ್ಲೆ ಇದು.  eನಪೀಠ ಪುರಸ್ಕೃತರ ಜಿಲ್ಲೆಯೂ ಆಗಿದೆ. ಅಂತಹ ಜಿಲ್ಲೆಯಲ್ಲಿ ಇಂತಹ ಉಸ್ತುವಾರಿ ಸಚಿವರೇ ಎಂದು ಪ್ರಶ್ನಿಸಿದರು.

ಮಧು ಬಂಗಾರಪ್ಪ ಸೋತಿದ್ದಾಗ ಎರಡು ಬಾರಿ ರೈತರ ಪರ ಪಾದಯಾತ್ರೆ ಮಾಡಿದ್ದಾರೆ. ಆದರೆ ಈಗ ರೈತರ ರಕ್ಷಣೆಗೆ ಬರುತ್ತಿಲ್ಲ. ಇತ್ತೀಚೆಗೆ ಶಿವಮೊಗ್ಗ ತಾಲೂಕಿನ ಚಿತ್ರಶೆಟ್ಟಿಹಳ್ಳಿ ಗ್ರಾಮದ ರಾಮಪ್ಪ ಅವರ ೩೫೦ ಅಡಿಕೆ ಗಿಡಗಳನ್ನು ಕಿತ್ತು ಹಾಕಿದ್ದಾರೆ. ಮುಳುಗಡೆ ರೈತರಿಗೆ ರಕ್ಷಣೆ ಇಲ್ಲವಾಗಿದೆ. ಸಾಗರ ತಾಲೂಕು ಪಡವಗೋಡು ಗ್ರಾಪಂ ವ್ಯಾಪ್ತಿಯ ಕೆರೋಡಿ ಗ್ರಾಮದಲ್ಲಿ ಶುಂಠಿ ಬೆಳೆಯನ್ನು ಕಿತ್ತು ಹಾಕಿದ್ದಾರೆ. ಹೊಸನಗರ ತಾಲೂಕಿನ ವಸವೆ ಗ್ರಾಮದಲ್ಲಿ ಲ ಬರುವ ಅಡಿಕೆ ಮರಗಳನ್ನು ಅರಣ್ಯ ಇಲಾಖೆಯವರು ಕಡಿದು ಹಾಕಿದ್ದಾರೆ. ಇತ್ತೀಚೆಗ ೦೭ ರೈತರನ್ನು ೧೩ ದಿನಗಳ ಕಾಲ ಜೈಲಿನಲ್ಲಿ ಇರಿಸಿದ್ದರು. ರೈತರ ರಕ್ಷಣೆಗೆ ಮಧು ಬಂಗಾರಪ್ಪ ಮುಂದಾಗಲಿ ಎಂದು ಆಗ್ರಹಿಸಿದರು.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗನಾಗಿ ೦೫ ಕ್ಲಬ್ ಆರಂಭಿಸಲು ಸೊರಬದಲ್ಲಿ ಅವಕಾಶ ನೀಡಿದ್ದಾರೆ. ಬಂಗಾರಪ್ಪ ಅವರು ೦೭ ಬಾರಿ ಶಾಸಕರಾಗಿದ್ದರೂ ಇದನ್ನೆಲ್ಲಾ ಮಾಡಿರಲಿಲ್ಲ. ೪೫ ಸಾವಿರ ಮತಗಳಿಂದ ಗೆಲ್ಲಿಸಿರುವುದಕ್ಕಾದರೂ ಅವುಗಳನ್ನು ಬಂದ್ ಮಾಡಿಸಿ ಎಂದರು.

ನನ್ನ ಇತಿಹಾಸ ಬಿಚ್ಚಿಡುವುದಾಗಿ ಮಧು ಬಂಗಾರಪ್ಪ ಹೇಳಿದ್ದಾರೆ. ಅವರದ್ದೂ ಸ್ವಲ್ಪ ಇತಿಹಾಸ ನಮಗೆಲ್ಲಾ ಗೊತ್ತಿದೆ. ಅದನ್ನು ಬಿಚ್ಚಿಡಲೂ ಗೊತ್ತಿದೆ. ದೊಡ್ಡವರ ಇತಿಹಾಸವನ್ನು ಅವರು ಅಧ್ಯಯನ ಮಾಡಲಿ. ಅಸಂಬದ್ಧ ಮಾತುಗಳನ್ನು ಬಿಡಲಿ ಎಂದರು.

ಮಾತು ಎತ್ತಿದರೆ ಸಂಸದರ ಬಗ್ಗೆ ಮಾತನಾಡುತ್ತಾರೆ. ಸಂಸದರು ಬಸ್ ನಿಲ್ದಾಣ, ವಿಮಾನ ನಿಲ್ದಾಣ, ಸಿಗಂದೂರು ಸೇತುವೆ ಜೊತೆಗೆ ಇನ್ನೂ ನಾಲ್ಕು ಸೇತುವೆ ಮಾಡಿಸುತ್ತಿದ್ದಾರೆ. ಜಿಲ್ಲೆಗೆ ನಿಮ್ಮ ಕೊಡುಗೆ ಏನು ಹೇಳಿ ಎಂದು ಸವಾಲು ಹಾಕಿದರು.

ಬಿಜೆಪಿ ಜಿಲ್ಲಾಧ್ಯ್ಯಕ್ಷ ಜಗದೀಶ್, ಅಣ್ಣಪ್ಪ, ಚಂದ್ರಶೇಖರ್, ಶಿವರಾಜ್ ಇದ್ದರು.

What is the minister's contribution to the district - Halappa


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close