ad

ಶಾಸಕರು ಸೂಸೈಡ್ ಮಾಡಿಕೊಳ್ಳುವ ಪರಿಸ್ಥಿತಿ ಇದೆ-ಈಶ್ವರಪ್ಪ-There is a situation where MLAs are committing suicide - Eshwarappa

 SUDDILIVE || SHIVAMOGGA

ಶಾಸಕರು ಸೂಸೈಡ್ ಮಾಡಿಕೊಳ್ಳುವ ಪರಿಸ್ಥಿತಿ ಇದೆ-ಈಶ್ವರಪ್ಪ-There is a situation where MLAs are committing suicide - Eshwarappa

MLA,  situation


50 ಕೋಟಿ ಕೊಡುವುದಾಗಿ ಅನುದಾನ ಹೇಳುತ್ತಿದ್ದಾರೆ ಬ್ರಹ್ಮ‌ಬಂದರೂ 50 ಕೋಟಿ ಕೊಎಲ್ಲ ರಸ್ತೆ ಗುಂಡಿಗೆ 2 ಎರರೆ ಅಥವಾ ಐದು ಕೋಟಿ ಕೊಡಲಿ ನೋಡೋಣ, ಕಾರುಗಳು ಹಾಳಾಗುವ ಸ್ಥಿತಿಗೆ ತಲುಪಿದೆ. ಶಾಸಕರು ಮರ್ಯಾದೆಯಿಂದ ಕೆಲಸ ಮಾಡಬೇಕು.ಮೂಲಬೂತ ಸೌಕರ್ಯ ನೀಡಿ ಗೌರವದಿಂದ ಬದುಕುವ ಹಾಗೆ ಮಾಡಿ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು. 

ಸುದ್ದಿಗೋಷ್ಣಟಿಯಲ್ಲಿ ಮಾತನಾಡಿದ ಅವರು,  ನಿಮ್ಮ ಗ್ಯಾರೆಂಟಿಯನ್ನ‌ ಟೀಕಿಸೊಲ್ಲ. ಮೈಸೂರಿನಲ್ಲಿ ಸಮಾವೇಶ ಮಾಡಲಾಗುತ್ತಿದೆ. ಕಾಂಗ್ರೆಸ್ ಸಾದನಾ ಸಮಾವೇಶದ ಕಾರಣ ಕನಿಷ್ಠ 1 ಕೋಟಿ ಹಣ ಎಲ್ಲಾ ಶಾಸಕರಿಗೆ ಬಿಡುಗಡೆ ಮಾಡಿ ಎಂದು ಸಲಹೆ ನೀಡಿದರು. 

ಸ್ವಾಮಿಜಿಗಳು, ಶಾಸಕರು ಮುಖ್ಯಮಂತ್ರಿಗಳ ಬದಲಾವಣೆಯಾಗಿರಬಹುದು. ಇದು ಟ್ರಯಲ್ ಅಷ್ಟೆ ಸಮಾವೇಶ ಶಕ್ತಿ ಪ್ರದರ್ಶನ ಇರಬಹುದು. ಟೋಕನ್ ಅಡ್ವಾನ್ಸ್ ಕೊಡಲು ಸರ್ಕಾರಕದ ಬಳಿ ಹಣವಿಲ್ಲ.  ಬಿಜೆಪಿಯ ಯೋಜನೆಗಳನ್ನ ಮುಂದುವರೆಸಬೇಕಿತ್ತು. ಸರ್ಕಾರ ಇದನ್ನ ಸ್ಟೇಮಾಡಿ ಮುಂದುವರೆಸಬೇಕಿತ್ತು. ಆದರೆ ಕಾಂಗ್ರೆಸ್ ರದ್ದುಗೊಳಿಸಿದರು. ದಲಿತರ ಹಣವನ್ನ ಬಳಸಿಕೊಂಡು ಖಾಲಿ ಮಾಡಿದರು ಎಂದು ಆರೋಪಿಸಿದರು. 

ನನ್ನ ರಾಜಕೀಯ ಜೀವನದಲ್ಲಿ ಬಂಗಾರಪ್ಪನವರು ಪ್ರತಿಶಾಸಕರಿಗೆ 25 ಲಕ್ಷ ನೀಡಿದ್ದರು. ಅವರ ನಂತರ ಒಂದು ರೂಗಳನ್ನ ನೀಡದೆ ಇರುವ ಸರ್ಕಾರವೆಂದರೆ,  ಇದೇ ಸಿದ್ದರಾಮಯ್ಯ ಸರ್ಕಾರವಾಗಿದೆ. ಪತ್ರಿಕೆಗಳಲ್ಲಿ ಬ್ಯಾನರ್ ಹೆಡ್ ಲೈನ್ ಹಾಕಿ 50 ಕೋಟಿ ಶಾಸಕರಿಗೆ ಅನುದಾನ ಎಂದು ಹಾಕಲಾಗಿದೆ. ಶಾಸಕರು ಹಣ ಬಾರದೆ ಸಧ್ಯಕ್ಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಅದೇ ಖುಷಿ ಎಂದರು. 

ಹಿಂದೂ ಯುವಕರ ಮೇಲೆ ಹಲ್ಲೆ

ಕುವೆಂಪು ನಗರದಲ್ಲಿ ಅವಿನಾಶ ಎಂಬ ಯುವಕನ‌ಮೇಲೆ ಎಂಟು ಜನ ಮುಸ್ಲೀಮರ ಮೇಲೆ ಹಲ್ಲೆ ನಡೆಸಿದ್ದಾರೆ. ಮೆಗ್ಗಾನ್ ನಲ್ಲಿ ಚಿಕಿತ್ಸೆ ನಡೆಯುತ್ತಿದೆ. ನಮ್ಮ ರಾಷ್ಟ್ರಭಕ್ತರ ಬಳಗ ಆರೋಪಿಗಳನ್ನ ಬಂಧಿಸಿ ಎಂದರೆ ಕ್ರಮ ಜರುಗುಸುತ್ತಿಲ್ಲ. ಪೊಲೀಸ್ ಇಲಾಖೆ ತಕ್ಷಣ ಕಾರ್ಯಪ್ರವೃತ್ತಿಯಾಗಬೇಕು. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆಲಸ ಮಾಡಲಿ ಎಂದರು. 

There is a situation where MLAs are committing suicide - Eshwarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close