SUDDILIVE || SHIVAMOGGA
ಸೈಟ್ ಮಾರಾಟದ ವಿಷಯ ಹೇಳಿಕೊಂಡು ಬಂದ ಅಪರಿಚಿತನಿಂದ ನಡೆಯಿತು ಈ ಕೃತ್ಯ!This act was committed by a stranger who came to tell him about the sale of the site!
ಸೈಟ್ ಮಾರಾಟ ಮಾಡುತ್ತೀರಾ ಎಂದು ವಿಚಾರಿಸುವ ನೆಪದಲ್ಲಿ ಮನೆಯ ಒಳಗಡೆನೇ ನುಗ್ಗಿ ಅನಾರೋಗ್ಯವಾಗಿ ಮಲಗಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ 40 ಗ್ರಾಂ 400 ಮಿಲಿ ತೂಕದ ಮಾಂಗಲ್ಯ ಸರವನ್ನ ಕಿತ್ತುಕೊಂಡು ಹೋಗಿರುವ ಘಟನೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿದ್ಯಾನಗರದ ಗಣಪತಿ ಲೇ ಔಟ್ ನಲ್ಲಿ ವೃದ್ಧ ನಾಗರಾಜ್ ದಂಪತಿಗಳು ವಾಸವಾಗಿದ್ದರು. ಜು.03 ರಂದು ಅಪರಿಚಿತನೋರ್ವ ನಿಮ್ಮ ಸೈಟ್ ಕೊಡುವುದಿದೆಯೇ ಎಂದು ವಿಚಾರಿಸಯವ ನೆಪದಲ್ಲಿ ಅವರ ಮನೆಯ ಒಳಗೆ ನುಗ್ಗಿದ್ದಾನೆ.
ಯಾವುದು ಇಲ್ಲ ನೀನೇನು ಮನೆಯ ಒಳಗೆ ಬರ್ತಿದ್ದೀಯ ಎಂದು ನಾಗರಾಜ್ ಅವರು ಹೇಳುವಷ್ಟರಲ್ಲೇ ಅಪರಿಚಿತ ವ್ಯಕ್ತಿ ಅನಾರೋಗ್ಯವಾಗಿ ಮಲಗಿದ್ದ ವೃದ್ಧೆ ರಾಜೇಶ್ವರಿ ಅವರ ಕುತ್ತಿಗೆಯಲ್ಲಿ ಇದ್ದ 40 ಗ್ರಾಂ 400 ಮಿಲಿ ತೂಕದ ಮಾಂಗಲ್ಯ ಸರವನ್ನ ಕಿತ್ತುಕೊಂಡು ಮನೆಯ ಮುಂಬಾಗಿಲನ ಚಿಲಕ ಹಾಕಿಕೊಂಡು ಪರಾರಿಯಾಗಿದ್ದಾನೆ.
ಅಪರಿಚಿತರೊಂದಿಗೆ ಹುಷಾರಾಗಿ ವರ್ತಿಸಬೇಕೆಂಬ ಈ ಘಟನೆ ಎಚ್ಚರಿಸಿದೆ. ಮಾಂಗಲ್ಯ ಸರವನ್ನ ಹುಡುಕಿಕೊಡುವಂತೆ ಮತ್ತು ಘಟನೆ ನಡೆಸಿದ ಅಪರಿಚಿತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವೃದ್ಧ ನಾಗರಾಜ್ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
This act was committed by a stranger