SUDDILIVE || SHIVAMOGGA
ಜಿಲ್ಲೆಯ ಪ್ರಮುಖ ಜಲಾಶಯದ ನೀರಿನ ಮಟ್ಟ-Water level of major reservoirs in the district
ಮಲೆನಾಡಿನಲ್ಲಿ ಪುನರ್ವಸು ಮಳೆಯ ಆರ್ಭಟ ತಗ್ಗಿದೆ. ಆರಿದ್ರ ಮಳೆ ಬಿಡುವ ಸಮಯದಲ್ಲಿ ಇದ್ದ ಮಳೆಯ ಆರ್ಭಟ ಪುನರ್ವಸು ಮಳೆ ಹಿಡಿಯುವ ಸಮಯದಲ್ಲಿ ತಗ್ಗಿದೆ. ಪರಿಣಾಮ ಜಲಾಶಯಕ್ಕೆ ಹರಿದು ಬರುತ್ತಿದ್ದ ಒಳ ಹರಿವು ಸಹ ತಗ್ಗಿದೆ.
ಜಲಾಶಯದ ಒಳಹರಿವು ತಗ್ಗಿದರೂ ಸಹ ಕಳೆದ ವರ್ಷಕ್ಕಿಂತಿ ಈ ವರ್ಷದಲ್ಲಿ ಜಲಾಶಯದಲ್ಲಿ ಆಗುತ್ತಿರುವ ನೀರು ಸಂಗ್ರಹ ಕೊಙಚ ನೆಮ್ಮದಿ ತಂದಿದೆ. ಕಳೆದ ವರ್ಷ ಭದ್ರ ಜಲಾಶಯದಲ್ಲಿ ಈ ದಿನದಂದು 133.1 ಅಡಿ ನೀರು ಸಂಗ್ರಹವಾಗಿದ್ದರೆ, ಈ ಬಾರಿ ಅದೇ ದಿನಾಂಕದಂದು ನದಿಯ ನೀರು ಸಂಗ್ರಹ 171.10 ಅಷ್ಟು ಮಳೆ ನೀರು ಸಂಗ್ರಹವಾಗಿದೆ.
ಲಿಂಗನಮಕ್ಕಿಯಲ್ಲಿ 1819 ನೀರು ಸಾಮರ್ಥ್ಯದ ಜಲಾಶಯದಲ್ಲಿ ಈದಿನ 1794.90 ಅಡಿ ನೀರು ಸಂಗ್ರಹವಾಗಿದೆ. 39118 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ಜಲಾಶಯದಲ್ಲಿ ಕಳೆದ ವರ್ಷ 1769 ಅಡಿಯಷ್ಟು ನೀರು ಸಂಗ್ರಹವಾಗಿತ್ತು. 151.64 ಟಿಎಂಸಿ ನೀರು ಸಾಮರ್ಥ್ಯದ ಜಲಾಶಯ ಕಳೆದ ವರ್ಷ ಕೇವಲ 38.78 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ವರ್ಷ 83.76 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ ಶೇ.30 ರಷ್ಟು ಹೆಚ್ಚು ನೀರು ಸಂಗ್ರಹವಾಗಿದೆ.
ತುಂಗ ನದಿಯ ಗಾಜನೂರು ಜಲಾಶಯದಲ್ಲಿ 22 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ 22 ಗೇಟನ್ನ ತೆರದು ನದಿಗೆ ನೀರು ಹರಿಸಲಾಗುತ್ತಿದೆ.
Water level of major reservoirs in the district