SUDDILIVE || SHIVAMOGGA
ಟ್ರಂಪ್ ಆದರೂ ಬರಲಿ ಎಂದವರು ಸೇತುವೆ ಉದ್ಘಟನೆಗೆ ಯಾರು ಬರಲಿಲ್ಲ-ಹರತಾಳು ಹಾಲಪ್ಪ-Those who said Trump should come, but who didn't come to the bridge inauguration - Harathalu Halappa
ಒಕ್ಕೂಟ ವ್ಯವಸ್ತೆಯಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸಮನ್ವಯತೆ ಇರಬೇಕು ಎಂದು ಮಾಜಿ ಸಚಿವ ಹರತಾಳ ಹಾಲಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಯಿ ಆಶೀರ್ವಾದದಿಂದ ಸೇತುವೆ ಉದ್ಘಾಟನೆ ಸುಸೂತ್ರವಾಗಿ ನಡೆದಿದೆ. ಗುದ್ದಲಿ ಪೂಜೆ ವೇಳೆ ಇದ್ದ ಮೂವರಾದ ಕಾಗೋಡು ತಿಮ್ಮಪ್ಪ, ಯಡಿಯೂರಪ್ಪ ಹಾಗೂ ನಿತಿನ್ ಗಡ್ಕರಿ ಅವರೇ ಉಪಸ್ಥಿತರಿದ್ದರು.
ಮುಖ್ಯಮಂತ್ರಿಗಳು ಸಮಯ ನೀಡಿ ಬರುತ್ತೇನೆ ಎಂದಿದ್ದರು. ಲೋಕೋಪಯೋಗಿ ಸಚಿವರು ಸಾಗರಕ್ಕೆ ಬಂದು ವಾಪಾಸು ಹೋಗಿದ್ದಾರೆ. ನಾನು ಇವರಿಬ್ಬರ ಬಗ್ಗೆ ಏನೂ ಆರೋಪಿಸಲು ಹೋಗುವುದಿಲ್ಲ. ಅದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಾಗರ ಶಾಸಕ ಏನೂ ಮಾತನಾಡುತ್ತಿದ್ದೆನೆ ಎಂಬುದೇ ತಿಳಿದಿಲ್ಲ. ನಾನೇನು ಮಾಡಿಲ್ಲ, ನಾನು ಸೇತುವೆಗೆ ಏನೂ ಮಾಡೋಕೆ ಆಗಿಲ್ಲ ಎಂಬ ಕಸಿವಿಸಿ ಇರಬಹುದು.
ಮೋದಿಯಾದ್ರೂ ಬರ್ಲಿ ಯಾರಾದರೂ ಬರಲಿ, ಟ್ರಂಪ್ ಆದ್ರೂ ಬರ್ಲಿ ಅಂತಾ ಹೇಳಿದವರು ಯಾಕೆ ಬರಲಿಲ್ಲ? ಕೊನೆ ಕ್ಷಣದಲ್ಲಿ ಬಾರದೇ ವಿದ್ವಾಂಸಕ ಕೃತ್ಯ ಮಾಡಿದ ಹಾಗೆ ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಕೀಳರಿಮೆಯಿಂದಾಗಿ ಅವರು ಬಂದಿಲ್ಲ. ಕಾರ್ಯಕ್ರಮ ಸಂಘಟಿಸಿ ಅವರು ಉದ್ಘಾಟನೆ ಮಾಡಬೇಕಿತ್ತು.
15 ದಿನಗಳ ಹಿಂದೆ ಸೇತುವೆ ನೋಡಲು ಹೋಗಿದ್ದರು. ಅಂದು 14 ರಂದು ಉದ್ಘಾಟನೆ ಮಾಡಿಲ್ಲವಾದರೆ, ನಾವೆ ಉದ್ಘಾಟನೆ ಮಾಡುತ್ತೇವೆ ಎಂದವರು ಯಾಕೆ ಬರಲಿಲ್ಲ?ಅಸಂಬದ್ಧವಾಗಿ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಏನು ಮಾತನಾಡುತ್ತೆದ್ದೆನೆ ಎಂಬುದೇ ಗೊತ್ತಿರೊಲ್ಲ. ಸಿಗಂದೂರು ಸೇತುವೆಗೆ ತಾನು ಏನೂ ಮಾಡಿಲ್ಲವೆಂಬ ಕೀಳರಿಮೆ ಇದೆ. ಹೀಗಾಗಿ ಸೇತುವೆ ಉದ್ಘಾಟನೆಗೆ ಬಂದಿಲ್ಲ.
ಇಲ್ಲಿ ಯಡಿಯೂರಪ್ಪ ಅವರಿಗೆ ಹೊಗಳುವ ಇವರು, ಅಲ್ಲಿ ಹೋಗಿ ತೆಗಳುತ್ತಾರೆ. ಮೊನ್ನೆ ಪತ್ರ ಬರೆದು 11 ನೇ ತಾರಿಖಿನ ದಿನಾಂಕ ನಮೂದಿಸಿದ್ದಾರೆ. ಶಾಸಕ ಬೇಳೂರು ಗೋಪಾಲಕೃಷ್ಣ ಮಂಗನ ರೀತಿಯಲ್ಲಿ ವರ್ತಿಸಿದ್ದಾರೆ. ಮುಜುಗರ ತರುವ ರೀತಿಯಲ್ಲಿ ಶಾಸಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ನಡೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳಿಗೆ ಇವರು ದಾರಿ ತಪ್ಪಿಸಿ ಸೇತುವೆ ಉದ್ಘಾಟನೆಗೆ ಬಾರದ ರೀತಿ ಮಾಡಿದ್ದಾರೆ ಎಂದು ದೂರಿದರು.
Those who said Trump should come, but who didn't come to the bridge inauguration - Harathalu Halappa