SUDDILIVE || SIGANDURU
ಸೇತುವೆ ಉದ್ಘಾಟನೆ-ಬ್ರಿಡ್ಜ್ ನ ಫೋಟೊ ತೆಗೆದುಕೊಳ್ಳದೆ ಮುಂದೆಸಾಗದ ಪ್ರವಾಸಿಗರು-Opening the bridge - the work cannot proceed without taking a photo of the bridge
ಸಿಗಂದೂರು ಸೇತುವೆ ಮೊದಲನೇ ದಿನ ಜನರ ಸಂತೋಷಕ್ಕೆ ಕಾರಣವಾಗಿದೆ. 16 ಪಿಲ್ಲರ್ ಮೇಲೆ ನಿಂತಿರುವ ಬ್ರಿಡ್ಜ್ ಈ ಭಾಗದ ಜೀವನಾಡಿಯಾಗಿದೆ. 96 ಕೇಬಲ್ ಮೇಲೆ ಈ ಬ್ರಿಡ್ಜ್ ನಿಂತಿದೆ. ಫ್ರಾನ್ಸ್ ದೇಶದ ತಂತ್ರಜ್ಞಾನ ಬಳಕೆ ಮಾಡಿಕೊಂಡು ₹473 ಕೋಟಿ ವೆಚ್ಚದ ಸೇತುವೆ ನಿರ್ಮಾಣವಾಗಿದೆ.
ಲಾಂಜ್ ಗಾಗಿ ಕಾಯುತ್ತಿದ್ದ ಸಮಯ ಬದಲಾಗಿದೆ. ದ್ವೀಪವಾಗಿದ್ದ ಕಾರೂರು ಬಾರಂಗಿಯ 40 ಹಳ್ಳಿಗಳು ಸಂಪರ್ಕ ಸೇತುವೆಯಿಲ್ಲದ ಕಾರಣ ರಾತ್ರಿಯ ವೇಳೆ ಪರದಾಡುವಂತಾಗಿತ್ತು. ಪ್ರತಿದಿನ ಸಂಜೆ 6 ಗಂಟೆಯ ನಂತರ ಕರೂರು ಬಾರಂಗಿ ಹೋಬಳಿ ಜನರಿಗೆ ಯಾವುದೇ ಸಂಪರ್ಕವಿರಲಿಲ್ಲ.
ಹಾಗಾಗಿ ಈ ಭಾಗದ ಜನರ ಸೇತುವೆ ಜೀವನಾಡಿಯಾಗಿದೆ. 2019 ಡಿಸೆಂಬರ್ ನಲ್ಲಿ ಸೇತುವೆಯ ನಿರ್ಮಾಣ ಆರಂಭವಾಗಿದೆ. ಸೇತುವೆಯ ಮಧ್ಯದಲ್ಲಿ ಕೇಬಲ್ ಇದೆ. ಕೇಬಲ್ ಇರದಿದ್ದರೆ ಮೂರು ಪಿಲ್ಲರ್ ಗಳು 60 ಸಿಮೆಂಟ್ ಬ್ಲಾಕ್ ಗಳು ಹಾಕಬೇಕಿತ್ತು. ಈಗ ಈ ಸೇತುವೆಯ ಶೇ.30% ಲೋಡ್ ನ್ನ ಕೇಬಲ್ ತೆಗೆದುಕೊಂಡಿದೆ. 604 ಸಿಮೆಂಟ್ ಬ್ಲಾಕ್ ಮೇಲೆ ನಿಂತಿದೆ. ಸೇತುವೆ ಈಗ ವಿಡಿಯೋ ರೀಲ್ಸ್ ಗೆ ಹಾಟ್ ಸ್ಪಾಟ್ ಆಗಿದೆ.
ಈ ಕುರಿತು ಪ್ರವಾಸಿಗರ ಸ್ಥಳೀಯರ ಅಭಿಪ್ರಾಯ ಹಂಚಿ ಕೊಂಡಿದ್ದಾರೆ. ಈ ಕುರಿತು ಸ್ಥಳೀಯ ಗುಡ್ಡೆಮನೆ ನಾಗರಾಜ್ ಮಾತನಾಡಿ, ಲಾಂಚ್ ನಲ್ಲಿ ಪ್ರಯಾಣ ಇದ್ದಾಗ ಕಂಡ ಕನಸು ಸೇತುವೆ ಬೇಕು ಎಂಬುದು. 60 ವರ್ಷದ ಕನಸು ನಿನ್ನೆ ಸಾಕಾರವಾಗಿದೆ. ಹೋರಾಟದ ಫಲದಿಂದ ಸೇತುವೆ ನಿರ್ಮಾಣವಾಗಿದೆ. ಸಾವಿರಾರು ಜನ ಈ ಸೇತುವೆ ಬಳಕೆ ಮಾಡಿಕೊಂಡಿದ್ದಾರೆ. ಲಾಂಚ್ ಗಾಗಿ ಗಂಟೆಗಟ್ಟಲೆ ಕಾಯಬೇಕಿತ್ತು. ವಿಮಾನಯಾನದಲ್ಲಿ ಪ್ರಯಾಣಿಸುವಂತಾಗಿದೆ ಎಂದರು.
ಅವರ ಪಲ್ಲವಿ ನಾಗರಾಜ್ ಪತ್ನಿ ಮಾತನಾಡಿ ಸೇತುವೆ ಮೇಲೆ ಸಂಚರಿಸುವ ಖುಷಿನೇ ಬೇರೆ. ರಾತ್ರಿಯ ಹೊತ್ತು ಲಾಂಚ್ ಇರದಿದ್ದ ದಿನಗಳಲ್ಲಿ ನಾವುಗಳಲು ಪರದಾಡಿದ್ದು ಉಂಟು ಎಂದಿದ್ದಾರೆ. ಶಿವಮೊಗ್ಗದ ನಿವಾಸಿ ಮಾಲಾರ್ ಮಾತನಾಡಿ, ದೇವಸ್ಥಾನಕ್ಕೆ ಭೇಟಿಕೊಡಲು ಲಾಂಜ್ ಗಾಗಿ ಕಾಯುತ್ತಿದ್ದೆವು. ಈಗ ಆ ಪರಿಸ್ಥಿತಿ ಇಲ್ಲ. ಲಾಂಚ್ ಗೆ ಸಮಯ ನಿಗದಿ ಇತ್ತು. ಈಗ ಖುಷಿಯಾಗಿದೆ. ಸೇತುವೆಯ ಮೇಲೆ ಪ್ರಯಾಣಿಸಿ ದೇವಿದರ್ಶನ ಪಡೆದಿರುವುದಾಗಿ ಹೇಳಿದ್ದಾರೆ.
ಹಾವೇರಿಯ ಗವಿಸಿದ್ದಪ್ಪ ದ್ಯಾಮಣ್ಣನವರ್ ಮಾತನಾಡಿ, ಈ ಸೇತುವೆ ಪ್ರವಾಸಿಗರಿಗೆ ಅನುಕೂಲವಾಗಿದೆ. ಬೇರೆ ದೇಶಕ್ಕೆ ಹೋದಂತೆ ಅನುಭವವಾಗಿದೆ. ಮೋದಿಗೆ ಧನ್ಯವಾದಗಳು ಎಂದಿದ್ದಾರೆ. ಮಂಡ್ಯದಿಂದ ಬಂದ ಸಿದ್ದಪ್ಪ, ಸೇತುವೆ ಓಪನ್ ಅಗಿದೆ ಅಂತ ಗೊತ್ತಿತ್ತು. ಹಾಗಾಗಿ ಅನುಭವಕ್ಕಾಗಿ ಬಂದಿದ್ದೇವೆ. ಬೆಳಗ್ಗಿನ ಜಾವ 5-30ಕ್ಕೆ ಮಂಡ್ಯ ಬಿಟ್ಟು ಬಂದಿದ್ದೇವೆ. ಸಿಗಂದೂರು ಗೋಕರ್ಣ ಹೋಗುವುದಾಗಿ ಹೇಳಿದರು. ಒಟ್ಟಿನಲ್ಲಿ ಮೊದಲನೆಯ ದಿನ ಜನ ಸೇತುವೆಯ ಮೇಲೆ ನಿಂತುಕೊಂಡು ಫೋಟೊ ಸೆಲ್ಫಿ ತೆಗೆದುಕೊಳ್ಳುವುದು ಮಾಮೂಲಿಯಾಗಿದೆ.
Opening the bridge - the work cannot proceed without taking a photo of the bridge