SUDDILIVE || SHIVAMOGGA
48 ಗಂಟೆಗಳ ಅವಧಿಯಲ್ಲಿ ಇಬ್ಬರು ಸಿಸಿಎಫ್ ವರ್ಗಾವಣೆ ರದ್ದು-Two CCF transfers cancelled within 48 hours
ಇದು ಸರ್ಕಾರದ ಉಚ್ಛಾಟವೋ ಅಥವಾ ಮೇಲಾಟವು ಗೊತ್ತಿಲ್ಲ. ಆದರೆ ವರ್ಗಾವಣೆಯಾದ 48 ಗಂಟೆಗಳ ಅವಧಿಯಲ್ಲಿ ಸರ್ಕಾರ ವರ್ಗಾವಣೆ ರದ್ದು ಮಾಡಿ ಆದೇಶಿಸಿರುವುದು ಕುತೂಹಲ ಮೂಡಿಸಿದೆ. ಎರಡು ದಿನಗಳ ಹಿಂದೆ ಎಷ್ಟೇ 13 ಐಎಎಫ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶಿಸಿತ್ತು. ಆದರೆ ಎರಡೇ ದಿನಕ್ಕೆ ಇಬ್ಬರು ಅಧಿಕಾರಿಗಳ ಆದೇಶವನ್ನು ಸರ್ಕಾರ ಅಚ್ಚರಿಯ ರೀತಿಯಲ್ಲಿ ರದ್ದು ಮಾಡಿದೆ.
ಜುಲೈ 29ರಂದು ದಿಢೀರ್ ಎಂದು ಚಾಮರಾಜನಗರದ ಸಿಸಿಎಫ್ ಹೀರಲಾಲ್ ಅವರನ್ನು ಶಿಮೊಗ್ಗದ ವೃತ್ತ ಅರಣ್ಯ ಇಲಾಖೆಗೆ ಮುಖ್ಯ ಅರಣ್ಯ ಅಧಿಕಾರಿಗಳನ್ನಾಗಿ ನೇಮಿಸಿ ವರ್ಗಾವಣೆ ಮಾಡಿತ್ತು. ಅದರಂತೆಯೇ ಶಿವಮೊಗ್ಗದ ಸಿಸಿಎಫ್ ಹನುಮಂತಪ್ಪ ಅವರನ್ನು ಚಾಮರಾಜನಗರಕ್ಕೆ ಅರಣ್ಯ ಅಧಿಕಾರಿ ಆಗಿ ವರ್ಗಾವಣೆ ಮಾಡಿ ಆದೇಶಿಸಲಾಗಿತ್ತು.
ಈಗ ಮತ್ತೊಂದು ನೋಟಿಫಿಕೇಶನ್ ಹೊರಡಿಸಿರುವ ಸರ್ಕಾರ ಹೀರಲಾಲ್ ಮತ್ತು ಹನುಮಂತಪ್ಪನವರ ವರ್ಗಾವಣೆಯನ್ನು ರದ್ದು ಮಾಡಿ ಆದೇಶಿಸಿದೆ ಈ ಅಚ್ಚರಿಯ ಬೆಳವಣಿಗೆ ಯಾಕೆ ಎಂಬುದು ಅರಿಯದಾಗಿದೆ. ಆದೇಶಿಸಿದ್ದು ಯಾಕೆ ರದ್ದು ಮಾಡಿದ್ದು ಯಾಕೆ ಎಂಬುದು ನಿಗೂಢವಾಗಿದೆ.
Two CCF transfers cancelled within 48 hours