SUDDILIVE || SHIVAMOGGA
ಸಿಇಒ ಮನೆಯ ಅಡುಗೆ ಕೆಲಸದವನಿಂದ ಆತ್ಮಹತ್ಯೆಗೆ ಯತ್ನ-CEO's house cook attempts suicide
ಜಿಲ್ಲಾ ಪಂಚಾಯತ್ ನ ಸಿಇಒ ಅವರ ಮನೆಯ ಅಡುಗೆ ಕೆಲಸ ಮಾಡುತ್ತಿದ್ದ ಸುರೇಶ್ ಎಂಬುವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ. ಈ ಕುರಿತಂತೆ ಸಿಇಒ ಹೇಮಂತ್ ಅವರಿಗೆ ಕರೆ ಮಾಡಿದರೆ ಕರೆಯನ್ನೇ ಸ್ವೀಕರಿಸದೆ ಇರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ.
ಸುರೇಶ್ ರಜೆ ಮೇಲೆ ಹೋಗಿದ್ದಕ್ಕೆನೋಟಿಸ್ ನೀಡಲಾಗಿದ್ದು, ಇದಕ್ಕೆ ಮನನೊಂದು ವಿಷಸೇವಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಮನೆಯಲ್ಲಿದ್ದ ವೇಳೆ ರೌಂಡಪ್ ಸೇವಿಸಲು ಮುಂದಾಗಿರುವುದಾಗಿ ತಿಳಿದು ಬಂದಿದೆ. ಕೆಲವರು ರೌಂಡಪ್ ತೆಗೆದುಕೊಂಡಿರುವುದಾಗಿ ಹೇಳುತ್ತಿದ್ದು ಈ ಬಗ್ಗೆ ಸ್ಪಷ್ಟನೆಗಾಗಿ ಅಧಿಕಾರಿಗಳು ಕರೆ ಸ್ವೀಕರಿಸದೆ ಇರುವುದು ದಿಗಿಲು ಮೂಡಿದೆ.
ಸಧ್ಯಕ್ಕೆ ಮೆಗ್ಗಾನ್ ನ ತುರ್ತು ವಿಭಾಗದಲ್ಲಿರುವ ಪಯಿಸನ್ ವಿಭಾಗದಲ್ಲಿ ಸುರೇಶ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಾಧ್ಯಮದವರನ್ನ ಮಾತನಾಡಿಸಲು ತಡೆಹಿಡಿಯಲಾಗಿದೆ. ಮಾಧ್ಯಮದವರನ್ನ ಹೊರಗಿಟ್ಟು ಪ್ರಕರಣವನ್ನ ಮುಚ್ಚಿ ಹಾಕುವ ಯತ್ನ ನಡೆಸಲಾಗುತ್ಯಿದೆಯಾ ಎಂಬ ಶಂಕೆ ಸಹ ವ್ಯಕ್ತವಾಗುತ್ತಿದೆ.
CEO's house cook attempts suicide