ad

ನಗರ ಜಾತ್ಯಾತೀತ ಜನತಾದಳದಿಂದ ಪ್ರತಿಭಟನೆ-Urban JDS protests against state Congress government's remote governance

SUDDILIVE || SHIVAMOGGA

ನಗರ ಜಾತ್ಯಾತೀತ ಜನತಾದಳದಿಂದ ಪ್ರತಿಭಟನೆ-Urban JDS protests against state Congress government's remote governance

JDS, protest


ರಾಜ್ಯ ಕಾಂಗ್ರೆಸ್ ಸರ್ಕಾರದ ದೂರಾಆಡಳಿತ ಖಂಡಿಸಿ ನಗರ ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆದಿದೆ. ಶನಿವಾರ ಬೆಳಗ್ಗೆ 11:30 ಘಂಟೆಗೆ ಶಿವಮೊಗ್ಗ ಜಿಲ್ಲಾ ಜೆಡಿಎಸ್ ಕಚೇರಿಯಿಂದ  ನಗರಾಧ್ಯಕ್ಷ ದೀಪಕ್ ಸಿಂಗ್ ರವರ ಅಧ್ಯಕ್ಷತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆದಿದೆ.  

ಪ್ರತಿನಿತ್ಯದ ಬೆಲೆ ಏರಿಕೆ, ಸರ್ಕಾರದ ಭ್ರಷ್ಠಾಚರಣ ಹಗರಣ, ಹನಿಟ್ರ್ಯಾಪ್ ಮೊದಲಾದ ರಾಜ್ಯ ಸರ್ಕಾರದ ದುರಾಡಳಿತವನ್ನ ಪ್ರತಿಭಟನಾಕಾರರು ಖಂಡಿಸಿದ್ದಾರೆ. 

ಪ್ರತಿಭಟನೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಪೂರಿಯ ನಾಯಕ್ ರವರು, ನಗರದ ಮಾಜಿ ಶಾಸಕರು ರಾಜ್ಯ ಜೆಡಿಎಸ್ ಉಪಾಧ್ಯಕ್ಷರು ಆದ ಶ್ರೀ ಕೆ ಬಿ ಪ್ರಸನ್ನ ಕುಮಾರ್ ರವರು, ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಡಾ ಕಡಿದಾಳು ಗೋಪಾಲ್ ರವರು ಮತ್ತು ಪಕ್ಷದ ಹಿರಿಯ ಮುಖಂಡರು, ಪಕ್ಷದ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

Urban JDS protests against state Congress government's remote governance

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close