ad

ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಬೇಕಿದೆ-ಯಡಿಯೂರಪ್ಪ-Winds of change need to blow in the state - Yediyurappa

 SUDDILIVE || SHIVAMOGGA

ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಬೇಕಿದೆ-ಯಡಿಯೂರಪ್ಪ-Winds of change need to blow in the state - Yediyurappa

Yeddiyurappa, winds


ಕರ್ನಾಟಕ ರಾಜ್ಯದ ಉದ್ದ ಅಗಲಕ್ಕೆ ಮತ್ತೊಮ್ಮೆ ಓಡಾಟ ನಡೆಸಿ  ಬಿಜೆಪಿಯನ್ನ ಅಧಿಕಾರಕ್ಕೆ ತರುವುದಾಗಿ ಮಾಜಿ ಸಿಎಂ ಯಡಿಯೂರಪ್ಪ ಸಂಕಲ್ಪ ಮಾಡಿದ್ದಾರೆ. 

ಅವರು ನಗರದ ಸರ್ಜಿ ಕನ್ವೆಷನಲ್  ಹಾಲ್ ನಲ್ಲಿ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವ ಸಂಘ ಹಮ್ಮಿಕೊಂಡಿದ್ದ ಬಿಎಸ್ ಯಡಿಯೂರಪ್ಪನವರಿಗೆ ಅಭಿನಂದನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸಬೇಕಿದೆ ಎಂದರು. 

ಒಮ್ಮೆ ಸಂಸದನಾಗಿ ಮತ್ತು ನಾಲ್ಕು ಬಾರಿ ಸಿಎಂ ಆಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟೀದ್ದೀರಿ. ನಾನು ಶಿಕಾರಿಪುರ ಮತ್ತು ಶಿವಮೊಗ್ಗದ ಜನರಿಗೆ ಚಿರ ಋಣಿ ಎಂದ ಅವರು ರಾಜ್ಯದ ಬಹುತೇಕ ಜಲಾಶಯಗಳು ತುಂಬಿ ತುಳುಕುತ್ತಿದೆ. ರೈತ ಗೌರವದಿಂದ ಬದುಕುವ ಸ್ಥಿತಿಯಿದೆ. ರೈತನ ಶ್ರಮಕ್ಕೆ ಬೆಲೆಕಟ್ಟಲು ಆಗೊಲ್ಲ. ಆತನ ಶ್ರಮದ ಕಾರಣದಿಂದ ನಾವು ನೆಮ್ಮದಿ ಜೀವನಕ್ಕೆ ಕಾರಣವಾಗಿದೆ ಎಂದರು. 

ನನಗೆ ಸನ್ಮಾನಿಸಿದ್ದಿರಿ. ಅನೇಕ ಮುತ್ಸದ್ಧಿಗಳು ತಮ್ಮದೆ ಕೊಡುಗೆ ಕೊಟ್ಟೀದ್ದಾರೆ. ಅವರನ್ನ ಬೆನಪಿಸಿಕೊಳ್ಳುವ ಅಗತ್ಯವಿದೆ. ರಾಜ್ಯದಲ್ಲಿ ಪ್ರವಾಸ ಮಾಡಿ ನ್ಯಾಯಕೊಡಿಸುವ ತೃಪ್ತಿಯಿದೆ. ಸಮಾನತೆ ಬ್ರಾತೃತ್ವ ಸನಾನತೆಯಿಂದ ಸಾಗಿಸಯವ ಧರ್ಮವೇ ವೀರ ಶೈವ ಧರ್ಮವಾಗಿದೆ. ನಾವು ಉತ್ತಮ ಸಮಾಜ ಮತ್ತು ವಿಕಸಿತ ಸಮಾಜಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು‌.

ವಿಶ್ವವೇ ನಮ್ಮ ದೇಶದ ಕಡೆ ನೋಡ್ತಾಯಿದೆ.  ಮೋದಿಯನ್ನ‌ ನಾವು ಪ್ರಧಾನಿಯನ್ನಾಗಿ ಮಾಡಿರುವುದೇ ನಮ್ಮ ಸೌಭಾಗ್ಯವಾಗಿದೆ.  ರಾಜ್ಯದ ಯಾವುದೇ ಜಿಲ್ಲೆಗೆ ಹೋದರೆ ಸರ್ವಾಂಗಿಣ ಅಙಿವೃಧಧಿಗಾಗಿ ಶಕ್ತಮೀರಿ ಆ ಜಿಲ್ಲೆಯ ಅಭಿವೃಧಧಿ ಮಾಡಿರುವ ತೃಪ್ತಿಯಿದೆ ಎಂದು ತಿಳಿಸಿದರು.

ಆಗಿನ ಕಾಲದ ರಸ್ತೆಗಳ ಸ್ಥಿತಿಗಳನ್ನ ನೆನಪಿಸಿಕೊಂಡ ಬಿಎಸ್ ವೈ ಅಟಲ್ ಜೀ ಅವರೊಂದಿಗೆ ಓಡಾಡಿದ ಅಂಬಾಸಿಡರ್ ಕಾರನ್ನ ನೆನಪಿಸಿಕೊಂಡರು. ನಮ್ಮ‌ಸರ್ಕಾರವನ್ನ ತಂದು ಅಭಿವೃದ್ಧಿ ಮಾಡಬೇಕಿದೆ ಎಂದರು. 

ಉಪನ್ಯಾಸಕರಾಗಿ ಆಗಮಿಸಿದ್ದ ಪ್ರಾಧ್ಯಾಪಕ ವಿಶ್ವನಾಥ್ ಎಸ್ಎಸ್ಎಲ್ ಸಿ ಮಾರ್ಕ್ಸ್ ಕಾರ್ಡ್ ಕೇವಲ ಜನ್ಮ ದಿನಾಂಕ ತೋರಿಸುವ ಪ್ರಮಾಣಪತ್ರವಾಗಿದೆ, ಆದರೆ ಪಿಯುಸಿ ನಿಮ್ಮ ಜೀವನದ ದಾರಿ ದೀಪವಾಗಲಿದೆ ಎಂದು ತಿಳಿಸಿದರು. 

ವಿದ್ಯಾರ್ಥಿಯನ್ನ ಶಿಕ್ಷಕರಾಗಿ ಮಾಡುವುದೇ ಶಿಕ್ಷಣವಾಗಿದೆ. ಕಲಿತ ಪಾಠವನ್ನ ಮನೆಯಲ್ಲಿ ಮತ್ತೊಮ್ಮೆ ಓದಿ ರೆಕಾರ್ಡ್ ಮಾಡಿಕೊಳ್ಳಬೇಕಿದೆ. ಮುಂದಿನ ಶಿಕ್ಷಣಕ್ಜೆ ಅನುವು ಮಾಡಿಕೊಳ್ಳಬೇಕು. 85% ಬಂದ ವಿದ್ಯಾರ್ಥಿಗಳಿಗೆ 95% ಅಂಕ ಪಡೆದ ಹುಡುಗನನ್ನ ಹೋಲಿಸಿ ಪೋಷಕರು ಹೇಳಿದರೆ ಅದನ್ನ ಬೇಸರ ಪಡೆದುಕೊಳ್ಳಬಾರದು ಎಂದು ಕಿವಿ ಮಾತನಾಡಿದರು. 

Winds of change need to blow in the state - Yediyurappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close