SUDDILIVE || SHIVAMOGGA
ಸಾಗರ| ದುಷ್ಕರ್ಮಿಗಳಿಂದ ಯುವಕನ ಹಲ್ಲೆ - Sagara | Youth attacked by miscreants
ಹೊಸನಗರ ತಾಲೂಕಿನ ಹೆಬ್ಬೇಲು ಗ್ರಾಮದಲ್ಲಿ ಐದು ಜನ ದುಷ್ಕರ್ಮಿಗಳಿಂದ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.
32 ವರ್ಷದ ಸತೀಶ್ ಎಂಬಾತನ ಮೇಲೆ ಕೆಲವು ದುಷ್ಕರ್ಮಿಗಳು ತಲೆಗೆ ಬಲವಾದ ಹಲ್ಲೆ ನಡೆಸಿದ್ದು ತಕ್ಷಣ ಸತೀಶ್ ಸಹೋದರ ಸಾಗರ ಆಸ್ಪತ್ರೆಗೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಯಾಗಿದ್ದು ಪೊಲೀಸರ ತನಿಖೆ ನಂತರ ಹೆಚ್ಚಿನ ಮಾಹಿತಿ ಬರಬೇಕಾಗಿದೆ.
Sagara | Youth attacked by miscreants