SUDDILIVE || SHIVAMOGGA
ಮಾಧವ ಗಾಡ್ಗಿಲ್ ವರದಿ ವಿರುದ್ಧ ಪ್ರತಿಭಟನೆ ನಡೆಸಿದವರು ನಿಜವಾದ ಭಯೋತ್ಪಾದಕರು-ಅಖಿಲೇಶ್ ಚಿಪ್ಪಲಿ-Those protesting against Madhav Gadgil report are the real terrorists - Akhilesh Chippally
ಮಾಧವ ಗಾಡ್ಗಿಲ್ ವರದಿ ವಿರುದ್ಧ ಪ್ರತಿಭಟನೆ ಮಾಡಿದವರು ನಿಜವಾದ ಭಯೋತ್ಪಾದಕರು ಎಂದು ಅಖಿಲೇಶ್ ಚಿಪ್ಪಳಿ ದೂರಿದ್ದಾರೆ.
ಅವರು ಚೇಂಬರ್ ಆಫ್ ಕಾಮರ್ಸ್ ನಲ್ಲಿ ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಅಂದೋಲನ, ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ವತಿಯಿಂದ ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟವಶಿವಮೊಗ್ಗ ಉತ್ತರಕನ್ನಡ ಭಾಗದ ಜನಜಾಗೃತಿ ಸಭೆಯಲ್ಲಿ ಮಾತನಾಡಿದರು.
ಪಶ್ಚಿಮಘಟ್ಟ ಹಾಳಾಗುತ್ತಿದೆ. ಆದರೆ ಏನು ಮಾಡಬೇಕು ಎಂಬುದು ಜನಸಾಮಾನ್ಯರಿಗೆ ಗೊತ್ತಾಗುತ್ತಿಲ್ಲ. 2019 ಕ್ಕೆ ಮುನ್ನೆಲೆಗೆ ತಂದ ಈ ಯೋಜನೆಯ ವೇಳೆ ಯಾರು ಆಡಳಿತದಲ್ಲಿದ್ದರು. ಈಗ ಬೇಕು ಎನ್ನುತ್ತಿರುವುದು ಏಕೆ?ಈ ಯೋಜನೆ ವರ್ಷದಿಂದ ವರ್ಷಕ್ಕೆ 10200 ಕೋಟಿ ಬಜೆಟ್ ನಲ್ಲಿ ತೆಗೆದಿಡಲಾಗಿದೆ. ಕೆಪಿಸಿಗೆ ಯೋಜನೆ ರೂಪಿಸಲು ಪಶ್ಚಿಮಘಟ್ಟವೇ ಬೇಕಾ? ಶರಾವತಿ ನದಿಯನ್ನ ಕೊಲೆ ಮಾಡಿದ್ದೇವೆ. ತಲೆಕೆಳಲೆ ಆಣೆಕಟ್ಟು ಮತ್ತು ಗೇರುಸೊಪ್ಪೆ ಅಣೆಕಟ್ಟು ನಡುವೆ ನೀರನ್ನ ಮತ್ತೆ ಪಂಪ್ ಮಾಡಿ ವಿದ್ಯುತ್ ತಯಾರಿಸುವುದು ಇದರ ಉದ್ದೇಶವಾಗಿದೆ. 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ 2500 ಮೆಗಾವ್ಯಾಟ್ ವಿದ್ಯುತ್ ಕರ್ಚಾಗುತ್ತದೆ. ಇದೊಂದು ನಿರುಪಯುಕ್ತ ಯೋಜನೆ ಎಂದರು.
ಅಧಿಕ ಹಣ ಕರ್ಚಾಗಲಿದ್ದರೂ ಈ ಯೋಜನೆ ಬೇಕು ಎನ್ನಲಾಗುತ್ತಿದೆ. 1960 ರಲ್ಲಿ ಶರಾವತಿ ಅಣೆಕಟ್ಟು ನಿರ್ಮಾಣದ ವೇಳೆ 8300 ಕುಟುಂಬವನ್ನ ಒಕ್ಕಲೆಬ್ಬಿಸಲಾಯಿತು. ಇದರಿಂದ ಲಕ್ಷಾಂತರ ಹಣವನ್ನ ಕೆಪಿಸಿ ದುಡಿದಿದೆ ಸ್ಥಳೀಯರಿಗೆ ಕೆಲಸವಿಲ್ಲ. ಅರಣ್ಯೇತರ ಚಟುವಟಿಕೆಗೆ ನಿರ್ಬಂಧವಿದೆ. ಆದರೆ ನಮ್ಮದೆ ತೆರಿಗೆಹಣದಿಂದ ಸಂಬಳಪಡೆದು ಒತ್ತಡ ಬಂದರೆ ತಡೆದುಕೊಳ್ಳದ ಅಧಿಕಾರಿಗಳಿಂದ ಈ ಯೋಜನೆಗಳು ಜಾರಿಯಾಗುತ್ತಿದೆ ಎಂದು ದೂರಿದರು.
ಶೌಚಾಲಯ ಇಲ್ಲವೆಂದು ಸರ್ಕಾರಕ್ಕೆ ಒಂದು ಪತ್ರ ಬರೆದರೆ ಸಾಕು ಶೌಚಾಲಯ ರೆಡಿಯಾಗುತ್ತದೆ. ಆದರೆ ನಮಗೆ ಯೋಜನೆ ಬೇಡ ಎಙದರೂ, ಯಾಕೆ ಬೇಡ ಎಂಬ ನಿಖರ ಕಾರಣ ನೀಡಿದರೂ ಇದುವರೆಗೆ ಒಂದು ಉತ್ತರ ನೀಡದ ಸರ್ಕಾರ ಮಾದವ ಗಾಡ್ಗಿಲ್ ವರದಿಯನ್ನ ಜಾರಿ ಮಾಡಲಿಲ್ಲ. ತುಮರಿಯಿಂದ ಸಾಗರದ ವರೆಗೆ ಗಾಡ್ಗಿಲ್ ವರದಿ ಬೇಡ ಎಂದು ಪ್ರತಿಭಟಿಸಲಾಯಿತು. ಪ್ರತಿಭಟಿಸುವವರಿಗೆ 522 ಹಾಳೆಯ ವರದಿಯ ಒಂದು ಆಶಾಯವನ್ನೂ ಓದದವರು ಪ್ರತಿಭಟಿಸುತ್ತಾರೆ. ಇವರೆ ನಿಜವಾದ ಭಯೋತ್ಪಾದಕರು, ಇಂತಹ ಯೋಜನೆಗಳ ವಿರುದ್ಧ ಜನಾಗ್ರಹ ಸಭೆ ನಡೆಸಿದರೆ ನಮ್ಮ ಜನಪ್ರತಿನಿಧಿಗಳೆ ಹಾಜರಾಗುವುದಿಲ್ಲ ಎಂದು ದೂರಿದರು.
ಇದು ಇಲ್ಲಿಗೆ ಮುಗಿಯಲ್ಲ. ಶರಾವತಿ ಮುಗಿದರೆ, ವರಾಹಿ ಯೋಜನೆ ಬರುತ್ತೆ. ಚೀನಾದಲ್ಲಿ ಚಂದಿರನ ಬೆಳದಿಂಗಳಲ್ಲಿ ವಿದ್ಯುತ್ ಉತ್ಪಾದಿಸುವ ಪ್ರಯತ್ನ ನಡೆಯುತ್ತಿದೆ. ಇನ್ನೂ ನಾವು ಜಲವಿದ್ಯುತ್ ನ್ನ ನಂಬಿಕೊಂಡು ಅರಣ್ಯವನ್ನಹಾಳು ಮಾಡುತ್ತಿದ್ದೇವೆ. ಹೋಗಲಿ ಬದುಕುವುದಕ್ಕೆ ಮತ್ತು ಸಾಯುವುದಕ್ಕೆ ವಿದ್ಯುತ್ ಎಷ್ಟು ಬೇಕು? ಎಂಬ ಪರಿಕಲ್ಪನೆಯೆ ಜನಪ್ರತಿನಿಧಿಗಳಿಗಾಗಲಿ ಅಥವಾ ಅಧಿಕಾರಿಗಳಿಗಾಗಲಿ ಅಂಕಿಅಂಶಗಳಿಲ್ಲ ಎಂದು ದೂರಿದರು.
ಬ್ಯಾಟರಿ ಎನರ್ಜಿ ಸ್ಟೋರ್ಡ್ವ ಸಿಸ್ಟಮ್ ನಿಂದ ವಿದ್ಯುತ್ ಉತ್ಪಾದಿಸಬಹುದು. ಸೋಲಾರಿಂದ ಸಾಕಷ್ಟು ವಿದ್ಯುತ್ ಉತ್ಪಾದನೆ ಮಾಡಬಹುದು. ಇದರ ಬಗ್ಗೆ ಸರ್ಕಾರಕ್ಕೆ ಚಿಂತನೆಯಿಲ್ಲ. ಅರಣ್ಯ ನಾಶ ಮಾಡುವುದೇ ಇವರ ಗುರಿಯಾಗಿದೆ. ಈ ಯೋಜನೆಯಿಂದಾಗಿ 16000 ಮರ ಕಡಿತಲೆಯಾಗಲಿದೆ. ಇನ್ನೂ ಈ ಯೋಜನೆಗೆ ಕೇಂದ್ರದ ಅನುಮತಿ ದೊರೆತಿದೆ ಎನ್ನಲಾಗಿದೆ. ಆದರೆ ಅನುಮತಿ ಸಿಕ್ಕಿಲ್ಲ, ಅರಣ್ಯ ಕ್ಲಿಯರೆನ್ಸ್ ಇನ್ನೂ ಸಿಕ್ಕಿಲ್ಲ. ಅನುಮತಿಗೂ ಮೊದಲೆ ಒಂದು ಕಂಪನಿಗೆ ಟೆಂಡರ್ ಕೊಡಲು ಮಾತುಕತೆ ನಡೆದಿದೆ. 2017 ರಲ್ಲಿ ಈ ಯೋಜನೆಗೆ 4 ಸಾವಿರ ಕೋಟಿ ಇತ್ತು. 2020 ರಲ್ಲಿ ಐದು ಸಾವಿರ ಕೋಟಿಯಾಯಿತು. 2024 ರಲ್ಲಿ 8000 ಕೋಟಿಯಾಯಿತು. ಈಗ 10200 ಕೋಟಿಯಾಗಿದೆ. ಈ ಪ್ರಾಜೆಕ್ಟ್ ಮುಗಿಯಲು ಕನಿಷ್ಠ ಐದು ವರ್ಷಬೇಕು. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಹಣ ನಿಗದಿಪಡಿಸುತ್ತಿರುವುದೇಕೆ ಎಂದು ವ್ಯಂಗ್ಯವಾಡಿದರು.
ಅಭಿವೃದ್ದಿಯ ಕಲ್ಪನೆಯಲ್ಲಿ ಯಾವುದೇ ಬೇಕು ಯಾವುದೇ ಬೇಡ ಎಂಬುದಿರಬೇಕು. ಶರಾವತಿ ಪಂಪ್ಡ್ ಸ್ಟೋರೇಜ್ ಬೇಡ ಎಂಬುದಕ್ಕೆ ನಮ್ಮಲ್ಲಿ ಹಲವು ಕಾರಣವಿದೆ. ಕೆಪಿಸಿ ಅಧಿಕಾರಿಗಳಿಗೆ ಚರ್ಚೆಗೆ ಬನ್ನಿ, ನಮ್ಮಬಳಿ ನಾಲ್ಕೈದು ಪ್ರಶ್ನೆಯಿದೆ, ಅದಕ್ಕೆ ಉತ್ತರಿಸಿ ಎಂದರೆ ಯಾರೂ ಬರುವುದೇ ಇಲ್ಲ ಎಂದು ದೂರಿದರು.
ಅನಂತ ಹೆಗಡೆ ಆಶೀಸರ ಮಾತನಾಡಿ, ಪಶ್ಚಿಮ ಘಟ್ಟದ ಜೊತೆಗೆ ಬಯಲು ನಾಡಿನಲ್ಲಿ ಜಾಗೃತಿ ಮೂಡಿಸಬೇಕಿದೆ 1987 ರಿಂದ ಹೋರಾಟ ನಡೆದುಕೊಂಡು ಬಂದಿದೆ. ಮಾದವ್ ಗಾಡ್ಗಿಲ್ ನಮ್ಮ ರಾಜ್ಯದಲ್ಲಿ ಕಡಿಮೆ ಅಧ್ಯಾಯನ ಮಾಡಿದ್ದಾರೆ. ಆದರೂ ಜೈವವಿದ್ಯಮಯದ ಬಗ್ಗೆ ತಿಳಿಯಲು ಅವರ ಮಾರ್ಗದರ್ಶ ಅನುಕೂಲವಾಗಿದೆ. ಪಶ್ಚಿಮಘಟ್ಟದಲ್ಲಿ ನಕ್ಸಲ್ ಚಳುವಳಿ ಹುಟ್ಟಿದರೂ ಹಿಂಸಾತ್ಮಕದಿಂದಾಗಿ ಹೋರಾಟ ಕಡಿಮೆಯಾಗಿದೆ. ಆದರೆ ಪಶ್ಚಿಮ ಘಟ್ಟ ಹೋರಾಟ ಇನ್ನೂ ಗಟ್ಟಿಯಾಗಿದೆ ಎಂದರು.
protesting against Madhav Gadgil report are the real terrorists