SUDDILIVE || SHIVAMOGGA
ಸಾಪಟ್ ಮತ್ತು ಕಡೇಕಲ್ ರಾಜು ಬಂಧನ-police arrest saphat and Kadekal raju
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ಸೆನ್ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ : 08-07-2025 ರಂದು ಶಿವಮೊಗ್ಗ ನಗರದ ಹರಿಗೆ ಎಂಆರ್‌ಎಸ್ ಕಾಂಪೌಂಡ್ ಗೆ ಹೊಂದಿಕೊಂಡಂತೆ ಇರುವ ನಿರ್ಮಾಣ ಹಂತದಲ್ಲಿರುವ ವಡ್ಡಿನಕೊಪ್ಪ ರಂಗನಾಥ ಲೇಔಟ್‌ನ ಡಾಂಬರ್ ರಸ್ತೆಯಲ್ಲಿ, ಕೋಳಿಫಾರಂ ಶೆಡ್ ನ ಹತ್ತಿರ. ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ 5 ಕೆಜಿ ಗಾಂಜಾ ಮತ್ತು ಇಬ್ಬರು ಆರೋಪಿಗಳನ್ನ ಸೆರೆ ಹಿಡಿಯಲಾಗಿದೆ.
ಮಾಹಿತಿ ಆಧಾರದ ಮೇರೆಗೆ ಎಸ್ಪಿ ಮಿಥುನ್ ಕುಮಾರ್ ಜಿ. ಕೆ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭುಮರಡ್ಡಿ, ಹಾಗೂ ಕಾರಿಯಪ್ಪ ಎ ಜಿ, ಸೆನ್ ಡಿವೈಎಸ್ಪಿ ಕೃಷ್ಣಮೂರ್ತಿ ಕೆ ರವರ ಮಾರ್ಗದರ್ಶನದಲ್ಲಿ, ಮಂಜುನಾಥ ಪೊಲೀಸ್ ನಿರೀಕ್ಷಕರು ಸಿಇಎನ್ ಕ್ರೈಂ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳಾದ ಶೇಖರ್ ಎಎಸ್ಐ, ಧರ್ಮಾ ನಾಯ್ಕ ಹೆಚ್‌ಸಿ, ಅವನಾಶ ಹೆಚ್‌ಸಿ, ನಾರಾಯಣ ಸ್ವಾಮಿ ಪಿಸಿ, ಪಿರ್ ದೊಸ್ ಅಹಮದ್ ಪಿಸಿ, ರವಿ ಬಿ ಪಿಸಿ, ಆಂಡ್ರ್ಯೂಸ್ ಜೊನ್ಸ್ ಪಿಸಿ, ಪ್ರಮೋದ್ ಎಲ್ ಬಿ ಪಿಸಿ ಮತ್ತು ಸಂಗಮೇಶ ಬಿ ಸಿಪಿಸಿ ತಂಡವು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಹಾಗೂ ಬೊಮ್ಮನ್ ಕಟ್ಟೆ ನಿವಾಸಿ ಎ1. ಕಾರ್ತಿಕ್ ವಿ. @ ಸಾಪಡ್, (21)
ಎ2 ಆರೋಪಿ ಹಾಗೂ ಕಡೇಕಲ್ ನಿವಾಸಿ. ಎನ್ ರಾಜೇಶ್. @ ರಾಜು, (24) ಇಬ್ವರನ್ನ ಬಂಧಿಸಲಾಗಿದೆ,ಆರೋಪಿತರಿಂದ ಅಂದಾಜು ಮೌಲ್ಯ 1,70,000/- ರೂಗಳ 5 ಕೆಜಿ 780 ಗ್ರಾಂ ತೂಕದ ಒಣ ಗಾಂಜಾ ಹಾಗೂ ಒಂದುಬೈಕ್ ನ್ನು ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ನೀಡಲಾಗಿದೆ.
police arrest saphat and Kadekal raju