ad

ಅನಾರೋಗ್ಯದ ವೃದ್ದೆಯ ಕೊರಳನಿಂದ ಮಾಂಗಲ್ಯ ಸರ ಕಿತ್ತುಕೊಂಡು ಹೋದ ಪ್ರಕರಣ-ಆರೋಪಿ ಬಂಧನ-Accused arrested in case of snatching a necklace from a sick elderly woman's neck

 SUDDILIVE || SHIVAMOGGA

ಅನಾರೋಗ್ಯದ ವೃದ್ದೆಯ ಕೊರಳನಿಂದ ಮಾಂಗಲ್ಯ ಸರ ಕಿತ್ತುಕೊಂಡು ಹೋದ ಪ್ರಕರಣ-ಆರೋಪಿ ಬಂಧನ-Accused arrested in case of snatching a necklace from a sick elderly woman's neck

Neck, snatching


ವಿದ್ಯಾನಗರದ ಗಣಪತಿ ಲೇಔಟ್ ನಲ್ಲಿ  ಸೈಟ್ ಕೇಳುವ ನೆಪದಲ್ಲಿ ವೃದ್ಧರ ಮನೆಗೆ ನುಗ್ಗಿ ಅನಾರೋಗ್ಯದ ವೃದ್ಧೆಯ ಕೊರಳಲಿದ್ದ ಮಾಂಗಲ್ಯ ಸರವನ್ನ ಕಿತ್ತುಕೊಂಡು ಪರಾರಿಯಾದ ಆರೋಪಿಗಳನ್ನ ಬಂಧಿಸುವಲ್ಲಿ ಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ. 

ಗಣಪತಿ ಲೇಔಟ್ ನಲ್ಲಿ ನಾಗರಾಜ್ ದಂಪರಿಗಳುವಾಗಿದ್ದು ಸೈಟ್ ಕೇಳುವ ನೆಪದಲ್ಲಿ ಮನೆಯ ಒಳಗೆ ನುಗ್ಗಿ ನಾಗರಾಜ್ ಅವರ ಹೆಂಡತಿಯ ಕುತ್ತಿಗೆಯಲ್ಲಿದ್ದ ಸುಮಾರು 40 ಗ್ರಾಂ 400 ಮಿಲಿ ತೂಕದ ಬಂಗಾರದ ಮಾಂಗಲ್ಯ ಸರವನ್ನು ಸುಲಿಗೆ ಮಾಡಿಕೊಂಡು ಹೋದ ಘಟನೆ ಕೋಟೆ ಪೊಲೀಸ್ ಠಾಣೆಯಲ್ಲಿ ಜುಲೈ 3 ರಂದು ದಾಖಲಾಗಿತ್ತು. 

Chain, snaching

ಪ್ರಕರಣದಲ್ಲಿ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡುವ ಬಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಮಿಥುನ್ ಕುಮಾರ್ ಐ.ಪಿ.ಎಸ್. ರವರ ನಿರ್ದೇಶನದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ. ಅನಿಲ್ ಕುಮಾರ್ ಭೂಮರೆಡ್ಡಿ (ಕಾನೂನು & ಸುವ್ಯವಸ್ಥೆ), ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕೆ.ಜಿ ಕಾರಿಯಪ್ಪ (ಅಪರಾಧ) ಮತ್ತು ಶಿವಮೊಗ್ಗ ಉಪವಿಭಾಗ-ಎ ಡಿ.ವೈಎಸ್.ಪಿ. ರವರಾದ ಶ್ರೀ. ಬಾಬು ಅಂಜನಪ್ಪ ರವರ ಮಾರ್ಗದರ್ಶನದಲ್ಲಿ ಕೋಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ರವರಾದ ಶ್ರೀ.ಹರೀಶ್ ಕೆ ಪಟೇಲ್, ಪಿ.ಎಸ್.ಐರವರಾದ ಶ್ರೀ ಸಂತೋಷ ಕುಮಾರ್ ಬಾಗೋಜಿ ಹಾಗೂ ಸಿಬ್ಬಂದಿಯವರಾದ ಹೆಚ್‌ಸಿ 28, ಶ್ರೀ ವಸಂತ್, ಸಿಪಿಸಿ 1517, ಶ್ರೀ ಕಾಂತರಾಜ್, ಸಿ.ಪಿ.ಸಿ-1310 ಕಿಶೋರ, ಸಿ.ಪಿ.ಸಿ-1620, ಗೊರವರ ಅಂಜಿನಪ್ಪ, ಮಪಿಸಿ 1635, ಶ್ರೀಮತಿ ಜಯಶ್ರೀ, ಸಿಪಿಸಿ 1887 ಶ್ರೀ ಶಿವರಾಜ್, ಸಿಪಿಸಿ-1115 ಪ್ರಕಾಶ್, ಎಎನ್‌ಸಿ ವಿಭಾಗದ ಸಿಬ್ಬಂದಿಗಳಾದ ಶ್ರೀ ಗುರುರಾಜ್.ಜಿ, ಶ್ರೀ ಇಂದ್ರೇಶ್.ಜಿ.ಕೆ ಮತ್ತು ಶ್ರೀ ವಿಜಯ್ ಕುಮಾ‌ರ್.ವಿ ರವರನ್ನು ಒಳಗೊಂಡ ತಂಡವು ದಿ: 12-07-2025 ರಂದು ಭದ್ರಾವತಿ ನಿವಾಸಿಆರೋಪಿತರಾದ 1] ವಸಂತ್ ರಾಜ್ ಬಿನ್ ಗೋಪಾಲಯ್ಯ ಬಂಧನಕ್ಕೊಳಪಡಿಸಲಾಗಿದೆ. 

 ಆರೋಪಿತರಿಂದ 45 ಗ್ರಾಂ 720 ಮಿಲಿ ಬಂಗಾರದ ಮಾಂಗಲ್ಯ ಸರ ಅಂದಾಜು ಬೆಲೆ 4,50,000/- ರೂಗಳು ಮತ್ತು ವಿವೋ ಕಂಪನಿಯ 01 ಮೊಬೈಲ್, ಅಂದಾಜು ಬೆಲೆ 24000/- ಕೃತ್ಯಕ್ಕೆ ಬಳಸಿದ ಸೈಂಡರ್ ಬೈಕ್ ಮೌಲ್ಯ 26,000/- ರೂ ಒಟ್ಟು 5,00,000/- ಮೌಲ್ಯದ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

ಈ ಪ್ರಕರಣವನ್ನು ಪತ್ತೆ ಮಾಡಿದ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೂ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close