ad

ರಾಗಿಗುಡ್ಡದಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಸಿ-ಕರವೇ ಸ್ವಾಭಿಮಾನಿ ಬಳಗ ಆಗ್ರಹ- stop illegal liquor sale in Ragigudda

SUDDILIVE || SHIVAMOGGA

ರಾಗಿಗುಡ್ಡದಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಸಿ-ಕರವೇ ಸ್ವಾಭಿಮಾನಿ ಬಳಗ ಆಗ್ರಹ-stop illegal liquor sale in Ragigudda - Karave Swabhimani Balaga demands


ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ಮಧ್ಯಮ ಬಡ ಕೂಲಿ ಕಾರ್ಮಿಕ ಅತಿ ಹೆಚ್ಚು ವಾಸವಿರುವ ಪ್ರದೇಶವಾಗಿದ್ದು ಇಲ್ಲಿ ಯಾವಾಗಲೂ ಕಾನೂನು ಬಾಹಿರ ಚಟುವಟಿಕೆಗಳು ನಡೆ ಯುತ್ತಿದ್ದು ಪುಂಡರ ಹಾವಳಿ ಕಳ್ಳತನ ಗಲಾಟೆ ಯಾವಾಗಲೂ ನಡೆಯುತ್ತಿರುತ್ತದೆ. ಇದಕ್ಕೆ ಮೂಲ ಕಾರಣವೇ ಅಕ್ರಮ‌ಮದ್ಯ ಮಾರಾಟವೆಂದು ಕರವೇ ಸ್ವಾಭಿಮಾನಿ ಬಳಗ ಇಂದು ಅಬಕಾರಿ ಡಿಸಿಗೆ ಮನವಿ ಸಲ್ಲಿಸಿದೆ.  

ಈ ಪ್ರದೇಶದಲ್ಲಿ ಎಗ್ಗಿಲ್ಲದೆ ರಾಜಾ ರೋಷವಾಗಿ ದಿನದ 24 ಗಂಟೆಗಳ ಕಾಲ ಅಕ್ರಮವಾಗಿ ಮತ್ತು ಅನಧಿಕೃತವಾಗಿ ಮನೆ ಅಂಗಡಿಗಳಲ್ಲಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ.  ಇದನ್ನು ಕುಡಿದ ಪುಂಡರು ಅನಾವಶ್ಯಕ ದೊಂಬಿ ಕಳ್ಳತನದಂತಹ ಕಾಬೂನು ಬಾಹಿರ ಚಟುವಟಿಕೆಯಲ್ಲಿ ತೊಡಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದೆ.  

ಈ ಬಗ್ಗೆ ನಮ್ಮ ಸಂಘಟನೆ ಹಿಂದೆ ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡುವವರ ವಿರುದ್ಧ ಸಂಬಂಧಪಟ್ಟ ಇಲಾಖೆಗೆ ದೂರನ್ನು ನೀಡಿದ್ದರು ಸಹ ಯಾವ ಅಧಿಕಾರಿಗಳು ಅಥವಾ ಅಬಕಾರಿ ಇಲಾಖೆಯ ಅಧಿಕಾರಿಗಳು ಅನಧಿಕೃತ ಮಾರಾಟಗಾರರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿರುವುದಿಲ್ಲ.  ಈ ಮಾರಾಟಗಾರರ ಜೊತೆಗೆ ಅಧಿಕಾರಿಗಳು ಶಾಮಿಲಾಗಿದ್ದಾರ ಎಂಬ ಅನುಮಾನವೂ ಮೂಡುತ್ತಿದೆ.

ರಾಗಿ ಗುಡ್ಡದಲ್ಲಿ ಆಗಿರುವ ಕೆಲ ಅನಾಹುತಗಳಿಗೆ ಈ ಅಕ್ರಮ ಮಧ್ಯದ ಮಾರಾಟವೇ ಕಾರಣ ಈಗಲಾದರೂ ನಿಷ್ಠಾವಂತ ಪೊಲೀಸ್ ಅಧಿಕಾರಿಗಳು ಮತ್ತು ಅಬಕಾರಿ ಇಲಾಖೆಯವರು ಈ ಭಾಗದಲ್ಲಿ ಕರ್ತವ್ಯಕ್ಕೆ ನಿಯೋಜಿಸಿ ಈ ಅಕ್ರಮ ಮಾರಾಟವನ್ನು ನಿಲ್ಲಿಸಿ ಹಾಗೂ ಎಲ್ಲಿ ಗೂಡಂಗಡಿ ಮನೆಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೋ ಅಂತವರನ್ನು ಪತ್ತೆ ಹಚ್ಚಿ ಅಬಕಾರಿ ಇಲಾಖೆಯವರು ಕೂಡಲೇ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಮನವಿಯಲ್ಲಿ ಅಗ್ರಹಿಸಿದೆ. 

ಇಲ್ಲದಿದ್ದಲ್ಲಿ ಈ ಬಗ್ಗೆ ಸಂಘಟನೆ ವಿಭಿನ್ನ ರೀತಿಯ ಪ್ರತಿಭಟನೆಯನ್ನು ಕೇವಲ 15 ದಿನದ ಒಳಗಾಗಿ ಹಮ್ಮಿಕೊಳ್ಳುವುದು ಎಚ್ಚರಿಸಲಾಯಿತು‌ 

ಈ ಪ್ರತಿಭಟನೆಯಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್ಎಸ್ ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ಸಿ ನಗರ ಅಧ್ಯಕ್ಷರಾದ ಜೀವನ ಡಿ ಜಿಲ್ಲಾ ಉಪಾಧ್ಯಕ್ಷರಾದ ವಿಜಯಕುಮಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಮಾಲತೇಶ್. ಸತೀಶ್ ಸಂಘಟನೆ ಮುಖಂಡರಾದ ಸಾಧಿಕ್ ಸತೀಶ್ ಸಾಧಿಕ್ ಪುರ್ಲೆ ಆರತಿ ಕನ್ನಡಪರ ಹೋರಾಟಗಾರರಾದ ಸಂತೋಷ್ ದೇವೇಂದ್ರಪ್ಪ ರಾಮು ಜಾದವ್ ಮಹಮ್ಮದ್ ಆಲಿ ರವಿಕುಮಾರ್ ಶಿವಕುಮಾರ್ ಮುಂತಾದ ಪದಾಧಿಕಾರಿಗಳು ಭಾಗವಹಿಸಿದ್ದರು.

stop illegal liquor sale in Ragigudda

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close