SUDDILIVE || SHIVAMOGGA
ರಾಷ್ಟ್ರ ಭಕ್ತರ ಬಳಗ ಮತ್ತು ಬಿಜೆಪಿಯವರ ಪೌರುಷವನ್ನು ಪ್ರಶ್ನಿಸಿದ ಯೋಗೇಶ್-Yogesh questions the manliness of the Rashtra Bhakta Bal and BJP
ರಾಗಿಗುಡ್ಡದಲ್ಲಿ ಈಗಾಗಲೇ ನಡೆದಿರೋ ಅನಾಹುತಗಳಿಗೆ ಬಿಜೆಪಿ ಮತ್ತು ರಾಷ್ಟ್ರಭಕ್ತರ ಬಳಗ ಬೆಂಕಿ ಸುರಿಯುತ್ತಿದ್ದು, ಇಬ್ಬರಿಗೂ ಅಕ್ರಮ ಮತ್ತು ಪೌರುಷದ ಬಗ್ಗೆ ತಿಳಿ ಹೇಳಿದ ಮೇಲೆ ಪೌರುಷವೇ ಅಡಗಿಹೋಗಿದೆ ಎಂದು ಮಾಜಿ ಕಾರ್ಪೊರೇಟರ್ ಯೋಗೇಶ್ ದೂರಿದ್ದಾರೆ.
ರಾಗಿ ಗುಡ್ಡದಲ್ಲಿ ಇತ್ತೀಚೆಗೆ ಅನ್ಯಕೋಮಿನ ಯುವಕರು ಹಿಂದುಗಳ ವಿಗ್ರಹ ಗಳನ್ನು ಹಾನಿ ಮಾಡಿ ಅನಾಹುತಗೊಳಿಸಿದ್ದರು ಈ ಬಗ್ಗೆ ಹಾನಿಗೊಳಗಾದ ಹಿಂದು ದೇವತೆಗಳ ವಿಗ್ರಹ ಇರುವ ಜಾಗದ ಎದುರಿನ ಮನೆ ಅಕ್ರಮವಾಗಿದೆ ಎಂದು ಕೇಳಿಬಂದಿತ್ತು ಈ ಬಗ್ಗೆ ಎಂಎಲ್ಎ ಹಾಗೂ ಮಾಜಿ ಡಿಸಿಎಂ ಈಶ್ವರಪ್ಪನವರು ಅಕ್ರಮ ಮನೆಯನ್ನು ತೆರವುಗೊಳಿಸಬೇಕೆಂದು ಸ್ಥಳದಲ್ಲಿಯೇ ಪಾಲಿಕೆ ಆಯುಕ್ತರಿಗೆ ಕರೆ ಮಾಡಿದ್ದರು.
ಇದನ್ನು ಟೀಕಿಸಿರುವ ಮಾಜಿ ಕಾರ್ಪೊರೇಟರ್ ಎಚ್ ಸಿ ಯೋಗೇಶ್ ಅಲ್ಲಿ ಅನಧಿಕೃತ ಮನೆಗಳನ್ನು ತೆರೆವುಗೊಳಿಸಲು ಹೋದರೆ ಬಹುತೇಕ ಹಿಂದುಗಳ ಮನೆ ತೆರವುಗೊಂಡಂತಾಗುತ್ತದೆ ಹಾಗಾಗಿ ಬಿಜೆಪಿ ಮತ್ತು ರಾಷ್ಟ್ರಭಕ್ತರ ಬಳಗದ ಕೆ ಎಸ್ ಈಶ್ವರಪ್ಪನವರು ಹುಷಾರಾಗಿ ಹೆಜ್ಜೆ ಇಡುವಂತೆ ತಿಳಿ ಹೇಳಿದ್ದರು. ಅದು ಅಲ್ಲದೆ ಅಕ್ರಮ ಮನೆಯ ಬಗ್ಗೆ ತೆರವು ಗೊಳಿಸಲು ಎರಡು ಪಕ್ಷದವರು ಆಯುಕ್ತರಿಗೆ ಮನವಿ ಮಾಡಿದ್ದರು.
Yogesh questions the manliness of the Rashtra Bhakta Bal and BJP