SUDDILIVE || SHIVAMOGGA
ವೈಜಾಕ್ ರೀತಿಯಲ್ಲೇ ವಿಐಎಸ್ಎಲ್ ಅಭಿವೃದ್ಧಿ-VISL development in the same way as Vizag
ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯನ್ನ ಆಂಧ್ರದ ವೈಜಾಕ್ ಕಾರ್ಖಾನೆಯ ರೀತಿಯಲ್ಲಿಯೇ ಅಭಿವೃದ್ಧಿಗೊಳಿಸುವುದಾಗಿ ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ತಿಳಿಸಿದರು.
ಅವರು ಭದ್ರಾವತಿ ತಾಲೂಕಿನ ಮಲ್ಲಾಪುರದ ಗುದ್ದ ಮಲ್ಲೇಶ್ವರ ದೇವಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗುವ ಮುಂಚೆ ಮಾಧ್ಯಮಗಳಿಗೆ ತಿಳಿಸಿದರು.
ಆಂಧ್ರದಲ್ಲಿ ವೈಜಾಕ್ ಕೈಗಾರಿಕೆಯನ್ನ ವಿಐಎಸ್ಎಲ್ ರೀತಿಯಲ್ಲೇ ನೆನೆಗುದಿಗೆ ಬಿದ್ದಿತ್ತು. ಅದನ್ನ ಹಣಕಾಸು ಸಚಿವೆ ನಿರಗಮಾಲ ಸೀತಾರಾಮ್ ಜೊತೆ ಕೇಂದ್ರ ಸಚಿವ ಕುಮಾರ ಸ್ವಾಮಿಯವರು ಮಾತನಾಡಿ 11½ ಸಾವಿರ ಕೋಟಿ ಹಣ ತಂದು ಅಭಿವೃದ್ಧಿ ಮಾಡಲಾಗಿದೆ. ಅದೇ ರೀತಿಯಲ್ಲಿ ಕುಮಾರ ಸ್ವಾಮಿಯವರು ಹಣಕಾಸು ಸಚಿವೆಯೊಂದಿಗೆ ಮಾತನಾಡಿ ಡಿಪಿಆರ್ ಸಹ ಸಿದ್ದವಾಗಿದೆ. ಅದಕ್ಕೆ ಕಾಯಕಲ್ಪವನ್ನ ಕುಮಾರಸ್ವಾಮಿಯರು ತೆಗೆದುಕೊಳ್ಳಲಿದ್ದಾರೆ ಎಂದರು.
ಹಾಗಾಗಿ ಇದನ್ನ ಶೀಘ್ರದಲ್ಲಿಯೇ ವಿಐಎಸ್ಎಲ್ ಪುನಶ್ಚೃತನಗೊಳಿಸುವುದು ನಿಶ್ಚಿತ ಎಂದ ನಿಖಿಲ್, ಪಕ್ಷದ ಬಲವರ್ಧನೆಗೆ ಶಿವಮೊಗ್ಗ ಜಿಲ್ಲೆಯನ್ನ ಆಯ್ಕೆ ಮಾಡಿಕೊಂಡು ಇಂದು ಪ್ರವಾಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
VISL development in the same way as Vizag
