ad

ಸಿಎಂ ಸಿದ್ದರಾಮಯ್ಯನವರ ಮಾತನ್ನ ಸವಾಲಾಗಿ ಸ್ವೀಕಾರ-ನಿಖಿಲ್ ಕುಮಾರ ಸ್ವಾಮಿ-Accepting CM Siddaramaiah's words as a challenge - Nikhil Kumaraswamy

 SUDDILIVE || SHIVAMOGGA

ಸಿಎಂ ಸಿದ್ದರಾಮಯ್ಯನವರ ಮಾತನ್ನ ಸವಾಲಾಗಿ ಸ್ವೀಕಾರ-ನಿಖಿಲ್ ಕುಮಾರ ಸ್ವಾಮಿ-Accepting CM Siddaramaiah's words as a challenge - Nikhil 

Nikhil, siddaramaiha


ಸಿಎಂ ಸಿದ್ದರಾಮಯ್ಯನವರ ಮಾತನ್ನ ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಸವಾಲಾಗಿ ಸ್ವೀಕರಿಸಿದ್ದಾರೆ.  

ಅವರು ಜಿಲ್ಲೆಯ ಮಲ್ಲಾಪುರದ ಗುಡ್ಡದ ಮಲ್ಲಾಪುರ ದೇವಸ್ಥಾನದ ಭವನದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಉದ್ಘಾಟಿಸಿ ಮಾತನಾಡಿ, ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಜಾತ್ಯಾತೀತ ಜನತಾದಳ 2004 ರಲ್ಲಿ 58 ಜನ ಶಾಸಕರನ್ನ ಗೆದ್ದಿತ್ತು. ಅದಾದ ದಿನಗಳಲ್ಪಿ ಕುಸಿಯಲಾರಂಭಿಸಿತು ಎಂದು ವ್ಯಂಗ್ಯವಾಗಿ ಆಡಿದ್ದರು. ಅದನ್ನ ಸವಾಲಾಗಿ ಸ್ವೀಕರಿಸಿದ್ದೇನೆ. ಹಾಗಾಗಿ ಜನರೊಂದಿಗೆ ಜನತಾದಳ ಅಭಿಯಾನ ಗಟ್ಟಿಗೊಳಿಸಿದ್ದೇವೆ ಎಂದರು. 

ರಾಜ್ಯದಲ್ಲಿ ಅಭಿಯಾನದಲ್ಲಿ ಕನಿಷ್ಠ 50 ಲಕ್ಷ ಜನ ಸದಸದಯರನ್ನಾಗಿ ಮಾಡುವ ಗುರಿ ಹೊಂದಿದ್ದೇನೆ. ನಿಮ್ಮ ಜಿಲ್ಲೆಯಲ್ಲಿ 25-30 ಸಾವಿರ ಜನ ಸದಸ್ಯರನ್ನಾಗಿ ಮಾಡುವ ಗುರಿಹೊಂದಬೇಕಿದೆ. ಇದನ್ನ ಒಂದು ತಿಂಗಳಲ್ಲಿ ಮಾಡಿಕೊಡುವಂತೆ ಮನವಿ ಮಾಡಿಕೊಂಡರು. 

ಸಿಎಂ ಸಿದ್ದರಾಮಯ್ಯನವರ ಸವಾಲು ಸ್ವೀಕರಿಸಲಾಗಿದೆ. ಜಾತ್ಯಾತೀತ ಜನತಾದಳದ ಸದಸ್ಯತ್ವ ಅಭಿಯಾನಕ್ಕೆ ಅಭೂತಪೂರ್ವ ಸ್ಪಂಧನೆ ಪಡೆಯುತ್ತಿದೆಯಾದರೂ ಅದು ಮತಗಳಾಗಿ ಪರಿವರ್ತನೆಯಾಗುತ್ತಿಲ್ಲ. ಇದರ ಬಗ್ಗೆ ಆತ್ಮವಿಮರ್ಶೆ ಮಾಡಿಓಳ್ಳಬೇಕಿದೆ ಎಂದರು. 

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಹೆದುರುತ್ತಿದೆ. ಕಾರಣ ಇವರಿಗೆ ಸೋಲಿನ ಭಯದಿಂದ‌ ಚುನಾವಣೆ ನಡೆಸಲಾಗುತ್ತಿಲ್ಲ. ಆದರೆ 2028 ರಲ್ಲಿ ಜೆಡಿಎಸ್ ಪಕ್ಷ ಅತಿಹೆಚ್ಚು ಸ್ಥಾನಪಡೆದು ಎಲ್ಲಾ ಸವಾಲಿಗೂ ಉತ್ತರ ನೀಡಲಾಗುವುದು ಎಂದರು. 

ದೇವೇಗೌಡರಿಗೆ ಕನಸಿತ್ತು. 1996 ರಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕೊಡಲು ಕನಸುಕಂಡಿದ್ದರು. ಲೋಕಸಭೆಯಲ್ಲಿ ಬಿಲ್ ಪಾಸಾಗಲಿಲ್ಲ. ಅದನ್ನ ಪ್ರಧಾನಿ ಮೋದಿ ನನಸು ಮಾಡಿದ್ದಾರೆ. 

ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಅನುಕೂಲವಾಗಲಿದೆ. ದೇವೇಗೌಡರ ಕನಸನ್ನಮೋದಿ ಈಡೇರಿಸಿದ್ದಾರೆ. ಶಾಸಕಿ ಶಾರದ ಪೂರ್ಯನಾಯ್ಕ ಅವರಿಗೆ ಸಚಿವ ಸ್ಥಾನ ಕೊಡಬೇಕಿದೆ. ಹಳೇ ಮೈಸೂರಿಗೆ ಸೀಮಿತವಾದ ಪಕ್ಷವೆಂದು ಎದುರಾಳಿಗಳು ಹೇಳ್ತಾರೆ. ಪಕ್ಷವನ್ನ ದಡ ಮುಟ್ಟಿಸುವ ಕೆಲಸ ಆಗಬೇಕಿದೆ ಎಂದರು. 

ವಿಐಎಸ್ ಎಲ್ ಪುನಶ್ಚೇತನದ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆಯಿದೆ. ಪಕ್ಕದ ರಾಜ್ಯ ವೈಜಾಕ್ ಸ್ಟೀಲ್ ಪ್ಲಾಂಟ್ ವರ್ಷಗಳಿಂದ ಮುಚ್ಚಿದ ಸ್ಟೀಲ್ ಪ್ಲಾಂಟ್ ಗೆ ಜೀವಕೊಡಲಾಗಿದೆ. ಹಣಕಾಸಿನ ಸಚಿವರೊಂದಿಗೆ ಅನೇಕ ಸಭೆ ನಡೆಸಿ ಕುಮಾರಣ್ಣ ಪುನಶ್ಚೇತನ ಗೊಳಿಸಿದರು.

ಅದೇರೀತಿ ಜಿಲ್ಲೆಯ ಆಸ್ಮಿತೆ ಆದ ವಿಐಎಸ್ಎಲ್ ಕಾರ್ಖಾನೆಯನ್ನ ಪುನಶ್ಚೇತನಗೊಳಿಸಲಾಗುವುದು. ಜಿಲ್ಲೆಯ ಜನ ಬದುಕುಕಟ್ಟಿಕೊಳ್ಳಲು ಕುಮಾರ ಸ್ವಾಮಿ ನಿರ್ಧರಿಸಿದ್ದಾರೆ. ಇದಕ್ಕೆ ಡಿಪಿಆರ್ ತಯಾರಾಗಿದೆ ಅದೇ ರೀತಿಯಲ್ಲೇ 100% ರಷ್ಟು ಹಣ ಒದಗಿಸಲಾಗುತ್ತಿದೆ. ಇದರ ಬಗ್ಗೆ ಸಂಶಯ ಬೇಡ ಎಂದರು. 

ಶಾಸಕಿ ಶಾರದಾ ಪೂರ್ಯನಾಯ್ಕ್ ಮಾತನಾಡಿ, ಅನುದಾನದ ಕೊರತೆಯಿದೆ ತಾವೂ ಸಹ ಅನುದಾನದ ಕೊರತೆಯನ್ನ ಅರ್ಥಮಾಡಿಕೊಂಡಿರುವುದಕ್ಕೆ ಧನ್ಯವಾದಗಳನ್ನ ತಿಳಿಸಿದರು. 

ಕುಮಾರ ಸ್ವಾಮಿ ಅವರಿಗೆ ಪ್ರಧಾನಿ ಮೋದಿ ಜವಬ್ದಾರಿ ನೀಡಿದ್ದಾರೆ. ಅವರು ವಿಐಎಸ್ಎಲ್ ಕಾರ್ಖಾನೆಯ ಪುನಶ್ಚೇತನಗೊಳಿಸಲಿದ್ದಾರೆ. ರಾಜ್ಯ ಸರ್ಕಾರವೂ ಕಾರ್ಖಾನೆಯ ಪುನಶ್ಚೇತನಗೊಳಿಸುತ್ತಿರುವ ಬಗ್ಗೆ ಮಾತನಾಡಬೇಕಿತ್ತು. ಮಾತನಾಡಿಲ್ಲ. ಅವರು ಮಾತನಾಡುತ್ತಾರೋ ಬಿಡ್ತಾರೋಗೊತ್ತಿಲ್ಲ.  ಕುಮಾರ ಸ್ವಾಮಿ ಅವರು ಮಾತ್ರ ಪುನಶ್ಚೇತನಗೊಳಿಸಲಿದ್ದಾರೆ ಎಂದರು. 

ಎಂಎಲ್ ಸಿ ಭೋಜೇಗೌಡ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರು ಶಾಸಕಿ ಶಾರದಾಪೂರ್ಯನಾಯ್ಕ್ ಅವರನ್ನ ಪಕ್ಷದಿಂದ ಕರೆದೊಯ್ಯುವ ಪ್ರಯತ್ನ ನಡೆದಿತ್ತು. ಶಾಸಕಿಯವರು ಕುಮಾರಣ್ಣನ ಮೇಲೆ ಇದ್ದ ಕಾರಣ ಹೋಗಲಿಲ್ಲ. 2028 ರಲ್ಲಿ ಅವರು ಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು. 

ಎನ್ ಡಿಎಯನ್ನ ಅಧಿಕಾರಕ್ಕೆ ತರಲಾಗುವುದು. ಪಕ್ಷ ಸಧೃಢವಾಗಿದೆ ಪಕ್ಷ ಎಲ್ಲಿದೆ ಎಂಬುವರಿಗೆ ಮುಂದಿನ ದಿನಗಳಲ್ಲಿ ಉತ್ತರ ಕೊಡೋಣ ಎಂದರು. 

Accepting CM Siddaramaiah's words as a challenge - Nikhil Kumaraswamy

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close