SUDDILIVE || SHIVAMOGGA
ಪುಟ್ಟಪ್ಪನ ಕ್ಯಾಂಪ್ ನಲ್ಲಿ ಲಾಂಗು ಹಿಡಿದು ಓಡಾಟ-Walking with a long stick at Puttappa's camp
ಹೊರವಲಯದ ವಡ್ಡಿನಕೊಪ್ಪದ ಪುಟ್ಟಪ್ಪನ ಕ್ಯಾಂಪ್ ನಲ್ಲಿ ಕೆಲ ಯುವಕರ ಗುಂಪು ಮುಖಕ್ಕೆ ಮುಸುಕು ಧರಿಸಿ ಲಾಂಗ್ ಹಿಡಿದು ಓಡಾಡಿದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾರ್ವಜನಿಕರನ್ನ ಭಯಗೊಳಿಸುವಂತೆ ಆತಂಕ ಮೂಡಿಸಿದೆ.
ಸ್ಥಳಕ್ಕೆ ತುಂಗ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅರೆಬರೆ ಬಟ್ಟೆಯಲ್ಲಿ ಗುಂಪಾಗಿ ಓಡಾಡಿದ ಯುವಕರು ಕೆಲವರು ಮುಸುಕು ಧರಿಸಿ ಓಡಾಡಿದ್ದಾರೆ. ಕೆಲವರಲ್ಲಿ ಬ್ಯಾಗ್ ಗಳನ್ನ ಹಾಕಿಕೊಂಡಿ ಓಡಾಡಿದ್ದಾರೆ.
ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ ಡಾ.ಚಂದ್ರಪ್ಪ ಅವರು, ಇಲ್ಲಿಯಾವುದೇ ಪ್ರಾಣಹಾನಿಯಾಗಿಲ್ಲ. ಈಲ್ಲಿ 150 ಜನ ವಾಸವಾಗಿದ್ದಾರೆ. 10 ಮನೆಗಳಿವೆ. ಒಂದೇ ರಸ್ತೆಯಲ್ಲಿ ಎರಡು ಮೂರು ಭಾರಿ ಆಗಂತುಕರು ಓಡಾಡಿರುವುದು ಆತಂಕ ಮೂಡಿಸಿದೆ ಎಂದು ಹೇಳಿದ್ದಾರೆ.
Walking with a long stick at Puttappa's camp