SUDDILIVE || SHIVAMOGGA
ಒಂದೇ ಏಟಿಗೆ 41 ಡಿಪ್ಸ್-ಹೇಗಿತ್ತು ಸಚಿವ ಸಂತೋಷ್ ಲಾಡ್ ಅವರ ಜಬರ್ ದಸ್ತ್ ವ್ಯಾಯಾಮ-41 dips in one go - how was Minister Santosh Lad's Jabar Dast exercise?
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶಿವಮೊಗ್ಗಕ್ಕೆ ಆಗಮಿಸಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಇಂದು ಬೆಳಗ್ಗೆ ಪೊಲೀಸರೊಂದಿಗೆ ಪುಷ್ ಅಪ್ ಸ್ಪರ್ಧೆ ನಡೆಸಿದರು. ಒಂದೇ ಬಾರಿ 41 ಪುಷ್ ಅಪ್‌ಗಳನ್ನು (Push Ups) ಮಾಡಿ, ಪೊಲೀಸರ ಹುಬ್ಬೇರುವಂತೆ ಮಾಡಿದರು.
ಭಾನುವಾರ ಸಂಜೆಯೇ ಶಿವಮೊಗ್ಗಕ್ಕೆ ಆಗಮಿಸಿದ್ದ ಸಚಿವ ಸಂತೋಷ್ ಲಾಡ್ ನಗರದ ಪ್ರವಾಸಿ ಮಂದಿರದಲ್ಲಿ ತಂಗಿದ್ದರು. ಬೆಳಗ್ಗೆ ವಾಯು ವಿಹಾರಕ್ಕೆ ತೆರಳಿದ್ದ ಸಂದರ್ಭ ಹೆಲಿಪ್ಯಾಡ್‌ನಲ್ಲಿ ಪೊಲೀಸ್ ಸಿಬ್ಬಂದಿ ಜೊತೆಗೆ ಪುಷ್ ಅಪ್ ಸ್ಪರ್ಧೆಗಿಳಿದರು.
ಪೊಲೀಸ್ ಸಿಬ್ಬಂದಿಗಿಂತಲು ಹೆಚ್ಚಿನ ಪುಷ್ ಅಪ್ ಹೊಡೆದು ತಮ್ಮ ಶಕ್ತಿ ಪ್ರದರ್ಶಿಸಿದರು. ಸಚಿವ ಎನರ್ಜಿಗೆ ಕಾಂಗ್ರೆಸ್ ಮುಖಂಡರು ಕೂಡ ಬೆರಗಾದರು.
41 dips in one go - how was Minister Santosh Lad's Jabar Dast exercise?