ad

ನಾಳೆ KSRTC ನೌಕರರ ಮುಷ್ಕರ ನಿಚ್ಚಳ! ಪ್ರಯಾಣಿಕರೆ ಹುಷಾರ್- KSRTC employees' strike is clear tomorrow! Commuters beware

SUDDILIVE || SHIVAMOGGA

ನಾಳೆ KSRTC ನೌಕರರ ಮುಷ್ಕರ ನಿಚ್ಚಳ! ಪ್ರಯಾಣಿಕರೆ ಹುಷಾರ್-KSRTC employees' strike is clear tomorrow! Commuters beware

Strike, KSRTC

ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದ ಹಿನ್ನೆಲೆ ಮಂಗಳವಾರದಿಂದ ರಾಜ್ಯದಲ್ಲಿ KSRTC ನೌಕರರ ಮುಷ್ಕರ ನಡೆಯಲಿದೆ ಎಂದು ಜಂಟಿ ಕ್ರಿಯಾ ಸಮಿತಿ ಘೋಷಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ನಾಳೆ ಬಳೆಗ್ಗೆ 6 ಗಂಟೆಯಿಂದಲೆ ಸರ್ಕಾರಿ ಬಸ್ಸುಗಳು ರಸ್ತೆಗಿಳಿಯುವುದಿಲ್ಲ ಎಂದು ನೌಕರರು ತಿಳಿಸಿದ್ದಾರೆ.

ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ನೌಕರರು ಆಗಸ್ಟ್‌ 5ರಿಂದ ಮಷ್ಕರಕ್ಕೆ ಆರಂಭವಾಗಲಿದೆ.

ಶಿವಮೊಗ್ಗ ವಿಭಾಗದಲ್ಲಿಯು ಸಾರಿಗೆ ನೌಕರರು ಮುಷ್ಕರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಸುದ್ದಿಲೈವ್ ಗೆ  ಜೊತೆಗೆ ಮಾತನಾಡಿದ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಮಹಾದೇವು, ರಾಜ್ಯ ಸಮಿತಿಯ ಸೂಚನೆಯಂತೆ ಬೆಳಗ್ಗೆ 6 ಗಂಟೆಯಿಂದಲೇ ಹೋರಾಟ ಆರಂಭವಾಗಲಿದೆ ಎಂದರು.  

ನಮ್ಮ ಹೋರಾಟದಲ್ಲಿ ಬದಲಾವಣೆಯಿಲ್ಲ. ಕರ್ತವ್ಯಕ್ಕೆ ಗೈರು ಹಾಕಿ ವಾಹನಗಳನ್ನ ಚಲಾಯಿಸದೆ ಪ್ರತಿಭಟನೆ ನಡೆಯಲಿದೆ ಎಂದರು.

KSRTC employees' strike is clear tomorrow! Commuters beware

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close