ad

ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವು-A young man injured in an accident has died

SUDDILIVE || SORABA

ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವು-A young man injured in an accident has died.

Accident, injured

ತಾಲೂಕಿನ ಉಳವಿ ಸಮೀಪದ ದೂಗೂರಿನಲ್ಲಿ ನಡೆದ ಕಾರು ಮತ್ತು ಬೈಕ್ ನಡುವೆ ಬುಧವಾರ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದಾನೆ. 


ತಾಲೂಕಿನ ಗೆಂಡ್ಲಾ ಹೊಸೂರು ಗ್ರಾಮದ ಸುನೀಲ್ (23) ಮೃತ ಬೈಕ್ ಸವಾರ. ಉಳವಿಯಿಂದ ಸಾಗರದ ಕಡೆ ತೆರಳುತ್ತಿದ್ದ ಕಾರು ಮತ್ತು ಸಾಗರದಿಂದ ಸೊರಬದ ಕಡೆ ತೆರಳುತ್ತಿದ್ದ ಬೈಕ್ ನಡುವೆ ದೂಗೂರಿನ ಈಶ್ವರ ದೇವಸ್ಥಾನದ ಬಳಿ ಅಪಘಾತವಾಗಿತ್ತು. ಪರಿಣಾಮ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದು, ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದಾನೆ. ಸುನೀಲ್ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. 

ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A young man injured in an accident has died.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close