SUDDILIVE || SHIVAMOGGA
ಮದುವೆಗೆ ತಿರಸ್ಕಾರಕ್ಕೊಳಗಾದ ಯುವಕನದ ಆತ್ಮಹತ್ಯೆಗೆ ಯತ್ನ?A young man who was rejected for marriage attempted suicide?
ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಯುವಕನೋರ್ವ ಬ್ಲೇಡಿನಿಂದ ಶಿವಮೊಗ್ಗದ ಪೊಲೀಸ್ ಚೌಕಿಯ ಬಳಿ ನಡೆದಿದೆ. ಬ್ಲೇಡ್ ನಲ್ಲಿ ಕತ್ತು ಕುಯ್ದಿಕೊಂಡ ಯುವಕನನ್ನ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ.
ಕಲ್ಯಾಣ ಮಂದಿರದಲ್ಲಿ ಕೆಲಸ ಮಾಡುವ 19 ವರ್ಷದ ಯುವತಿಗೆ ಬೆಂಗಳೂರಿನ ಮಣಿ (25) ವಯಸ್ಸಿನ ಬೆಂಗಳೂರಿನ ನಿವಾಸಿಗೆ ಇನ್ ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿದೆ. ಎರಡು ವರ್ಷ ಪರಿಚಯವಾಗಿ ಮದುವೆ ಹಂತಕ್ಕೆ ಬಂದಿದೆ. ಯಾವಾಗ ಯುವಕ ವ್ಯಸನಿ ಎಂದು ಗೊತ್ತಾಗುತ್ತೆ ಆಗ ಯುವತಿ ಮದುವೆಗೆ ನಿರಾಕರಿಸಿದ್ದಾಳೆ.
ಮಣಿ ಇಂದು ಪೋಲೀಸ್ ಚೌಕಿ ಬಳಿ ಬ್ಲೇಡು ತೆಗೆದುಕೊಂಡು ಕೊಯ್ದುಕೊಂಡಿದ್ದಾನೆ. ಯುವತಿ ಒಂದು ವರ್ಷದಿಂದ ತಿರಸ್ಕರಿಸಿದ್ದಕ್ಕೆ ನಾನು ಕೊಟ್ಟ ಹಣಕೊಡು ಎಂದು ಪೀಡಿಸಿದ್ದಾನೆ. ನಾವೇ ಎಂಜಲು ಆಯ್ದುಕೊಂಡು ಬದುಕುವವರು ಎಂದುಹೇಳಿದ್ದಾರೆ. ಇಂದು ಪೊಲೀಸ್ ಚೌಕಿಯ ಬಳಿ ಬ್ಲೇಡ್ ನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ಮಾಡಿದ್ದಾನೆ.
ತಕ್ಷಣವೇ ಆತನನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಯುವಕನ ಪ್ರೀತಿಯ ಹುಚ್ಚಾಟದ ಬಗ್ಗೆ ಹಲವು ಬಾರಿ ಪೊಲೀಸ್ ಠಾಣೆಗೆ ಹೋದರು ಪೊಲೀಸರು ಆತನ ವಿರುದ್ಧ ಕ್ರಮ ಜರುಗಿಸಲು ವಿಫಲರಾಗಿದ್ದಾರೆ ಎಂದು ಯುವತಿ ಮಾಧ್ಯಮದ ಎದುರು ದೂರಿದ್ದಾರೆ.
ಯುವಕ ಎಸ್ಕೇಪ್
ಯುವಕ ಬ್ಲೇಡ್ ನಲ್ಲಿ ಕೊಯ್ದುಕೊಂಡು ತುರ್ತುವಿಭಾಗದಲ್ಲಿ ಒದ್ದಾಡುತ್ತಿದ್ದು ತಕ್ಷಣವೇ ಮಾಧ್ಯಮದ ಎದುರು ಪ್ರತ್ಯಕ್ಷನಾಗಿ ಹೇಳಿಕೆ ಕೊಟ್ಟಿದ್ದಾನೆ. ಹೇಳಿಕೆಕೊಟ್ಟು ಅಲ್ಲಿ ಹೊರಬಿದ್ದಿದ್ದಾನೆ. ತೀವ್ರವಾಗಿ ಗಾಯಗೊಳ್ಳದ ಯುವಕ ಇದು ಮೂರನೇ ಬಾರಿ ಈ ರೀತಿ ಹೆದರಿಸುತ್ತಿರುವುದಾಗಿ ಯುವತಿ ಆರೋಪಿಸಿದ್ದಾಳೆ.
A young man who was rejected for marriage attempted suicide?

