ad

ಶಾಲೆಗೆ ಬ್ಯಾಂಡ್ ಸೆಟ್ (ಘೋಷ್ ) ಕೊಡುಗೆ- Band set (Ghosh) donated to the school

 SUDDILIVE || SHIVAMOGGA

ಶಾಲೆಗೆ ಬ್ಯಾಂಡ್ ಸೆಟ್ (ಘೋಷ್ ) ಕೊಡುಗೆ-Band set (Ghosh) donated to the school

ದಿ.ಅಮ್ಮಯಮ್ಮ ಗೋಪಾಲಗೌಡ ನಂಟೂರು ಇವರ ಪುಣ್ಯ ಸಂಸ್ಮರಣೆ ಪ್ರಯುಕ್ತ  ಮಂಜುನಾಥ್, ಶ್ರೀ ಶ್ರೀಕಂಠ ಹಾಗೂ ಮಲೆನಾಡು ಮಿತ್ರ ವೃಂದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಧನುಷ್ ಎಂಟರ್ಪ್ರೈಸಸ್ ಬೆಂಗಳೂರು ಇದರ ಮಾಲಿಕರಾದ ಶ್ರೀ ಸುಬ್ಬಯ್ಯ ಇವರುಗಳು  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೆತಾಳು ಇಲ್ಲಿಗೆ ಘೋಷ್ ಪರಿಕರಗಳನ್ನು ಕೊಡುಗೆಯಾಗಿ ನೀಡಿದರು. 

ಈ ಪರಿಕರಗಳ ಮೊತ್ತ ಅಂದಾಜು ರೂ.30,000 ಆಗಿರುತ್ತದೆ


ಶಾಲೆಗೆ ಅತ್ಯಗತ್ಯ ಬೇಕಾಗಿದ್ದ ಬೇಸ್ ಡ್ರಂ, ಸೈಡ್ ಡ್ರಂ,ಬ್ಯೂಗಲ್,ಕೊಳಲು ಮುಂತಾದ ಘೋಷ್ ಸಾಮಗ್ರಿಗಳನ್ನು ಉಚಿತವಾಗಿ ಕೊಡುಗೆ ನೀಡುವ ಮೂಲಕ ದಿ.ಅಮ್ಮಯಮ್ಮ ಇವರ  ಪುಣ್ಯ ಸಂಸ್ಮರಣೆಯನ್ನು  ಕುಟುಂಬಸ್ಥರು ಶಾಲೆಯಲ್ಲಿ ಆಚರಿಸಿಕೊಂಡರು.

ಕುಟುಂಬದವರ ಈ ಸಾರ್ಥಕ ಕೊಡುಗೆಗೆ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಹಾಗೂ ಮುಖ್ಯ ಶಿಕ್ಷಕರು ಸಹಶಿಕ್ಷಕರು ಹಾಗೂ ಶಾಲೆಯ ಗೌರವ ಶಿಕ್ಷಕರಾದ ಸುರೇಶ್ ಎನ್ ಕಲ್ಕೆರೆ ಇತಿಹಾಸ ತಜ್ಞರು 

ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದರು.

 ಜ್ಞಾನ ಭಾರತಿ ಶಾಲೆ ಶೃಂಗೇರಿ ಇಲ್ಲಿನ ಮುಖ್ಯ ಶಿಕ್ಷಕರಾದ ಶಂಕರ್ ಗುರೂಜಿ ಹಾಗೂ ಶೃಂಗೇರಿ ತಾಲೂಕು ಸಂಘ ಚಾಲಕರಾದ  ವಿಶ್ವನಾಥ್ ಇವರು ಶಾಲಾ ಮಕ್ಕಳಿಗೆ ಘೋಷ್ ಪರಿಕರಗಳನ್ನು ನುಡಿಸುವುದರ ಬಗೆಗಿನ ಕಲಿಕಾ ಮಾಹಿತಿ ನೀಡಿ ಬ್ಯಾಂಡ್ ಸೆಟ್ ಗಳ ನುಡಿಸುವುದನ್ನು ಕಲಿಸಿಕೊಡಲಾಯಿತು..

Band set (Ghosh) donated to the school

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close