ad

ಆ.15 ಮತ್ತು 16 ರಂದು ಆಡಿಕೃತ್ತಿಕೆ- Aadikruthike on Agust 15th and 16th

 SUDDILIVE || SHIVAMOGGA

ಆ.15 ಮತ್ತು 16 ರಂದು ಆಡಿಕೃತ್ತಿಕೆ-Aadikruthike on Agust 15th and 16th

Aadi, Kruthike

ಗುಡ್ಡೇಕಲ್‌ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಆಗಸ್ಟ್‌ 15 ಮತ್ತು 16ರಂದು ಆಡಿಕೃತ್ತಿಕೆ ಜಾತ್ರೆ ನಡೆಯಲಿದೆ. ಈ ಬಾರಿ ಜಾತ್ರೆಯಲ್ಲಿ ಹಲವು ವಿಶೇಷತೆ ಇರಲಿದೆ ಎಂದು ದೇಗುಲ ಟ್ರಸ್ಟ್‌ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಪಿ.ರಘು ಕುಮಾರ್‌, ಆ.15ರಂದು ಭರಣಿ, ಆ.16ರಂದು ಆಡಿಕೃತ್ತಿಕೆ ಜಾತ್ರೆ ನಡೆಯಲಿದೆ.


ಹೊರ ಜಿಲ್ಲೆಗಳಿಂದಲೂ ಭಕ್ತರು ಹರಕೆ‌ ತೀರಿಸಲು ಬರುತ್ತಾರೆ. ಇದಕ್ಕೆ ಎಲ್ಲ ರೀತಿಯಿಂದಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹರಕೆ ತೀರಿಸಲು ಕಾವಡಿ ಹೊತ್ತವರು ಫ್ಲೈ ಓವರ್‌ ಮೂಲಕ ದೇವಸ್ಥಾನಕ್ಕೆ ಬರಬಹುದು. ಸ್ವಾಮಿಯ ಪ್ರದಕ್ಷಿಣೆ ಮಾಡಿ ಕಾವಡಿ ಸಮರ್ಪಿಸಿ ತೆರಳಬೇಕು. ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಸಹಕಾರದಿಂದ ಅಗತ್ಯ ಸಿದ್ಧತೆ ಮಾಡಲಾಗಿದೆ ಎಂದು ರಘು ಕುಮಾರ್‌ ತಿಳಿಸಿದರು.

ಗುಡ್ಡೇಕಲ್‌ ದೇವಸ್ಥಾನದ ಆವರಣದಲ್ಲಿ 151 ಅಡಿ ಎತ್ತರದ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ವಿಗ್ರಹ ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ವಿಮಾನಯಾನ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಲಭಿಸಿದೆ ಎಂದು ರಾಜಶೇಖರಪ್ಪ ತಿಳಿಸಿದರು.

ಟ್ರಸ್ಟೀ ಡಿ.ರಾಜಶೇಖರಪ್ಪ ಮಾತನಾಡಿ,  ಸಂಸದ  ಅವರ ಪ್ರಯತ್ನದಿಂದ ಕೇಂದ್ರ ಪ್ರವಾಸೋದ್ಯಮ ಇಲಾಖೆಯಿಂದ ₹6 ಕೋಟಿ ಅನುದಾನ ಮಂಜೂರಾಗಿದೆ. ಹಣ ಲಭಿಸುತ್ತಿದ್ದಂತೆ ಕೆಲಸ ಆರಂಭವಾಗಲಿದೆ. ರಾಜ್ಯ ಸರ್ಕಾರದಿಂದಲು ₹6 ಕೋಟಿ ಅನುದಾನದ ಭರವಸೆ ಸಿಕ್ಕಿದೆ. ಮೂರ್ತಿ ಸ್ಥಾಪನೆಗೆ ಒಟ್ಟು ₹20 ಕೋಟಿ ಅನುದಾನ ಬೇಕಿದೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಲೋಕೇಶ್‌, ಎಂ.ಪಿ.ಸಂಪತ್‌, ವಿಶ್ವನಾಥ್‌, ಮಾಜಿ ಮೇಯರ್ ಶಿವಕುಮಾರ್‌ ಸೇರಿದಂತೆ ಹಲವರು ಇದ್ದರು.

Aadikruthike on Agust 15th and 16th

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close