SUDDILIVE || SHIVAMOGGA
74 ರಲ್ಲೂ ಮಿಂಚಿದ ನಟ ರಜನಿಕಾಂತ್-Actor Rajinikanth, who excelled in 74
ನಿರ್ದೇಶಕ ಲೋಕೇಶ್ ಕನಗರಜ್ ನಿರ್ಮಾಣದ ಕೂಲಿ ಚಲನಚಿತ್ರ ಅಬ್ಬರಿಸುತ್ತಿದೆ. ಫೈಟ್ ಗಳಲ್ಲಿ ಮಲ್ಟಿ ಸ್ಟಾರ್ ಗಳ ಬಳಕೆ ಮಾಡಿಕೊಂಡು ಸಿನಿಮಾದ ಅದ್ದೂರಿಯನ್ನು ಎತ್ತಿ ಹಿಡಿಯಲಾಗಿದೆ. ರಜನಿಕಾಂತ್ ನಟನೆಯ ಜೈಲರ್ ಮತ್ತು ಲೋಕೇಶ್ ನಿರ್ದೇಶನದ ವಿಕ್ರಂ ಮಾದರಿಯಲ್ಲಿಯೇ ಕೂಲಿ ಚಿತ್ರದ ಸಾಗಿದೆ. ಕಥೆಯನ್ನು ಎಳೆದಾಡಿ ಅಭಿಮಾನಿಗಳನ್ನು ಖುಷಿ ಪಡಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದಂತೆ ಕಂಡುಬರುತ್ತದೆ.
ದೇವ ದೇವರಾಜ್(ರಜನಿಕಾಂತ್) ದೇವ ಮ್ಯಾನ್ಷನ್ ನ ಮಾಲಿಕ ಈತನು ಸ್ನೇಹಿತ ರಾಜಶೇಖರ್ ನಿಧನ ಹೊಂದಿದಾಗ ಈ ಸಾವು ಸಹಜವಲ್ಲ ಇದೊಂದು ಕೊಲೆಂದು ದೇವನಿಗೆ ತಿಳಿಯುತ್ತದೆ. ಸ್ನೇಹಿತನನ್ನು ಕೊಂದವರ ವಿರುದ್ಧ ಸೇಡು ತೀರಿಸಿಕೊಳ್ಳಲು ರಾಜಶೇಖರ್ ಮಗಳ ಜೊತೆಗೂಡಿ ದೇವ ಯೋಜನೆಯೊಙದನ್ನ ರೂಪಿಸುತ್ತಾನೆ. ಹೀಗೆ ವಿಶಾಖಪಟ್ಟಣದ ಬಂದಿರಿನಲ್ಲಿರುವ 'ಕಿಂಗ್ ಪಿನ್' ಕಂಪನಿ ಪ್ರವೇಶಿಸುವ ದೇವನಿಗೆ ಆ ಕಂಪನಿಯ ಮಾಲೀಕ ಸೈಮನ್ (ನಾಗಾರ್ಜುನ) ಹಾಗೂ ದಯಾಳ್ (ಸೌಬಿನ್) ಎದುರಾಗುತ್ತಾರೆ. ಇಲ್ಲಿಂದ ಕಥೆ ತೆಗೆದುಕೊಳ್ಳುತ್ತದೆ ದೇವನ 30 ವರ್ಷಗಳ ಹಿಂದಿನ ಕೂಲಿ ಪ್ರಪಂಚವು ಇಲ್ಲಿ ಅನಾವರಣಗೊಳ್ಳುತ್ತದೆ.
ಹಿಂದೆ ಹಲವು ಸಿನಿಮಾಗಳಲ್ಲಿ ಬಂದಂತಹ ಅಂಗಾಂಗ ಮಾರಾಟ ಮಾಫಿಯಾ ಕಥೆಯನ್ನು ಇದು ಹೊಂದಿದೆ. ಕೈ ವಿಕ್ರಂ ಮಾಸ್ಟರ್ ನಲ್ಲಿ ಇರುವಂತಹ ಗಟ್ಟಿಯಾದ ಕಥೆಯ ಕೊರತೆ ಕೂಲಿಯಲ್ಲಿದೆ. 2 ಗಂಟೆ 50 ನಿಮಿಷದ ಈ ಸಿನಿಮಾದಲ್ಲಿ ರಜನಿ ಅಬ್ಬರಗಳಿಲ್ಲ. 35-40 ವರ್ಷದ ರಜಿನಿಯನ್ನ ಇಲ್ಲಿ ಕಾಣಬಹುದಾಗಿದೆ. ಅನಗತ್ಯವಾದ ಸೀನುಗಳಿದ್ದರೂ ರಜನಿಯ ಅಭಿಮಾನಿಗಳಿಗೆ ಸಿನಿಮಾ ಖುಷಿ ನೀಡಿದೆ.
ನಾಗಾರ್ಜುನ ಮತ್ತು ಸೌಬಿನ್ ಶಾಹಿರ್, ಶೃತಿ ಹಾಸನ್, ಸತ್ಯರಾಜ್, ಉಪೇಂದ್ರ, ಅಮೀರ್ ಖಾನ್ ಮೊದಲಾದವರನ್ನ ಹಾಕಿಕೊಂಡು ಸಿನಿಮಾ ನಿರ್ಮಿಸಲಾಗಿದೆ. ಸಿನಿಮಾದ ಕಾಸ್ಟ್ಯೂಮ್ ಗಳು ಸಹ ಪ್ರೇಕ್ಷಕರನ್ನ ಸೆಳೆಯುತ್ತದೆ. ಸಿನಿಮಾದ ಬಹುತೇಕ ಸೀನುಗಳು ಕತ್ತಲಿನಲ್ಲಿ ಸಾಗುತ್ತದೆ. ಮೋನಿಕಾ ಹಾಡಿನಲ್ಲಿ ಸೌಬಿನ್ ಅವರ ನೃತ್ಯ ಗಮನಸೆಳೆದಿದೆ. ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ರಜನಿಕಾಂತ್ ಅವರಿಗಾಗಿಯೇ ಈ ಸಿನಿಮಾ ಮಾಡಿರುವುದರಿಂದ 74ರ ರಜನಿ ಪ್ರತಿ ಫ್ರೇಮ್ನಲ್ಲೂ ಮಿಂಚಿದ್ದಾರೆ. ಡ್ಯಾನ್ಸ್ ಫೈಟ್ ಡೈಲಾಗ್ ಭಾವನಾತ್ಮಕ ಗಳ ದೃಶ್ಯಗಳು ಹೀಗೆ ರಜಿನಿ ಅಭಿಮಾನಿಗಳಿಗೆ ಬೇಕಾದ ಅಂಶಗಳನ್ನು ಭರಪೂರವಾಗಿ ತುಂಬಲಾಗಿದೆ.
ಕನ್ನಡದ 'ಘೋಸ್ಟ್' ಸಿನಿಮಾದಲ್ಲಿ ಇರುವಂತೆ ಪ್ರಯೋಗ ಸಹ ಸಿನಿಮಾದಲ್ಲಿ ಪ್ರಯೋಗಿಸಲಾಗಿದೆ. ನಟಿ ರಚಿತರಾಮ್ ನ ನಟನೆಯ ಜೊತೆಗೆ ಆಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ಉಪೇಂದ್ರ ಅವರು ಕಾಳಿ ಶಂಬ ಪಾತ್ರದಲ್ಲಿ ಒಂದು ಫೈಟು ಹಾಗೂ ನಾಲ್ಕನೇ ದೃಶ್ಯಗಳಿಗೆ ಸೀಮಿತ ರಾಗಿದ್ದಾರೆ ಅಮೀರ್ ಖಾನ್ ಪಾತ್ರ ಬಿಲ್ಡಪ್ ಗಳಿದಷ್ಟೇ ಸೀಮಿತವಾಗಿದೆ ಕಥೆ ಕೊನೆಯಲ್ಲಿ ಕೊಂಚ ಬೋರ್ ಅನಿಸುವಂತೆ ಮಾಡಿದೆ.
Actor Rajinikanth, who excelled in 74