ad

ನಟಿ ರಮ್ಯ ನನ್ನ ಮೊದಲ‌ ಕ್ರಶ್ ಎಂದು ನಟ ದೇವರಾಜ್ ಪುತ್ರ-Actress Ramy is my first crush

 SUDDILIVE || SHIVAMOGGA

ನಟಿ ರಮ್ಯ ನನ್ನ ಮೊದಲ‌ ಕ್ರಶ್ ಎಂದು ನಟ ದೇವರಾಜ್ ಪುತ್ರ-Actress Ramy is my first crush

Acress, Ramya


ನಟ ದೇವರಾಜ್ ಅವರ ಎರಡನೇ ಪುತ್ರ ಪ್ರಣಮ್ ದೇವರಾಜ್ ನಟನೆಯ ಸನ್ ಆಪ್ ಮುತ್ತಣ್ಣ ಆ.22 ಕ್ಕೆ ರಿಲೀಸ್ ಆಗಲಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಲು ಪ್ರಣಮ್ ದೇವರಾಜ್ ಶಿವಮೊಗ್ಗದ ಪತ್ರಿಕಾ ಭವನಕ್ಕೆ ಆಗಮಿಸಿದ್ದರು. 

ಸನ್ ಆಪ್ ಮುತ್ತಣ್ಣದ ನಿರ್ದೇಶಕ ಶ್ರೀಕಾಂತ್ ಹೊಸೂರು ಅವರೊಂದಿಗೆ ಬಂದಿದ್ದ ಪ್ರಣವ್ ದೇವರಾಜ್ ಸಿನಿಮಾ ರಿಲೀಸಿಂಗ್ ಡೇಟ್ ತಿಳಿಸಿದರು. ತಂದೆಯಾಗಿ ರಂಗಾಯಣ ರಘು, ನಾಯಕ ನಟಿಯಾಗಿ ಖುಷಿ ರವಿ, ದತ್ತಾತ್ರೇಯ, ಸುಚೇಂದ್ರಪ್ರಸಾದ್, ಗಿರಿಶ್ ಶಿವಣ್ಣ, ಸುಧಾ ಬೆಳವಾಡಿ, ಮೊದಲಾದವರು ನಟಿಸಿದ್ದಾರೆ ಎಂದರು.

 ಅಪ್ಪ ಮತ್ತು ಮಗನ ಸಂಬಂಧದ ಕಥೆಯಾಗಿರುವ ಸನ್ ಆಫ್ ಮುತ್ತಣ್ಣದಲ್ಲಿ ಪ್ರಣಾಮ್ ಅವರಿಗೆ ಪಾತ್ರ ಹತ್ತಿರವಾಗಿದೆ ಎಂದಿದ್ದಾರೆ. ನಿಜ ಜೀವನದಲ್ಲಿ ಅವರು  ಅವರ ಅಪ್ಪನ ಜೊತೆಗೆ ಇರುವ ಅನುಭವವನ್ನ   ರೀಲ್ ನಲ್ಲಿ ರಂಗಾಯಣ ರಘು ಜೊತೆ ನಟಿಸಿರುವುದಾಗಿ ಹೇಳಿಕೊಂಡಿದ್ದಾರೆ. 

ಖುಷಿ ರವಿ ಅವರು,  ದಿಯಾ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಸಚಿನ ಬಸ್ರೂರ್ ಅವರು ಸಂಗೀತ ನೀಡಿದ್ದಾರೆ.  ಸ್ಕೇಟಿಂಗ್ ಕೃಷ್ಣ ಕ್ಯಾಮೆರಾ ಮನ್ ಆಗಿದ್ದಾರೆ. ಎಲ್ಲರ ಮನೆಯಲ್ಲಿ ನಡೆಯುವ ಕಥೆಯೇ ಸನ್ ಆಫ್ ಮುತ್ತಣ್ಣ ಎಂಬುದನ್ನ ಮಾತ್ರ ಪ್ರಣಮ್ ಹೇಳೋದು ಮರೆಯಲಿಲ್ಲ.  

ಶೂಟಿಂಗ್ ಬೆಂಗಳೂರು ಮತ್ತು ಕಾಶಿಯಲ್ಲಿ ನಡೆದಿದೆ ಕಾಶಿಯೂ ಸಹ ಸಿನಿಮಾದಲ್ಲಿ ಒಂದು ಪಾತ್ರವಾಗಿದೆ. ಸಣ್ಣ ಸಣ್ಣ ಟ್ವಿಸ್ಟ್ ಗಳಿವೆ ಎಂದ ಪ್ರಣಮ್, ಪ್ರಜ್ವಲ್ ದೇವರಾಜ್ ಸಕ್ಸ ಸ್ ಆಗಿದ್ದಾರೆ 38 ನೇ ವಯಸ್ಸಿನಲ್ಲಿ 45 ಸಿನಿಮಾ ಮಾಡಿದ್ದಾರೆ. ಸಿನಿಮಾ ಕಥೆ ಆಯ್ಕೆಯಲ್ಲಿ ಯಡವುತ್ತಾರೋ ಅಥವಾ ಅದರ ಎಕ್ಸಿಕ್ಯೂಷನ್ ನಲ್ಲಿ ಎಡವುತ್ತೇವೋ ಗೊತ್ತಿಲ್ಲ. ಆದರೆ, ಎಕ್ಕ, ಮಹಾದೇವ, ಸು ಫ್ರಮ್ ಸೋ ಸಿನಿಮಾ ಇತ್ತೀಚೆಗೆ  ಯಶಸ್ವಿಯಾಗಿದೆ. 

ಅದರಂತೆ ಸನ್ ಆಫ್ ಮುತ್ತಣ್ಣ ಯಶಸ್ಸು ತಂದುಕೊಡಲಿ. ಹೊತ್ತಿಗಾದವನೆ ನೆಂಟ ಎಂಬ ಮಾತು ಸಿನಿಮಾದಲ್ಲಿರುತ್ತೆ. ರಮ್ಯ ಅವರಿಗೆ ಅವ್ಯಾಚ್ಯ ಪದಗಳ ಬಳಕೆ ಬಗ್ಗೆ ಉತ್ತರಿಸಿದ ಪ್ರಣಮ್ ಅವರು ನನ್ನ ಫಸ್ಟ್ ಕ್ರಶ್, ರಮ್ಯ ಅವರ ವಿರುದ್ಧ ಅವ್ಯಚ್ಯ ಶಬ್ದಬಳಕೆ ವಿರುದ್ಧ ಕಾನೂನು ಕ್ರಮ ಬೇಕಿದೆ ಎಂದು ಹೇಳಿದರು. 

Actress Ramy is my first crush

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close