SUDDILIVE || SHIVAMOGGA
ಸಂಸದರ ಹುಟ್ಟುಹಬ್ಬಕ್ಕೆ ಸಿಎಸ್ ಷಡಾಕ್ಷರಿ ಭಾಗಿ-ಯೋಗೀಶ್ ಆಕ್ಷೇಪ-Yogish objects to CS Shadakshari's participation in MP's birthday
ಸಂಸದರ ಹುಟ್ಟುಹಬ್ಬ ಆಚರಣೆ ಕುರಿತು ವಿಕಾಸ ಶಾಲೆಯಲ್ಲಿ ಆ.5 ರಂದು ನಡೆದ ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಭಾಗಿಯಾಗಿ ಸಲಹೆ ನೀಡಿರುವ ಬಗ್ಗೆ ಕಾಂಗ್ರೆಸ್ ನ ಹೆಚ್ ಸಿ ಯೋಗೀಶ್ ಆಕ್ಷೇಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಷಡಾಕ್ಷರಿಯವರು ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾಗಿ ಈ ರೀತಿ ಸಭೆಯಲ್ಲಿ ಭಾಗಿಯಾಗಿ ಸಲಹೆ ಸೂಚನೆ ನೀಡಲು ಅವಕಾಶವಿದೆಯಾ ಎಂದು ಪ್ರಶ್ನಿಸಿದ್ದಾರೆ. ಅಧ್ಯಕ್ಷರಾಗಿ ಕೆಲಸ ಮಾಡಿ ಅಂತರಂಗದ ವಿಷಯವನ್ನ ಕದ್ದುಮುಚ್ಚಿ ಬಹಿರಂಗ ಮಾಡುವ ಬದಲು ಬಹಿರಂಗವಾಗಿಯೇ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷರು ತಮ್ಮ ಪಕ್ಷಕ್ಕೆ ಕರೆದುಕೊಂಡು ಸದಸ್ಯತ್ವ ಕೊಡಲಿ. ಕಾರ್ಯಕ್ರಮದ ಸ್ಪಾನ್ಸರ್ ಸಹ ಅವರು ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಬೇರೆ ಪಕ್ಷ ಸೇರುವ ಬದಲು ಬಿಜೆಪಿ ಸೇರಿ ಅಧ್ಯಕ್ಷರಾಗಲಿ. ಕಾಂಗ್ರೆಸ್ ನ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯೋಗೀಶ್ ಆರ್ ಎಸ್ ಎಸ್ ಮತ್ತು ಬಿಜೆಪಿಯವರಿಗೆ ನಮ್ಮ ಪಕ್ಷದಲ್ಲಿ ಅವಕಾಶ ಕಡಿಮೆ ಎಂದರು.
ನನಗೆ ಅವರು ಸ್ಪರ್ಧಿಯಲ್ಲ. ನಮ್ಮಲ್ಲೇ ಹೆಚ್ಚಿನ ಸ್ಪರ್ಧಿಗಳಿದ್ದಾರೆ. ಬಿಜೆಪಿಯಲ್ಲಿ ಗುರುತಿಸಿಕೊಳ್ಳಿತ್ತಿರುವವರಿಗೆ ಅಧ್ಯಕ್ಷ ಸ್ಥಾನ ಬಿಟ್ಟು ಪಕ್ಷ ಸೇರಿಕೊಳ್ಳಲಿ. ಸಂಸದರ ಹುಟ್ಟುಹಬ್ಬ ಮಾಡುವುದಾದರೆ ನಮ್ಮಪಕ್ಷದ ನಾಯಕರ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾಗುತ್ತಾರಾ ಎಂದು ಪ್ರಶ್ನಿಸೊದರು.
Yogish objects to CS Shadakshari's participation in MP's birthday