SUDDILIVE || SHIVAMOGGA
ಅಯೋಗ್ಯ ಅನಾಮಿಕನನ್ನ ಬಂಧಿಸಿ ಎರಡು ರುಬ್ಬಿ ಎಲ್ಲಾ ಸರಿಯಾಗುತ್ತದೆ-ಈಶ್ವರಪ್ಪ-Arrest an anonymous person and pay him two rupees and everything will be fine - Eshwarappa
ಧರ್ಮಸ್ಥಳದಲ್ಲಿ ಉತ್ಕನ ಮಾಡುವುದನ್ನು ಖಂಡಿಸಿ, ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಇಂದು ಬೃಹತ್ ಪ್ರತಿಭಟನೆ ನಡೆಸಿತು. ಅನಾಮಿಕನನ್ನ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿ ಘೋಷಣೆಕೂಗಿದರು.
ಗೋಪಿ ವೃತ್ತದಿಂದ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಉತ್ಕನನವನ್ನು ನಿಲ್ಲಿಸುವಂತೆ ಮತ್ತು ಮಾಧ್ಯಮಗಳಲ್ಲಿ ವರದಿಯನ್ನು ನಿಲ್ಲಿಸುವಂತೆ ಅಗ್ರಹಿಸಿ ಜಿಲ್ಲಧಿಕಾರಿಗಳಿಗೆ ಜನಾಗ್ರಹದ ಮನವಿ ಸಲ್ಲಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ. ಡಿ ವೀರೇಂದ್ರ ಹೆಗಡೆ ಅವರ ಮೇಲೆ ನಿರಂತರ ದೋಷಾರೋಪಣ ಮಾಡುವ ಮೂಲಕ ನಿಂದಿಸಿ ವಿಕೃತ ಸಂತೋಷವನ್ನು ಅನುಭವಿಸುತ್ತಿರುವ ಸಮಾಜಘಾತಕ ಶಕ್ತಿಗಳ ಮೇಲೆ ಸರ್ಕಾರ ಮತ್ತು ನ್ಯಾಯಾಲಯವು ಕಠಿಣ ಕ್ರಮಗಳನ್ನು ಜರಗಿಸಬೇಕು. ಕೋಟ್ಯಂತರ ಜನರ ಶ್ರದ್ಧಾ ಕೇಂದ್ರದ ಮೇಲೆ ಮಾನಹಾನಿ ಮಾಡುವ ಕಾಯಕವನ್ನು ಕೆಲವರು ಇತ್ತೀಚಿಗೆ ರೂಡಿ ಮಾಡಿಕೊಂಡಿದ್ದಾರೆ ಎಂದು ಮನವಿಯಲ್ಲಿ ಆರಂಭಿಸಲಾಗಿದೆ.
ಜೈನ ಸಮಾಜ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಡಾ.ಡಿ.ವಿ.ವೀರೇಂದ್ರ ಹೆಗ್ಗಡೆಯವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ಅಪಪ್ರಚಾರವನ್ನ ಮಾಡಲಾಗುತ್ತಿದೆ ಅಂತಹವರ ವಿರುದ್ಧ ಕ್ರಮ ಜರುಗಿಸುವಂತೆ ಸಹ ಪ್ರತಿಭಟಿಸಲಾಯಿತು.
ಜೆಡಿಎಸ್ ಕೋರ್ ಸಮಿತಿಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಮಾತನಾಡಿ, ರಕ್ಷಣೆ ಬೇಡೋದು ಧರ್ಮಸ್ಥಳಕ್ಕೆ. ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಶ್ರೀರಕ್ಷೆ ನಮಗೆ ಆಶೀರ್ವಾದ. ಶ್ರೀಕ್ಷೆತ್ರದ ಹೆಸರಿನಲ್ಲಿ ಪ್ರತಿಭಟನೆ ನಡೆಸಿದರೆ ಕೋಟಿ ಪ್ರತಿಭಟನೆಗಳಾಗುತ್ತವೆ. ಇಲ್ಲಿಯ ವರೆಗೆ ನಡೆದ ತನಿಖೆ ಅಸ್ಪಷ್ಟವಾಗಿದೆ. ಮಧ್ಯಾಂತರ ವರದಿ ಬರಬೇಕಿತ್ತು. ಅನಾಮಿಕನ ಮಂಪರು ಪರೀಕ್ಷೆ ಮಾಡಿ ನಂತರ ಶೋಧನೆ ನಡೆಸಿ ಎಂದು ತಿಳಿಸಿಸಿದರು.
ಮಾಜಿಡಿಸಿಎಂ ಈಶ್ವರಪ್ಪ ಮಾತನಾಡಿ ಸಿಎಂ ಸಿದ್ದರಾಮಯ್ಯನವರಿಗೆ ಪ್ರಶ್ನೆ ಮಾಡುವೆ ಅರಣ್ಯ ಇಲಾಖೆಯ ಜಾಗದಲ್ಲಿ ಸಾವಿರಕ್ಕೂ ಹೆಚ್ಚು ಹೆಣ ಹೂತಿರುವೆ ಎಂದಿರುವ ಅನಾಮಿಕನನ್ನ ಯಾಕೆ ಬಂಧಿಸಿಲ್ಲ. ಅರಣ್ಯ ಕಾಯ್ದೆಯನ್ನ ನೇರವಾಗಿ ಉಲ್ಲಂಘಿಸಿರುವ ಅನಾಮಿಕನನ್ನ ರಕ್ಷಿಸಲಾಗಿದೆ. ಹಿಂದೂಗಳ ಬಗ್ಗೆ ತಾತ್ಸಾರ ನಡೆಯುತ್ತಿದೆ. ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನ ಮುಜರಾಯಿ ಇಲಾಖೆ ಅಡಿ ತರು ಪ್ರಯತ್ನ ನಡೆಯಲಾಯಿತು ಕೆಲ ಹಿಂದೂಗಳ ಆಕ್ಷೇಪಣೆಯಿಂದ ಕೈಬಿಡಲಾಯಿತು.
ಮಂಜುನಾಥೇಶ್ವರನ ಭಕ್ತರು ಜಾಗೃತರಾಗಿದ್ದಾರೆ. ಧರ್ಮಸ್ಥಳವನ್ನ ಕೈಗೆ ತೆಗೆದುಕೊಂಡರೆ ಹಿಂದೂ ಸಮಾಜ ಸುಮ್ಮನೆ ಕೂರಲ್ಲ. ಎಡಪಂಥೀಯರು ಧರ್ಮಸ್ಥಳದ ದೇವಸ್ಥಾನವನ್ನ ಕೈಗೆ ಪಡೆಯುವ ಪ್ರಯತ್ನ ನಡೆಸಿದ್ದರು. ವೀರೇಂದ್ರ ಹೆಗಡೆಯವರು ಕುಡಿಯುವುದನ್ನ ಬಿಡಿಸಿ ಸಮಾಜದ ಮುನ್ನೆಲೆಗೆ ತಂದವರು. ಮತಾಂತರವನ್ನ ತಡೆದ ಕೀರ್ತಿ ಅವರಿಗೆ ಸಲ್ಲುತ್ತೆ. ಕೆರೆಗಳನ್ನ ಉದ್ಧಾರದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಇವೆಲ್ಲವನ್ನ ತಡೆಯಾಗದ ಎಡಪಂಥೀಯರು ದೇವಸ್ಥಾನವನ್ನೇ ಸರ್ಕಾರದ ಕೈಗೆ ಸೇರುವಂತೆ ಮಾಡಲು ಯತ್ನಿಸಿದರು. ಹಿಂದೂ ಸಮಾಜ ಜಾಗೃತಿಯಾದರೆ ಎಡಪಂಥೀಯರಿಲ್ಲ. ಎಡಪಂಥೀಯರ ಹೆಣ ಹೂತಾಗ ಅಲ್ಲಿ ವಿಶೇಷತೆ ಬರುತ್ತದೆ ಎಂದು ಹೇಳಿದ ಅವರು ದೇವಸ್ಥಾನಕ್ಕೆ ವಿರೇಂದ್ರ ಹೆಗಡೆಯನ್ನ ಅಪಮಾನ ಮಾಡುದ್ರೆ ಹಿಂದೂಗಳು ಬಿಡೊಲ್ಲ. ಅನಾಮಿಕ ತೋರಿಸಿದ ಕಡೆ ಎಲ್ಕಾ ಅಗೆದಿದ್ದೀರ. ಏನೂ ಸಿಕ್ಕಿಲ್ಲ. ಸಿಎಂ ಅವರು ಅಗೆಯುವುದನ್ನ ಸಾಕು ಮಾಡಿ. ಈ ಕಡೆ ಗಮನಹರಿಸಿ ಎಸ್ಐಟಿ ವರದಿ ಪಡೆಯಿರಿ ಎಂದರು.
ಅನಾಮಿಕನನ್ನ ಬಂಧಿಸಿ ಎರಡು ರುಬ್ಬುದ್ರೆ ಎಲ್ಲಾ ಸರಿಯಾಗಲಿದೆ ಎಂದರು. ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಕಪ್ಪು ಪಟ್ಟಿ ಧರಿಸಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಗೊಂದಲ
ಧರ್ಮಸ್ಥಳದ ಉತ್ಖನವನ್ನ ಖಂಡಿಸಿ ನೇದ ಪ್ರತಿಭಟನಾ ಭಾಷಣದ ವೇಳೆ ಗೊಂದಲ ಮೂಡಿತ್ತು. ಬಹುತೇಕ ಜೆಡಿಎಸ್, ಬಿಜೆಪಿ ಹಾಗೂ ರಾಷ್ಟ್ರಭಕ್ತರ ಬಳಗಕ್ಕೆ ಭಾಷಣದ ಅವಕಾಶ ನೀಡಿದ್ದ ಕಾರಣವನ್ನ ಕೆಲವರು ಪ್ರಶ್ನಿಸಿದರು. ಇಲ್ಲಿ ಎಲ್ಲರೂ ಪಕ್ಷಾತೀತರಾಗಿ ಬಂದಿದ್ದಾರೆ ನಮಗೂ ಮಾತನಾಡಲು ಅವಕಾಶ ಕೊಡಬೇಕೆಂದು ಆಗ್ರಹಿಸಿದರು. ಈ ವೇಳೆ ಬಜರಂಗದಳ ಘೋಷಣೆ ಕೂಗಿತು.
Arrest an anonymous person and pay him two rupees and everything will be fine - Eshwarappa