SUDDILIVE || SHIVAMOGGA
ಆ.15 ರಂದು ಅಭಿಮಾನ ಪರ್ವ - Abhimana Parva on August 15th
ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ವಾಸವಿ ಪಬ್ಲಿಕ್ ಶಾಲೆ, ಪೇಸ್ ಪದವಿ ಪೂರ್ವ ಕಾಲೇಜು, ನಂದನ ಎಜುಕೇಶನ್ ಟ್ರಸ್ಟ್ , ವಿಕಾಸ ವಿದ್ಯಾ ಸಮಿತಿ ಸಯಂಯುಕ್ತಾಶ್ರಯದಲ್ಲಿ ಅಭಿಮಾನ ಪರ್ವ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ರಾಷ್ಟ್ರಭಕ್ತರ ಬಳಗದ ಕೆ.ಈ.ಕಾಂತೇಶ್ ಮಾತನಾಡಿ ಅಂದು ಆಪರೇಷನ್ ಸಿಂಧೂರ್ ಯಶಸ್ಬಿ ಮತ್ತು ಸ್ವಾತಂತ್ರೋತ್ಸವದ ಮೆರವಣಿಗೆಯನ್ನ ಆ.15 ರಂದು ಸಂಜೆ 4 ರಂದು ಹಮ್ಮಿಕೊಳ್ಳಕಾಗಿದೆ ಎಂದರು.
ಆ. 14 ರಂದು ಧ್ವಜ ಕಟ್ಟುವ ಕಾರ್ಯಕ್ರಮ ನಡೆಯಲಿದೆ. ಗಾಂಧೀಬಜಾರ್ ನಲ್ಲಿ ವರ್ತಕರು ತಾವೇ ಧ್ವಜ ಕಟ್ಟಲಿದ್ದಾರೆ. ಆ.15 ರಂದು ಎರಡು ಮೆರವಣಿಗೆ ನಡೆಯಲಿದೆ. ಒಂದು ಪ್ರಬುಧ್ಧರ ಮೆರವಣಿಗೆ ನಡೆದರೆ, ಮತ್ತೊಂದು ಮೆರವಣಿಗೆ ಪುಟ್ಟ ಮಕ್ಕಳ ಮೆರವಣಿಗೆ ನಡೆಯಲಿದೆ. ಶಿವಪ್ಪ ನಾಯಕ ಪ್ರತಿಮೆಯಿಂದ ರಾಮಣ್ಣ ಶ್ರೇಷ್ಠಿ ಪಾರ್ಕ್ ನ ವರೆಗೆ ಮೃವಣಿಗೆ ನಡೆಯಲಿದೆ.
ಶೇಷಾಚಲ ಮಾತನಾಡಿ, ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಶಿವಪ್ಪ ನಾಯಕ ವೃತ್ತದ ವರೆಗೆ 9 ವೇದಿಕೆ ರಚಿಸಲಾಗಿದೆ. ರಾತ್ರಿ 8 ರವರೆಗೆ ಕಾರ್ಯಕ್ರಮ ನಡೆಯಲಿದೆ. ಸ್ವಾತಂತ್ರೋತ್ಸವವು ಸಾರ್ವಜಕರ ಹಬ್ಬದಂತಾಗಬೇಕು ಎಂಬ ಹಿನ್ನಲೆಯಲ್ಲಿ ಅಭಿಮಾನ ಪರ್ವ ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಧ್ವಜ ನಿಷೇಧಿಸಲಾಗಿದೆ. ಎಲ್ಲಿ ಪ್ಲಾಸ್ಟಿಕ್ ಧ್ವಜ ಕಂಡರೆ ಅದನ್ನ ತೆರವುಗೊಳಿಸಿ ಖಾದಿ ಬಟ್ಟೆಯ ಧ್ವಜ ನೆಡಲಾಗುವುದು ಎಂದರು.
Abhimana Parva on August 15th