ad

ಮೊದಲು ಅನಾಮಿಕನನ್ನ ಬಂಧಿಸಿ- ಈಶ್ವರಪ್ಪ- Arrest the anonymous person first - Eshwarappa

SUDDILIVE || SHIVAMOGGA

ಮೊದಲು ಅನಾಮಿಕನನ್ನ ಬಂಧಿಸಿ- ಈಶ್ವರಪ್ಪ-Arrest the anonymous person first - Eshwarappa

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇವೆ. ಸುಳ್ಳು ಪ್ರಚಾರ ಗಿಟ್ಟಿಸಲು ಹೊರಟಿರುವ ಸಂಸ್ಥೆ ಹಿಂದೆ ಯಾರಿದ್ದಾರೆ ಎಂಬುದು ತಿಳಿಯಬೇಕಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನಾಮಿಕ ವ್ಯಕ್ತಿ ಯಾರು...? ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಹಿಂದೂ ಸಮಾಜವನ್ನ ಅಪಮಾನ ಮಾಡಲು ಹೊರಟಿದ್ದಾರೆ. ಧರ್ಮಸ್ಥಳದಂತ ಪುಣ್ಯಕ್ಷೇತ್ರದ ಬಗ್ಗೆ ಜನರಲ್ಲಿ ಅನುಮಾನ ಸೃಷ್ಟಿಸಲು ಪ್ರಯತ್ನಿಸಿದ ವ್ಯಕ್ತಿಗಳು ಯಾರು..?ರಾಜ್ಯ ಸರ್ಕಾರ ತಕ್ಷಣ ಇದನ್ನ ಕಂಡು ಹಿಡಿಯಲಿ ಎಂದು ಆಗ್ರಹಿಸಿದರು. 

13 ಕಡೆ ನೂರಾರು ಹೆಣ ಹೂತು ಹಾಕಿದ್ದೇವೆ ಎಂದು ಒಬ್ಬ ವ್ಯಕ್ತಿ ಹೇಳಿದ್ದಾನೆ. ಅವನ ಹಿಂದೆ ಯಾರ್ಯಾರು ಇದ್ದಾರೆ..? ಅವನೊಬ್ಬನೇ ನೂರಾರು ಹೆಣ ಹೂಳಲು ಸಾಧ್ಯವೇ..? ಅವನ ಹಿಂದೆ ಯಾವ ರಾಷ್ಟ್ರದ್ರೋಹಿ ಹಾಗೂ ಧರ್ಮ ದ್ರೋಹಿ ಗುಂಪಿದೆ ಎಂದು ಪ್ರಶ್ನಿಸಿದರು. 

ವೀರೇಂದ್ರ ಹೆಗ್ಗಡೆ ಹಾಗೂ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವ ಕುತಂತ್ರ ನಡೆದಿದೆ. ಅನಾಮಿಕ ವ್ಯಕ್ತಿ ಸ್ಥಳ ತೋರಿಸಲು ವಿಫಲವಾಗಿದ್ದಾನೆ. ಸರ್ಕಾರ ಮೊದಲು ಅನಾಮಿಕ ವ್ಯಕ್ತಿಯನ್ನ ಅರೆಸ್ಟ್ ಮಾಡಲಿ.ಮೊದಲು ಅವನಿಂದ ಪೂರ್ಣ ವಿಚಾರ ತಿಳಿದುಕೊಳ್ಳಲಿ ಎಂದು ಆಗ್ರಹಿಸಿದರು. 

ರಾಜ್ಯ ಸರ್ಕಾರ ಈ ನಡುವೆ ಹೊಸ ಆದೇಶ ಹೊರಡಿಸಿದೆ. ಈ ವಿಚಾರಕ್ಕೆ ಯಾರನ್ನ ಬೇಕಾದರೂ ವಿಚಾರಣೆ, ಅರೆಸ್ಟ್ ಮಾಡಬಹುದು ಎಂದಿದ್ದಾರೆ. ಅನಾಮಿಕ ವ್ಯಕ್ತಿಯನ್ನ ಅರೆಸ್ಟ್ ಮಾಡಿ, ಸತ್ಯವನ್ನ ಬಹಿರಂಗ ಪಡಿಸಿ. ಯಾರು ಕೂಡ ಹಿಂದೂ ಧರ್ಮ ಹಾಗೂ ಧರ್ಮಸ್ಥಳವನ್ನ ಹಾಳು ಮಾಡಲು ಸಾಧ್ಯವಿಲ್ಲ. ಹೆಗ್ಗಡೆಯವರಿಗೆ ಕೆಟ್ಟ ಹೆಸರು ತರಲು ಸಾಧ್ಯವಿಲ್ಲ

ಇಡೀ ದೇಶದ ಹಿಂದೂಗಳಿಗೆ ನೋವಾಗಿದೆ. ಘಟನೆಯ ಹಿಂದಿರುವ ಧರ್ಮದ್ರೋಹಿ ಗುಂಪು, ಷಡ್ಯಂತ್ರ ಏನೇಂದು ತಿಳಿಯಬೇಕು. ಗಾಳಿ ಆಂಜನೇಯ ದೇವಾಲಯವನ್ನ ಸರ್ಕಾರ ವಶಕ್ಕೆ ತೆಗೆದುಕೊಂಡಿತ್ತು. ಹಿಂದೂ ಸಮಾಜ ಪ್ರತಿರೋಧ ತೋರಿದ್ದಕ್ಕೆ ವಾಪಸ್ ಆಡಳಿತ ಮಂಡಳಿಗೆ ನೀಡಿದ್ದಾರೆ ಎಂದರು. 

ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರ 

ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣ ಇಡಿ ತನಿಕೆ ಮುಖಾಂತರ ಧರ್ಮಸ್ಥಳ  ಬ್ಲಾಸ್ಟ್  ಮಾಡಬೇಕೆಂದುಕೊಂಡಿದ್ದ ವಿಚಾರ ಹೊರಬಂದಿದೆ. ಆಗ ಡಿಕೆ ಶಿವಕುಮಾರ್  ಇದನ್ನು ಹಗುರವಾಗಿ ತೆಗೆದುಕೊಂಡಿದ್ದರು. ಎಲ್ಲದಕ್ಕೂ ಕೋಮು ಭಾವನೆ ತರುವ ಪ್ರಯತ್ನ ನಡೆಯುತ್ತಿದೆ ಎಂದಿದ್ದರು. ಆದರೆ ಈ ವಿಚಾರ ಹೊರಬಂದ ನಂತರ ಏನು ಹೇಳುತ್ತಾರೆ ಎಂದು ನೋಡಬೇಕು ಎಂದು ಈಶ್ವರಪ್ಪ ತಿಳಿಸಿದರು. 

ಪುಣ್ಯ ಕ್ಷೇತ್ರವನ್ನು ಉಳಿಸುವಂತಹ ಕೆಲಸ ಸರ್ಕಾರ ಮಾಡಬೇಕುಅದು ಆಗದಿದ್ದರೆ ಸರ್ಕಾರದ ವಿರುದ್ಧ ಹಿಂದೂ ಸಮಾಜದ  ತಿರುಗಿ ಬೀಳುವ ಸಂಭವವಿದೆ ಎಂದರು. 

Arrest the anonymous person first - Eshwarappa


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close