SUDDILIVE || HOSANAGARA
ಹಲ್ಲೆ ವಿಡಿಯೋ ವೈರಲ್- Assault video viral
ಹೊಸನಗರದ ಹೆಬ್ಬೇಲು ಯುವಕನ ಮೇಲೆ ಹಲ್ಲೆ ಪ್ರಕರಣದ ವಿಡಿಯೋ ವೈರಲ್ ಆಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆಬ್ಬೇಲು ಗ್ರಾಮದ ಗುರುವಾರ ಸಂಜೆ ತಾಲೂಕಿನ ಹೆಬ್ಬೇಲು ಗ್ರಾಮದಲ್ಲಿ ಸತೀಶ್ ಎಂಬ ಯುವಕನ ಮೇಲೆ ಹಲ್ಲೆ ನಡೆದಿತ್ತು.
ಗಾಯಗೊಂಡಿದ್ದ ಸತೀಶ್ ಗೆ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ಸಂಜೆ ನಡೆದ ಗಲಾಟೆಯ ವಿಡಿಯೋ ಮಾಡಲಾಗಿತ್ತು.ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಗಲಾಟೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಯುವಕನ ಮೊಬೈಲಿನಲ್ಲಿ ವಿಡಿಯೋ ಸೆರೆಯಾಗಿದೆ. ದೊಣ್ಣೆ, ರಾಡ್ ನಿಂದ ಹಲ್ಲೆ ಮಾಡಿದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.