ad

ಮನೆಕಳ್ಳತನದ ಆರೋಪಿ ಬಂಧನ-House burglary suspect arrested

 SUDDILIVE || ANAVATTI

ಮನೆಕಳ್ಳತನದ ಆರೋಪಿ ಬಂಧನ-House burglary suspect arrested

Hiuse, Burglary



ಮನೆ ಬೀಗ ಹಾಕಿಕೊಂಡು ಜಮೀನು ಕೆಲಸಕ್ಕೆ ಹೋದ ವೇಳೆ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆನವಟ್ಟಿ ಪೊಲೀಸರು ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸರ್ವ ತಾಲೂಕಿನ ಶಕುನವಳ್ಳಿ ಗ್ರಾಮದ ನಿವಾಸಿ ಶಂಭುಲಿಂಗಪ್ಪ ಎಂಬವರ ಮನೆಯಲ್ಲಿ ಜುಲೈ 25ರಂದು ಅವರ ಜಮೀನಿಗೆ ಹೋಗಿದ್ದ ವೇಳೆಯಲ್ಲಿ ಮನೆ ಬಾಗಿಲನ್ನು ಒಡೆದು ಬೀರುವ ಇಂಟರ್ಲಾಕ್ ನಲ್ಲಿ ಇಟ್ಟಿದ್ದ ಸುಮಾರು 8.49000 ರೂ ಮೌಲ್ಯದ ಬಂಗಾರದ ಆಭರಣಗಳು ಮತ್ತು ಬೆಳ್ಳಿಗಳ ಆಭರಣಗಳು ಕಳುವಾಗಿತ್ತು.

ಪ್ರಕರಣವನ್ನು ಭೇದಿಸಲು ಎಸ್ ಪಿ ಮಿಥುನ್ ಕುಮಾರ ಜಿಲ್ಲೆ ಹೆಚ್ಚುವರಿ ರಕ್ಷಣಾಧಿಕಾರಿ ಹಾಗೂ ಶಿಕಾರಿಪುರದ ಡಿಎಸ್ಪಿ ಅವರ ಮಾರ್ಗದರ್ಶನದಲ್ಲಿ ಸೊರಬ ಸಿಪಿಐ ರಾಜಶೇಖರ್ ಪಿಎಸ್ಐ ಚಂದನ್ ನೇತೃತ್ವದಲ್ಲಿ ಸಿಬ್ಬಂದಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು. ತಂಡವು ಹಾವೇರಿ ಜಿಲ್ಲೆಯ ಅಬ್ದುಲ್ ಸತ್ತರ್ (27) ಎಂಬುವಙ್ನ ಬಂಧಿಸಲಾಗಿದೆ. 

ಬಂಧಿತರಿಂದ  8,49,000 ರೂ ಮೌಲ್ಯದ 135 ಗ್ರಾಂ ಚಿನ್ನಾಭರಣ ಮತ್ತು 200 ಗ್ರಾಂ ಬೆಳ್ಳಿಯ ಆಭರಣಗಳು ಮತ್ತು ಕೃತ್ಯಕ್ಕೆ ಬಳಸಿದ್ದ ವಾಹನವನ್ನ ವಶಕ್ಕೆ ಪಡೆಯಲಾಗಿದೆ.

 House burglary suspect arrested

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close