SUDDILIVE || ANAVATTI
ಪ್ರಿಯಕರನೊಂದಿಗೆ ಸೇರಿ ಪ್ರೀತಿಸಿ ಮದುವೆಯಾದ ಪತಿಯ ಕೊಲೆಗೆ ಯತ್ನ-Attempted murder of husband who married his lover
ಟಿವಿಯಲ್ಲಿ ಬರುತ್ತಿದ್ದ ಕ್ರೈಂ ಸ್ಟೋರಿ ಧಾರವಾಹಿಗಳಿಗೂ ನಿಜ ಜೀವನಲ್ಲಿ ನಡೆಯುವ ಅಪರಾಧ ಘಟನೆಗಳು ಬಹುತೇಕ ಸಿಮಿಲಿಯಾರಿಟಿ ಇರುತ್ತದೆ. ಅದೆಲ್ಲೋ ಉತ್ತರ ಭಾರತದ ಗ್ರಾಮಗಳಲ್ಲಿ ನಡೆಯುತ್ತಿದ್ದ , ಮಹಿಳೆ, ಸ್ನೇಹ, ಹಾದರತನ ನಂತರ ಕೊಲೆಗೆ ಸಂಚಿನ ಪ್ರಕರಣವನ್ನ ಕ್ರೈಂ ಡೈರಿಯಲ್ಲಿ ನೋಡುತ್ತೇವೆ. ಆದರೆ ಅದೇ ರೀತಿಯ ಕ್ರೈ ಸ್ಟೋರಿಯೊಂದು ಸೊರಬ ತಾಲೂಕು ಆನವಟ್ಟಿಯಲ್ಲಿ ನಡೆದಿದೆ.
ಪ್ರಿಯಕರನ ಜೊತೆ ಸೇರಿ ಪತ್ನಿ ತನ್ನ ಪತಿಯ ಕೊಲೆಗೆ ಯತ್ನಿಸಿ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಪತ್ನಿಯ ಮೊಬೈಲ್ ನಲ್ಲಿ ಪ್ರಿಯಕರನ ಜೊತೆ ಸೇರಿಕೊಂಡು ಅತ್ತಿಗೆ ಸಂಚುರೂಪಿಸಿದ್ದಾಳೆ ಎಂದು ಪತಿ ನೀಡಿರುವ ದೂರುನ ಅಡಿ ಪ್ರಿಯಕರ ಆನವಟ್ಟಿ ಪೊಲೀಸರ ಅತಿಥಿಯಾಗಿದ್ದಾನೆ.
ಘಟನೆಯ ವಿವರ
ಆನವಟ್ಟಿಯ ಮಿವಾಸಿ ಪ್ರದೀಪ್ ಎಂಬುವರು ತನ್ನ ಪತ್ನಿ ಮಮತಾಳನ್ನು 13 ವರ್ಷಗಳ ಹಿಂದೆ ಪ್ರೀತಿಸಿ, ಮದುವೆಯಾಗಿದ್ದರು. ಇಬ್ಬರಿಗೂ ಒಬ್ಬಳು ಮಗಳಿದ್ದಾಳೆ. ಸೊರಬ ತಾಲೂಕು ತಲ್ಲೂರು ನಿವಾಸಿ ಮುತ್ತೇಶ್ ಎಂಬವನೊಂದಿಗೆ ಮಮತಾಳಿಗೆ ಸ್ನೇಹ ಮಾಡಿಕೊಂಡು ಹತ್ತಿರವಾಗಿದ್ದನು.
ಈ ಸ್ನೇಹ ಸಲುಗೆಯಲ್ಲಿ ತಿರುಗಿತ್ತು. ಮುತ್ತೇಶ್ ಮಮತಾಳಿಗೆ ಹಣದ ಸಹಾಯ ಮಾಡಿ ಮತ್ತಷ್ಟು ಹತ್ತಿರವಾಗಿದ್ದನು. ಈ ಎಲ್ಲಾ ಅನುಮಾನಗಳು ಪತಿ ಪ್ರದೀಪ್ ಗೆ ಗೊತ್ತಾಗಿದ್ದರಿಂದ ಹೆಂಡತಿಗೆ ಎಚ್ಚರಿಸುತ್ತಾ ಬಂದಿದ್ದರು. ಯಾವಾಗ ಹೆಂಡತಿ ಮೊಬೈಲ್ ನಲ್ಲಿ ಪ್ರದೀಪ್ ಗೆ ಕೊಲೆಯ ಸಂಚು ರೂಪಿಸುವ ವಾಯ್ಸ್ ರೆಕಾರ್ಡ್ ಸಿಗುತ್ತದೆ ಅಲ್ಲಿಂದ ಪತಿ ಗಾಬರಿಯಾಗಿದ್ದರು.
ಕಾಲ್ ರೆಕಾರ್ಡ್ ನಲ್ಲಿ ಪತ್ತೆಯಾಯ್ತು ಕೊಲೆಯ ಸಂಚು
ಮೊನ್ನೆ ಆ.29 ರಂದು ಸಂಜೆ ಕೋಟಿಪುರ ರಸ್ತೆಯ ಚಿಕ್ಕ ಇಡಗೋಡಿನಲ್ಲಿರುವ ಅಂಗಡಿ ಮುಂಭಾಗ ಪಿಗ್ಮಿ ಸಂಗ್ರಹಿಸುವ ಕೆಲಸದ ನಿಮಿತ್ತ ನಿಂತಿದ್ದಾಗ ನವೀನನೊಂದಿಗೆ ಕಾರಿನಲ್ಲಿ ಬಂದ ಮುತ್ತೇಶ್ ಪ್ರದೀಪ್ ಗೆ ಡಿಕ್ಕಿ ಹೊಡೆಸಿ ಸಾಯಿಸಲು ಯತ್ನಿಸಿದ್ದಾನೆ. ಅದೃಷ್ಟವಶಾತ್ ಪ್ರದೀಪ್ ಸಂಚಿನ ರಸ್ತೆ ಅಪಘಾತದಿಂದ ಬಜಾವ್ ಆಗಿದ್ದಾರೆ.
ಕಾಲ್ ರೆಕಾರ್ಡ್ ನಲ್ಲಿ ಪತ್ನಿ ಮತ್ತು ಪ್ರಿಯಕರ ಸಂಚು ರೂಪಿಸಿದ ಹಾಗೆ ತನ್ನ ಕೊಲೆಯ ಯತ್ನ ನಡೆದಿದೆ ಎಂದು ಪ್ರದೀಪ್ ಎಫ್ಐಆರ್ ನಲ್ಲಿ ದೂರಿದ್ದಾರೆ. ಸಧ್ಯಕ್ಕೆ ಪ್ರಿಯಕರ ಮುತ್ತೇಶ್ ಆನವಟ್ಟಿ ಪೊಲೀಸರ ಅಥಿತಿಯಾಗಿದ್ದಾನೆ.
Attempted murder of husband who married his lover
