POCSO ಆರೋಪಿಗೆ ಶಿಕ್ಷೆ- POCSO accused sentenced

SUDDILIVE || SHIVAMOGGA

POCSO ಆರೋಪಿಗೆ ಶಿಕ್ಷೆ-POCSO accused sentenced


ಅಪ್ರಾಪ್ತ ವಯಸ್ಸಿನ 17 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ನ್ಯಾಯಾಲಯ ಆರೋಪಿಗೆ 20 ವರ್ಷ ಕಠಿಣ ಸಜೆ ಮತ್ತು 75,000 ದಂಡ ವಿಧಿಸಿ ಆದೇಶಿಸಿದೆ.

2022 ರಲ್ಲಿ ತೀರ್ಥಹಳ್ಳಿ ತಾಲೂಕಿನ ವ್ಯಕ್ತಿಯೊಬ್ಬನು 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯವಸಿಗಿದ್ದರಿಂದ ಬಾಲಕಿ ನೀಡಿದ ದೂರಿನ ಮೇರೆಗೆ ಮಾಲೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಾಗಿತ್ತು.

ಸಿಪಿಐ ಪ್ರವೀಣ್ ನೀಲಮ್ಮನವರ್ ರವರ ನೇತೃತ್ವದಲ್ಲಿ ನಡೆದ ತನಿಖೆಯು ಪೂರ್ಣಗೊಂಡು ಆರೋಪಿಯ ವಿರುದ್ಧ ಸಿಪಿಐ ಯವರು ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದರು ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಧರ್ ಎಚ್ ಆರ್ ಸರ್ಕಾರದ ಅಭಿಯೋಜಕರಾಗಿ ವಾದ ಮಂಡಿಸಿದರು ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಫ್‌ಟಿಎಸ್‌ಸಿ 1 ನ್ಯಾಯಾಧೀಶರು ನಿಂಗನಗೌಡ ಬಾ ಪಾಟೀಲ್ ನೆನ್ನೆ ಆರೋಪಿಗೆ 20 ವರ್ಷ ಕಠಿಣ ಕಾರವಾಸ ಶಿಕ್ಷೆ 75,000 ದಂಡ ವಿಧಿಸಿದ್ದಾರೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಶಿವಮೊಗ್ಗದಿಂದ ಸಂತ್ರಸ್ತ ಬಾಲಕಿಗೆ 4 ಲಕ್ಷ ಪರಿಹಾರವನ್ನು ನೀಡುವಂತೆ ಆದೇಶಿಸಿದ್ದಾರೆ.

POCSO accused sentenced

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close