ad

ಬಿಜೆಪಿ ಯುವ ಮೋರ್ಚಾದಿಂದ ತಿರಂಗಾ ಯಾತ್ರೆ- BJP Yuva Morcha's Tiranga Yatra

 SUDDILIVE || SHIVAMOGGA

ಬಿಜೆಪಿ ಯುವ ಮೋರ್ಚಾದಿಂದ ತಿರಂಗಾ ಯಾತ್ರೆ-BJP Yuva Morcha's Tiranga Yatra

Tiranga, Yatra

ಗೋಪಾಳಗೌಡ ಬಸ್ ನಿಲ್ದಾಣದಿಂದ ಬಿಜೆಪಿ ಯುವ ಮೋರ್ಚಾದಿಂದ ತಿರಂಗಾ ಯಾತ್ರೆ ನಡೆದಿದೆ. ಆಪರೇಷನ್ ಸಿಂದೂರ್, ಆಪರೇಶನ್ ಮಹದೇವ್ ಯಶಸ್ವಿ ಹಿನ್ನಲೆ ಮತ್ತು 78 ನೇ  ಸ್ವಾತಂತ್ರ್ಯೋತ್ಸವದ ಅಂಗವಾಗಿ ತಿರಂಗಾ ಯಾತ್ರೆ ನಡೆದಿದೆ. 

Tiranga, yatra

ತಿರಂಗಾ ಯಾತ್ರೆಯಲ್ಲಿ 100 ಕ್ಕೂ ಅಧಿಕ ಬೈಕ್ ಗಳಲ್ಲಿ ಯುವಕರು ಬೈಕ್ ರ‌್ಯಾಲಿ ಹೊರಟಿದ್ದಾರೆ. ಭಾರತ್ ಮಾತಾಕಿ ಎಂಬ ಘೋಷಣೆಯಿಂದ ಹೊರಟಿದೆ. ರ‌್ಯಾಲಿಯು ಮಿಳಘಟ್ಟ, ಬಸ್ ನಿಲ್ದಾಣ ಎಲ್ ಎಲ್ ಆರ್ ರಸ್ತೆ ಗೋಪಿ ವೃತ್ತ ನೆಹರೂ ರಸ್ತೆ ಶಿವಪ್ಪ ನಾಯಕ ವೃತ್ತ ಗಾಂಧಿ ಬಜಾರ್ ನ ರಾಮಣ್ಣ ಶ್ರೇಷ್ಠಿ ಪಾರ್ಕ್ ನಲ್ಲಿ ಕೊನೆಗೊಳ್ಳಲಿದೆ. 

ಬಿಜೆಪಿ ರ‌್ಯಾಲಿಯಲ್ಲಿ ಶಾಸಕ ಚೆನ್ನಬಸಪ್ಪ, ಬಿಜೆಪಿ ಜಿಲ್ಲಾ ಅಧ್ಯಕ್ಷ ಜಗದೀಶ್ ಒಂದೇ ದ್ವಿಚಕ್ರ ವಾಹನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಯುವ ಬಿಜೆಪಿಯ ಭವಾನಿ, ದರ್ಶನ್, ಯುವರಾಜ, ಸೂಡಾ ಮಾಜಿ ಅಧ್ಯಕ್ಷ ನಾಗರಾಜ, ರಾಹುಲ್ ಬಿದರೆ, ಸುರೇಖಾ ಮುರುಳೀಧರ್, ಧೀನ್ ದಯಾಳು ಮೊದಲಾದವರು ಭಾಗಿಯಾಗಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close