SUDDILIVE || SHIVAMOGGA
ತಟ್ಟೇಹಳ್ಳಿಯಲ್ಲಿ ಅನುಮಾನಸ್ಪದ ಸಾವು-Suspicious death in Thattehalli
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಅನುಮಾನ ಸ್ಪದದ ಸಾವು ಕಂಡು ಬಙದಿದೆ. ಕುಟುಂಬ ಅನೈತಿಕ ವಿಚಾರದಲ್ಲಿ ಕೊಲೆ ಎಂದು ಆರೋಪಿಸುತ್ತಿದೆ.
ಹೊಳೆಹೊನ್ನೂರು ಪೊಲೀಸ್ ಠಾಣೆಯ ತಟ್ಟೇಹಳ್ಳಿಯಲ್ಲಿ ಈಶ್ವರ್(47) ಎಂಬುವರು ರಾತ್ರಿ ಮನೆಯಲ್ಲಿ ಮಲಗಿದ್ದಾಗ ಬೆಳಿಗ್ಗೆ ಎದ್ದೇಳಲಿಲ್ಲ. ಸಾವಾಗಿದೆ. ಇದು ಸಾವಲ್ಲ ಕೊಲೆ ಎಂದು ಮೃತ ಈಶ್ವರನ ಕುಟುಂಬ ಆರೋಪಿಸಿದೆ.
ಮೃತ ಈಶ್ವರ್ ಗೆ ಮದುವೆಯಾಗಿದ್ದರೂ ಮತ್ತೊಂದು ಹೆಣ್ಣಿನ ಸಂಗಡ ಸಂಬಂಧವಿತ್ತು. ಈ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಈಶ್ವರ್ ಸಾವಾಗಿದೆ ಎಂಬುದು ಈಶ್ವರ ಪತ್ನಿಯ ಅನುಮಾನವನ್ನ ವ್ಯಕ್ತಪಡಿಸಿದ್ದಾರೆ.
ಈಶ್ವರ್ ಗೆ ಮಲಗುವ ವೇಳೆ ಗುಟ್ಕಾ ಬಾಯಲ್ಲಿ ಹಾಕಿಕೊಂಡು ಚಟವಿತ್ತು. ಈ ಚಟದಿಂದ ಉಸಿರು ಗಟ್ಟಿ ಸತ್ತಿರಬಹುದು ಅಥ್ವಾ ಅನಾರೋಗ್ಯದ ಹಿನ್ನಲೆಯಲ್ಲಿ ಸತ್ತಿರುವ ಶಂಕೆ ಮತ್ತೊಂದು ಕಡೆ ವ್ಯಕ್ತವಾಗುತ್ತಿದೆ. ಸ್ಥಳದಲ್ಲಿ ಯಾವುದೇ ಕ್ರೈಂ ಸೀನುಗಳು ಕಂಡು ಬಂದಿಲ್ಲವೆಂಬುದು ಪೊಲೀಸ್ ಇಲಾಖೆ ಹೇಳುತ್ತಿದೆ. ಒಟ್ಟಿನಲ್ಲಿ ಅನುಮಾನಸ್ಪದ ಸಾವೊಂದು ನಡೆದಿದೆ. ಸ್ಥಳಕ್ಕೆ ಹೊಳೆಹೊನ್ನೂರು ಪೊಲೀಸರು ಭೇಟಿ ನೀಡಿದ್ದಾರೆ.
Suspicious death in Thattehalli