ad

ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಬೇಳೂರು

SUDDILIVE || LINGANMAKKI

ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಬೇಳೂರು-BJP is doing politics on Dharmasthala issue: Belur

ಧರ್ಮಸ್ಥಳದ ವಿಚಾರದಲ್ಲಿ  ಬಿಜೆಪಿ ರಾಜಕೀಯ ಮಾಡುವ ಮೂಲಕ ಹಿಂದೂಗಳ ಮತ ಸೆಳೆಯಲು ಮುಂದಾಗುತ್ತಿದೆ ಎಂದು  ಶಾಸಕ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದರು. 

ಭಾನುವಾರ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ವಿಚಾರವಾಗಿ  ಮೊದಲು ಧ್ವನಿ ಎತ್ತಿದ್ದು ನಾನು. ಇದರಲ್ಲಿ  ಪಿತೂರಿ ನಡೆಯುತ್ತಿದೆ ಅದಕ್ಕೆ ಕಡಿವಾಣ ಹಾಕಬೇಕೆಂದು ಶಾಸನ ಸಭೆಯಲ್ಲಿ ತಿಳಿಸಿದೆ.

ಸರ್ಕಾರ ಈ ವಿಚಾರದಲ್ಲಿ ಎಸ್ ಐಟಿ ಮಾಡಿರುವುದು ಒಳ್ಳೆದಾಗಿದೆ. ಕೂಡಲೆ ವರದಿ ಕೊಡಲು ತಿಳಿಸಿದ್ದೇವೆ. ಆದರೆ ಈಗ ಬಿಜೆಪಿ ಓಟ್ ಬ್ಯಾಂಕಿಂಗ್ ಗಾಗಿ ಧರ್ಮಸ್ಥಳದ ಹಿಂದೆ ಬಿದ್ದಿದ್ದಾರೆ. ಬಿಜೆಪಿ ಇಂತಹ ವಿಚಾರವನ್ನಿಟ್ಟುಕೊಂಡೆ ರಾಜಕೀಯ ಮಾಡುತ್ತಾ ಬಂದಿದೆ. ಹಿಂದಿನ ಚುನಾವಣೆಯಲ್ಲಿ ಹಿಂದೂ ಯುವಕರಾದ ಹರ್ಷ, ಪ್ರವೀಣ್ ನೆಟ್ಟಾರ್  ಹತ್ಯೆಯನ್ನು ರಾಜಕೀಯವಾಗಿ ಬಳಸಿಕೊಂಡು ರಾಜಕೀಯ ಮಾಡಲು ಹೋದರು ಜನರು ಇದನ್ನು ಪರಿಗಣಿಸದೆ 63 ಗೆ ಇಳಿಸಿ ಬುದ್ದಿ ಕಲಿಸಿದ್ದಾರೆ ಎಂದು ಟೀಕಿಸಿದರು. 

ಧರ್ಮಸ್ಥಳದ ವಿಚಾರದಲ್ಲಿ ಅನಾಮಿಕ ಮಾಡಿರುವ  ಗೊಂದಲಕ್ಕೆ  ಕಾಂಗ್ರೆಸ್  ಹೇಗೆ ಕಾರಣವಾಗುತ್ತೆ. ಮಹೇಶ್ ತಿಮ್ಮರೋಡಿ ಅವರು ಹೇಳಿದ್ದಾರೆ ಇದಕ್ಕೆ ಬಿಜೆಪಿ ಹಣ ಕೊಟ್ಟಿದ್ದಾರೆಂದು. ಈಗ ಎಲ್ಲರಿಗೂ ಬುದ್ದಿ ಕಲಿಸುವ ಕೆಲಸ  ಸರ್ಕಾರ ಮಾಡುತ್ತಿದೆ ಎಂದರು.

ಸಚಿವ ಮಧು ಬಂಗಾರಪ್ಪ ಮಾತನಾಡಿ ಶರಾವತಿ ಪಂಪ್ಡ್ ಸ್ಟೇರೇಜ್ ವಿರುದ್ಧ ಎತ್ತಿರುವ ಧ್ವನಿ ವಿರುದ್ಧ ಮಾತುಕತೆ ನಡೆಸಲಾಗುವುದು. ಕೇಂದ್ರ ಸರ್ಕಾರ ಪಂಪ್ಡ್ ಸ್ಟೋರೇಜ್ ಗೆ ಅನುಮತಿ ನೀಡಿದೆ. ಪಂಪ್ಡ್ ಸ್ಟೋರೇಜ್ ಮಾಡಲಾಗುವುದು ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close