ad

ಲಿಂಗನಮಕ್ಕಿ ಜಲಾಶಯ ನಿರ್ಮಾಣಗೊಂಡು ಎಷ್ಟು ವರ್ಷ ಕಳೆದಿದೆ? ಎಷ್ಟು ಬಾರಿ ತುಂಬಿದೆ?How many years has the Linganamakki reservoir been filled

 SUDDILIVE || SHIVAMOGGA

ಲಿಂಗನಮಕ್ಕಿ ಜಲಾಶಯ ನುರ್ಮಾಣಗೊಂಡು ಎಷ್ಟು ವರ್ಷ ಕಳೆದಿದೆ? ಎಷ್ಟು ಬಾರಿ ತುಂಬಿದೆ?How many years has the Linganamakki reservoir been filled? How many times has it been filled?

Linganmakki, reservior


ಶಿವಮೊಗ್ಗದ ಲಿಂಗನಮಕ್ಕಿ ಜಲಾಶಯದಲ್ಲಿ ಹಬ್ವದ ವಾತಾವರಣ ನಿರ್ಮಾಣವಾಗಿದೆ. ಇಂದು ಸಹ ನಾಮಕಾವ್ಯಸ್ಥೆಗೆ ಜಲಾಶಯದಿಂದ ನೀರು ಹರಿಸಲಾಗಿದೆ. 

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಗರಿಷ್ಠ ಮಟ್ಟ 1819 ಅಡಿ ಇದ್ದರೆ ಇಂದು ಅದರ ಮಟ್ಟ 1816 ಅಡಿ ತಲುಪಿದೆ. ಇಂದು ಸಚಿವ ಮಧು ಬಂಗಾರಪ್ಪ ಮತ್ತು ಶಾಸಕ ಗೋಪಾಲಕೃಷ್ಣ ಬೇಳೂರು ಜಲಾಶಯಕ್ಕೆ ಭೇಟಿ ನೀಡಿದ್ದಾರೆ. 

ಇಂದು ಸಹ ಐದು ಗೇಟು ತೆರೆದು 3500 ಕ್ಯೂಸೆಕ್ ನೀರು ಹರಿಸಲಾಯಿತು. ಈ ಬಾರಿ ಒಟ್ಟು ಮೂರು ಬಾರಿ ಜಲಾಶಯದ ರೇಡಿಯಲ್ ಗೇಟ್ ನಿಂದ ನೀರು ಹರಿಸಲಾಗಿದೆ. ಜಲಾಶಯ 1812 ತಲುಪಿದಾಗ ಅಧಿಕಾರಿಗಳು ಬಾಗಿನ ಅರ್ಪಿಸಿ ಅಂದು ಸಹ ನಾಮಕಾವಸಸ್ಥೆಗೆ ನೀರು ಹರಿಸಿ ಬಂದ್ ಮಾಡಲಾಗಿತ್ತು. 

ಯಾವಾಗ 1816 ಅಡಿ ನೀರು ತಲುಪಿತ್ತು ಅಂದು 11 ಗೇಟ್ ತೆರೆದು 15000 ಕ್ಯೂಸೆಕ್ ನೀರು ಹರಿಸಲಾಗಿತ್ತು. ಇಂದು ಸಚಿವರ ಭೇಟಿ ಹಿನ್ನಲೆಯಲ್ಲಿ ಅಲ್ಪಪ್ರಮಾಣದಲ್ಲಿ ನೀರು ಹರಿಸಲಾಗದೆ. ಈ ಕುರಿತು ಮಾಹಿತಿ ನೀಡಿದ ಶಾಸಕ ಗೋಪಾಲ ಕೃಷ್ಣ ಬೇಳೂರು 1964 ರಿಂದ ಇದು ವರೆಗೆ  ಜಲಾಶಯ 21 ಬಾರಿ ಭರ್ತಿಯಾಗಿದೆ ಎಂದರು. 

 ಜಲಾಶಯ ನಿರ್ಮಾಣ ಗೊಂಡು 61 ವರ್ಷ ಕಳೆದಿದ್ದು ಈ 61 ವರ್ಷದ  ಅವಧಿಯಲ್ಲಿ 21 ಬಾರಿ ತುಂಬಿದ ಜಲಾಶಯ ತುಂಬಿದೆ. 

How many years has the Linganamakki reservoir been filled

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close