ad

ಸಾಮೂಹಿಕ ಮದುವೆಯಲ್ಲಿ ಅಪ್ರಾಪ್ತರ ಮದುವೆಗೆ ತಡೆ-Ban on marriage of minors in mass marriages

SUDDILIVE || SHIVAMOGGA

ಸಾಮೂಹಿಕ ಮದುವೆಯಲ್ಲಿ ಅಪ್ರಾಪ್ತರ ಮದುವೆಗೆ ತಡೆ-Ban on marriage of minors in mass marriages

Marriage, minors


ಶಿವಮೊಗ್ಗದ ಶುಭಮಂಗಳದಲ್ಲಿ ನಡೆಯುತ್ತಿದ್ದ ಸಾಮೂಹಿಕ ಮದುವೆಯ ಮೇಲೆ ತಾಸಿಲ್ದಾರ್ ಒಳಗೊಂಡಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ದಿಡೀರ್ ದಾಳಿ ನಡೆಸಿದ್ದಾರೆ ದಾಳಿಯಲ್ಲಿ ಇಬ್ಬರು ಅಪ್ರಾಪ್ತರು ಮದುವೆಯಾಗುತ್ತಿರುವುದು ಕಂಡುಬಂದಿದ್ದು ಇದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಶುಭ ಮಂಗಳ ಕಲ್ಯಾಣ ಮಂಟಪದಲ್ಲಿ ಭಾರತೀಯ ದಲಿತ ಸಂಘರ್ಷ ಸಮಿತಿಯ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ರಾಜೀವ್ ತಹಶಿಲ್ದಾರ ರವರು ಮತ್ತ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಾಬಾಯಿ ಮತ್ತು ರೇಖಾ ವಲಯ ಮೇಲ್ವಿಚಾರಕರು, ಮಕ್ಕಳ ಸಹಾಯವಾಣಿ ಸಿಬ್ಬಂದಿ ಹಾಗೂ ವಿನೋಬನಗರ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ. 

ಎಂಟು ಜೋಡಿಗಳ ವಿವಾಹ ಕಾರ್ಯಕ್ರಮ ನಡೆಸುತ್ತಿರುವ ಬಗ್ಗೆ ತಿಳಿಸಿದ್ದು  ಎರಡು ಜೋಡಿಗಳು  ಅಪ್ರಾಪ್ತರಾಗಿರುವ ಕಾರಣ ಆರು ಜೋಡಿಗಳ ವಿವಾಹವನ್ನು ನಡೆಸಲು ಆಯೋಜಕರಿಗೆ ತಿಳಿಸಲಾಯಿತು ಆರು  ವಯಸ್ಕ ಜೋಡಿಗಳ ವಿವಾಹವನ್ನು ನಡೆಸಿರುತ್ತಾರೆ.

Ban on marriage of minors in mass marriages

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close