SUDDILIVE || BHADRAVATHI
ಕೊಳೆತ ಮತ್ತು ನಗ್ನ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ-Woman's body found in decomposed and naked condition
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಜ್ಜೆಗೆಹಳ್ಳಿಯಲ್ಲಿ ಅನುಮಾನಸ್ಪದವಾಗಿ ನಗ್ನ ಸ್ಥಿತಿಯಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿದೆ. ಈ ಶವದ ಪತ್ತೆಗಾಗಿ ಎಫ್ಎಸ್ಎಲ್ ತಂಡ ಭೆಟಿ ನೀಡಿದೆ.
ಮಜ್ಜಿಗೆ ಹಳ್ಳಿಯ ಚಾನೆಲ್ ವೊಂದರ ಬಳಿ ಮಹಿಳೆಯ ಶವವೊಂದು ಪತ್ತೆಯಾಗಿದ್ದು, ಈ ಮೃತದೇಹವು ಕೊಳತೆ ಸ್ಥಿತಿಯಲ್ಲಿದೆ. ಮೃತ ದೇಹದ ಗುರುತುಪತ್ತೆಯಾಗಬೇಕಿದೆ. ಈ ಮಹಿಳೆಯ ವಯಸ್ಸು 35-45 ಆಸುಪಾಸಿನಲ್ಲಿರಬಹುದು ಎಂದು ಶಂಕಿಸಲಾಗಿದೆ.
ಅನುಮಾನಸ್ಪದ ಸಾವಿನ ಅಡಿಯಲ್ಲಿ ಈ ಮೃತಪತ್ತೆಯಾಗಿರುವುದರಿಂದ ಶಂಕೆಯ ರೂಪದಲ್ಲಿ ದೂರು ದಾಖಲಾಗಲಿದೆ. ಚಾನೆಲ್ ಆಗಿರುವುದರಿಂದ ಹೆಣ ತೇಲಿ ಬಂದಿರಬಹುದು ಎಂದು ಶಂಕಿಸಲಾಗಿದೆ. ಒಟ್ಟಿನಲ್ಲಿ ಮಹಿಳೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಮೃತರ ಸಾವು ಹಲವು ಅನುಮಾನಗಳಿಂದ ಕೂಡಿದೆ.
ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಧಾವಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
Woman's body found in decomposed and naked condition