SUDDILIVE | SHIVAMOGGA
ಸವಾಲಿಗೆ ಸಿದ್ದ ಎಂದರು ಸಿ.ಎಸ್.ಷಡಾಕ್ಷರಿ-C.S. Shadakshari said he is ready for the challenge
ಕಾಂಗ್ರೆಸ್ ನಾಯಕ ಎಚ್ ಯೋಗೀಶ್ ಅವರ ಆರೋಪಕ್ಕೆ ರಾಜ್ಯ ನೌಕರ ಸಂಘದ ಅಧ್ಯಕ್ಷ ಸಿಎಸ್ ಷಡಕ್ಷರಿ ತಿರುಗೇಟು ನೀಡಿದ್ದಾರೆ. ದಿನಕ್ಕೆ ನಾನು ನಾಲ್ಕೈದು ಸಭೆಗಳನ್ನು ನಡೆಸುತ್ತಿದ್ದೇನೆ ಸಿದ್ದಗಂಗಾ ಮಠಕ್ಕೆ ಅಕ್ಕಿ ಸಮರ್ಪಣೆ ಕಾರ್ಯಕ್ರಮ ಕುರಿತಂತೆ ಸಭೆಗಳನ್ನು ನಡೆಸುತ್ತಿರುವುದಾಗಿ ಷಡಕ್ಷರಿ ಸ್ಪಷ್ಟನೆ ನೀಡಿದ್ದಾರೆ.
ಸಿದ್ದಗಂಗೆ ಮಠಕ್ಕೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸಮರ್ಪಣೆ ಮಾಡಲು ಬರುತ್ತಿದ್ದಾರೆ. ಅವರು ನೀಡಿರುವ ಫೊಟೊದಲ್ಲಿ ಇರುವರೆಲ್ಲರೂ ಮಠಕ್ಜೆ ಅಕ್ಕಿ ನೀಡಿದ ದಾನಿಗಳಾಗಿದ್ದಾರೆ. ಆರೋಪ ಮಾಡಿದವರ ಹೆಸರನ್ನು ಸಹ ಸಿದ್ದಗಂಗಾ ಮಠಕ್ಕೆ ಅಕ್ಕಿ ನೀಡುವ ಕಾರ್ಯಕ್ರಮಕ್ಕೆ ಆಹ್ವಾನಿಸಲು ಅವರ ಮನೆಗೆ ಹೋಗಿದ್ದೆ. ಅವರ ತಂದೆಯ ಹೆಸರನ್ನೂ ಕಾರ್ಯಕ್ರಮದಲ್ಲಿ ಉಲ್ಲೇಖಿಸಲಾಗಿದೆ. ನನ್ನನ್ನೇ ಕೇಳಿದ್ದರೆ ಈ ಫೊಟೊದ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೆ ಎಂದರು. ನಾನು ಯಾವುದೇ ಪಕ್ಷಕ್ಕೆ ಸೇರಿದ ವ್ಯಕ್ತಿ ಅಲ್ಲ ಎಂದು ಸ್ಪಷ್ಟನೆ ನೀಡಿದರು.
ನನ್ನ ಫೆನ್ಸಿಂಗ್ ಏನೆಂದು ನನಗೆ ಗೊತ್ತಿದೆ. ಋಜುವಾತು ಮಾಡಿದಂತಹ ಅಥವಾ ಯಾವುದೇ ಬ್ಯಾನರ್ ನ ಅಡಿ ನಡೆಸಿದ ಸಭೆಗಳಲ್ಲಿ ಕುಳಿತಿರುವ ನನ್ನ ಫೋಟೊ ತೋರಿಸಿದರೆ ನಾನು ಯಾವುದೇ ಸವಾಲಿಗೂ ಸಿದ್ಧ ಎಂದು ಷಡಕ್ಷರಿ ಆಗ್ರಹಿಸಿದರು. ನಾನು ಸರ್ಕಾರಿ ವ್ಯವಸ್ಥೆಯಲ್ಲಿ ಕೆಲಸ ಮಾಡುವಂತಹ ನೌಕರನಾಗಿದ್ದೇಬೆ. ಆಯನೂರು ಮಂಜುನಾಥ್ ಅವರಿಗೂ ಆಹ್ವಾನಿಸಿದ್ದೇನೆ ಯೋಗೀಶ್ ಅವರ ಮನೆಗೂ ಸಹ ಹೋಗಿ ಆಹ್ವಾನಿಸಿದ್ದೇನೆ ಅವರು ಬೆಂಗಳೂರಿನಲ್ಲಿ ಇದ್ದರು ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ. ಈ ಬಗ್ಗೆ ಸಣ್ಣದಾಗಿ ಯೋಚನೆ ಮಾಡಬಾರದಿತ್ತು. ಮುಕ್ತವಾಗಿ ಚರ್ಚಿಸಲು ಬರಲಿ ಮಾತನಾಡುವೆ ಎಂದರು.
ಅವರಿಗೆ ಮಾಹಿತಿ ಕೊರತೆ ಇದೆ ಅನ್ಸುತ್ತೆ ಇವತ್ತು ಐದು ಕಡೆ ಸಭೆ ಇದೆ, ಅಕ್ಕಿಗಳನ್ನು ಕೊಡುತ್ತಾರೆ ಭಕ್ತಾದಿಗಳು ಅದನ್ನು ಪಡೆದುಕೊಂಡು ಬರುತ್ತೇವೆ. 5 ಲಾರಿ ಅಕ್ಕಿಯನ್ನು ಕೊಡುವುದಾಗಿ ತೀರ್ಮಾನಿಸಿದ್ದೇವೆ, ಆ ಹಿನ್ನೆಲೆಯಲ್ಲಿ ಸಭೆಗಳನ್ನು ಮಾಡುತ್ತಿರುವುದಾಗಿ ತಿಳಿಸಿದರು. ಇದನ್ನು ಸಂಕೋಚಿತವಾಗಿ ನೋಡಬಾರದು. ಯಾವುದೇ ಬ್ಯಾನರ್ ಅಡಿಯಲ್ಲಿ ನಾನು ಸಭೆ ನಡೆಸಿಲ್ಲ ಸಂಸದರ ಅಭಿಮಾನಿಗಳು ಅಕ್ಕಿ ಕೊಡಬಾರದು ಅನ್ನೋದು ಎಲ್ಲಾದರೂ ಇದಿಯಾ ಎಂದು ಪ್ರಶ್ನಿಸಿದರು.
ಬಿಜೆಪಿ ಅಥವಾ ಸಂಸದರ ಬ್ಯಾನರ್ ಅಥವಾ ಲೋಗೋ ಕೆಳಗಡೆ ಕೆಲಸ ಮಾಡಿದ್ದಲ್ಲಿ ಫೋಟೋ ತೋರಿಸಿ ಅದನ್ನು ಒಪ್ಪಿಕೊಳ್ಳುವೆ ನನಗೂ ಇತಿ ಮಿತಿ ಗೊತ್ತಿದೆ ಆರೋಪ ಮಾಡುವುದು ಸರಿಯಲ್ಲ ಇಂತಹ ನೂರು ಫೋಟೋಗಳಿವೆ ನಾನು ಕಳಿಸುವೆ ಸಿದ್ದಗಂಗಾ ಮಠದ ರಾಜಕಾರಣ ನಡೆಸಬಾರದು ಎಂದರು.
C.S. Shadakshari said he is ready for the challenge