SUDDILIVE || SHIVAMOGGA
ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿಗೆ ಚಾಲನೆ-ASHA workers launch overnight sit protest
ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿರುವ ಅಹೋ ರಾತ್ರಿ ಧರಣಿ ಅಂಗವಾಗಿ ಶಿವಮೊಗ್ಗದಲ್ಲಿ ಇಂದು ಇಂದಿನಿಂದ ಮೂರು ದಿನಗಳ ಕಾಲ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ.
ಮುಖ್ಯಮಂತ್ರಿಗಳು ಘೋಷಿಸಿದ ರಾಜ್ಯದ ಗೌರವದನ ಮತ್ತು ಕೇಂದ್ರದ ಭಾಗಶಹ ಪ್ರೋತ್ಸಾಹಧನ ಸೇರಿಸಿ ಮಾಸಿಕ ಕನಿಷ್ಠ 10 ಸಾವಿರ ರೂಗಳ ಗೌರವಧನ ಗ್ಯಾರಂಟಿಗೊಳಿಸುವ ಆದೇಶ ಏಪ್ರಿಲಿಂದ ಅನ್ವಯ ಆಗುವಂತೆ ಹೊರಡಿಸಬೇಕು ರಾಜ್ಯ ಬಜೆಟ್ ನಲ್ಲಿ ಎಲ್ಲಾ ಅಂಗನವಾಡಿ ಮತ್ತು ಬಿಸಿಊಟ ಕಾರ್ಯಕರ್ತರಿಗೆ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತರಿಗೂ ಸಹ 1000 ಪ್ರೋತ್ಸಾಹ ಧನ ಹೆಚ್ಚಿಸಬೇಕು ಜನಸಂಖ್ಯೆಯ ಮಿತಿ ಅವೈಜ್ಞಾನಿಕ ಮೌಲ್ಯಮಾಪನ ಶಿಕ್ಷಣದ ಹೆಸರಿನಲ್ಲಿ ಆಶ ಕಾರ್ಯಕ್ರಮ ವಿರುವ ಆದೇಶವನ್ನು ಕೈಬಿಡಬೇಕು ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಇಂದು ಜಿಲ್ಲಾಧಿಕಾರಿಗಳ ಕಚೇರಿಯದು ಆಶಾ ಕಾರ್ಯಕರ್ತರ ಪ್ರತಿಭಟನೆ ಆರಂಭಗೊಂಡಿದೆ.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತರು ನಂತರ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ಸಭೆ ನಡೆಸಿ ವಾಪಸ್ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ್ದಾರೆ. ಮಹಾವೀರ ವೃತ್ತದಲ್ಲಿ ಅಹೋರಾತ್ರಿ ಧರಣ್ಯ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ 12 13 ಮತ್ತು 14 ಮೂರು ದಿನಗಳ ಕಾಲ ಅಹೋ ರಾತ್ರಿ ಧರಣಿ ನಡೆಯಲಿದೆ.
ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತರ ಜಿಲ್ಲಾಧ್ಯಕ್ಷ ರಾಜೇಶ್ವರಿ ಕಾರ್ಯದರ್ಶಿ ಚಂದ್ರಕಲಾ ಸರಸ್ವತಿ ಆಶಾ ಮೊದಲಾದವರು ಭಾಗಿಯಾಗಿದ್ದರು.
ASHA workers launch overnight sit protest