ಸಿನಿಮಾ ನೋಡಲು ಸೀಟು ಬಿಟ್ಟುಕೊಡದಿದ್ದಕ್ಕೆ ಬಿತ್ತು ಜಾತಿ ನಿಂದನೆ ಕೇಸ್ ...! Caste abuse case filed

SUDDILIVE || HOLEHONNURU

ಸಿನಿಮಾ ನೋಡಲು ಸೀಟು ಬಿಟ್ಟುಕೊಡದಿದ್ದಕ್ಕೆ ಬಿತ್ತು ಜಾತಿ ನಿಂದನೆ ಕೇಸ್ ...!Caste abuse case filed for not giving up seat to watch a movie...!



ಕ್ಷುಲಕ ಕಾರಣಕ್ಕೆ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಪಿಲಂ ಟಾಕೀಸಿನಲ್ಲಿ ಸಿಟು ಬಿಟ್ಟುಕೊಡದವರ ವಿರುದ್ದ ಜಾತಿನಿಂದನೆ ಪ್ರಕರಣ ದಾಖಲಾಗಿದೆ.

ಆನವೇರಿಯ ಶ್ರೀ ದೇವಿ ಚಿತ್ರ ಮಂದಿರದಲ್ಲಿ ಕಳೆದ 20 ದಿನಗಳ ಹಿಂದೆ ಸು ಪ್ರಮ್ ಸೋ ಚಲನಚಿತ್ರ ವಿಕ್ಷಣೆಗೆಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಶಿವಲಿಂಗಪ್ಪ ಕುಟುಂಬದವರು ಆನ್‌ಲೈನ್‌ನಲ್ಲಿ 9 ಟಿಕೆಟ್ ಬುಕ್ ಮಾಡಿಕೊಂಡು ಕುಟುಂಬ ಸಮೇತ ಶ್ರೀ ದೇವಿ ಚಿತ್ರ ಮಂದಿರಕ್ಕೆ ಆಗಮಿಸಿದ್ದಾರೆ. 

ತಾವು ಬುಕ್ ಮಾಡಿದ ಸಿಟುಗಳಲ್ಲಿ ಬೇರೆಯವರು ಕುಳಿತಿರುವುದನ್ನು ನೋಡಿ ನಾವು ಸಿಟ್‌ಗಳನ್ನು ಬುಕ್ ಮಾಡಿಕೊಂಡಿದೆವೇ ಬಿಟ್ಟುಕೊಡಬೇಕೆಂದು ಕೇಳಿದ್ದಾರೆ. ನಾವು ಚಿತ್ರಮಂದಿರದ ಕೌಂಟರ್‌ನಲ್ಲಿ ಹಣ ನೀಡಿ ಟಿಕೇಟ್ ಪಡೆದು ಇಲ್ಲಿ ಕುಳಿತಿದೇವೆಂದು ಹೊಳೆಹೊನ್ನೂರು ಹೋಂ ಗಾರ್ಡ ಅಧಿಕಾರಿ ಸುನೀಲ್‌ಕುಮಾರ್ ಸ್ನೇಹಿತರು ಟಿಕೇಟ್ ತೋರಿಸಿ ಸಿಟು ಬಿಟ್ಟುಕೊಟ್ಟಿಲ್ಲ. 


ಆನ್‌ಲೈನ್ ಬುಕಿಂಗ್ ಆದ ಸಿಟುಗಳಿಗೆ ಟಿಕೇಟ್ ನೀಡಿದಕ್ಕೆ ಚಲನಚಿತ್ರ ಮಂದಿರದ ಮಾಲೀಕ ಕಿರಣ್‌ಗೌಡರ ಬಳಿ ಕುಟುಂಬಸ್ಥರು ಮಾತಿನ ಚಕಮಕಿ ನಡೆಸಿದ್ದಾರೆ. ಮಾಲೀಕರು ಎರಡು ಕಡೆಯವರಿಗೂ ಸಂತೈಸಿ 6 ಸಿಟ್ ವ್ಯವಸ್ಥೆ ಮಾಡಿಕೊಟ್ಟಿದರು. ಇನ್ನೂ 3 ಆಸನದ ವ್ಯವಸ್ಥೆ ಮಾಡುವಷ್ಠರಲ್ಲಿ ಸುನೀಲ್ ಹಾಗೂ ಶಿವಲಿಂಗಪ್ಪ ಮಧ್ಯೆ ಜಗಳವಾಗಿ ತಳ್ಳಾಟ ನೂಕಾಟ ಮಾಡಿಕೊಂಡು ಚಿತ್ರ ಮಂದಿರದ ಹೋರಗಡೆ ಹೋಗಿದ್ದಾರೆ. ಸಿಟಿನ ವಿಚಾರದಲ್ಲಿ ಶಿವಲಿಂಗಪ್ಪ ಕುಟುಂಸ್ಥರು ಹಾಗೂ ಹೊಂ ಗಾರ್ಡ್ ಅಧಿಕಾರಿ ಸುನೀಲ್ ಸಹಚರರಿಗೂ ಮಾತಿನ ಚಕಮಕಿ ನಡೆದು ಗಲಭೆ ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸಿದ್ದಾರೆ. 

ಘಟನೆ ಸಂಬಂದ ಎರಡು ಕಡೆಯವರು ಹೊಳೆಹೊನ್ನೂರು ಠಾಣೆಗೆ ಹೋಗಿ ರಾಜಿ ಪಂಚಾಯಿತಿ ನಡೆಸಿದರು ಎನ್ನಲಾಗುತ್ತಿದೆ. ರಾಜಿ ಪಂಚಾಯಿತಿ ನಡೆದ ವಾರದ ನಂತರ ಚಿತ್ರ ಮಂದಿರಲ್ಲಿ ಸೀಟು ಬಿಟ್ಟು ಕೊಡದ ಹೊಂಗಾರ್ಡ್ ಅಧಿಕಾರಿ ಸುನೀಲ್ ಹಾಗೂ ಆಸನದ ವ್ಯವಸ್ಥೆ ಮಾಡದ ಚಿತ್ರಮಂದಿರದ ಮಾಲೀಕ ಕಿರಣ್‌ಗೌಡರ ವಿರುದ್ದ ಶಿವಲಿಂಗಪ್ಪ ಹೊಳೆಹೊನ್ನೂರು ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಸೀಟು ಬಿಟ್ಟುಕೊಡದವರ ವಿರುದ್ದ ಜಾತಿ ನಿಂದನೆ ಪ್ರಕರಣ ದಾಖಲಾಗಿರುವುದು ಸ್ಥಳೀಯವಾಗಿ ದೊಡ್ಡಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಸಣ್ಣಪುಟ್ಟ ಗಲಭೆಗಳನ್ನು ಜಾತಿ ಅಸ್ತçವಾಗಿ ಬಳಸಿಕೊಂಡು ಜಾತಿನಿಂದನೆ ದಾಳ ಉರುಳಿಸಿ ಪ್ರಕರಣ ದಾಖಲಿಸಿ ಹಣ ಮಾಡಿಕೊಳ್ಳುತ್ತಿರುವ ಜಾಲಕ್ಕೆ ಸಿಟು ಬುಕ್ಕಿಂಗ್ ಪ್ರಕರಣಕ್ಕೆ ಬೆನ್ನೆಲುಬಾಗಿ ನಿಂತಿರುವ ಶಂಕೆ ವ್ಯಕ್ತವಾಗಿದೆ. ಚಲನಚಿತ್ರ ಆರಂಭವಾದ ಕೆಲ ಸಮಯದ ನಂತರ ಆಲ್‌ಲೈನ್‌ನಲ್ಲಿ ಸಿಟ್ ಬುಕ್ ಮಾಡಿಕೊಂಡವರು ಬಂದರು. ಅಷ್ಟರಲ್ಲೆ ಕೌಂಟರ್‌ನಲ್ಲಿ ಹಣ ನೀಡಿ ಟಿಕೆಟ್ ಕೊಂಡವರು ಸಿಟ್‌ಗಳಲ್ಲಿ ಕುಳಿತ್ತಿದ್ದರು. 

ಶಿವಲಿಂಗಪ್ಪನವರಿಗೆ ನಾವು ನಮ್ಮ ಸಿಬ್ಬಂದಿಗಳು 6 ಸಿಟ್ ಹುಡುಕಿಕೊಟ್ಟೆವು ಇನ್ನೂಳಿದ 3 ಸಿಟ್ ನೀಡುವಷ್ಟರಲ್ಲಿ ನಾವೇಲ್ಲ ಒಂದೇ ಸಾಲಿನಲ್ಲಿ ಕುಳಿತುಕೊಳ್ಳಬೇಕು ಎಂದು ಪಟ್ಟು ಹಿಡಿದರು. ಆದರಿಂದ ನಾಳೆ ಬಂದು ಚಿತ್ರ ವಿಕ್ಷಿಸುವಂತೆ ವಿನಂತಿಸಿದೆವು. ಅಷ್ಷರಲ್ಲೆ ಎರಡು ಕಡೆಯವರಿಗೂ ಜಗಳ ಆರಂಭವಾಯಿತ್ತು. ನಮ್ಮ ಚಿತ್ರ ಮಂದಿರಕ್ಕೆ ನಿತ್ಯ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಹೊನ್ನಾಳಿ, ಚನ್ನಗಿರಿ ತಾಲ್ಲೂಕುಗಳ ಸಾವಿರಾರು ಜನ ಚಲನಚಿತ್ರ ವಿಕ್ಷಣೆಗೆಂದು ಬೇಟಿ ನೀಡುತ್ತಾರೆ. ಬಂದರೆಲ್ಲಾ ಯಾರೆಂಬುದು ಯಾರಿಗೆ ನಮ್ಮಗೆನು ತಿಳಿದಿರುತ್ತದೆ ಎಂದು ಚಿತ್ರ ಮಂದಿರ ಮಾಲೀಕ ಕಿರಣ್‌ಗೌಡ ಬೇಸರ ವ್ಯಕ್ತ ಪಡಿಸಿದ್ದಾರೆ.

Caste abuse case filed

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close