SUDDILIVE || SHIVAMOGGA
ಒಳಮೀಸಲಾತಿ ಪರಿಷ್ಕರಿಸಿ-ಡಿಎಸ್ಎಸ್ ಆಗ್ರಹ-DSS demands revision of internal reservation
ಅಲೆಮಾರಿ ಸಮುದಾಯಗಳಿಗೆ ಶೇಕಡ ಒಂದರಷ್ಟು ಪ್ರತ್ಯೇಕ ಹೊಳ ಮೀಸಲಾತಿಯನ್ನು ನೀಡುವಂತೆ ಆಗ್ರಹಿಸಿ ಒಳ ಮೀಸಲಾತಿ ವಂಚಿತ ಹೋರಾಟ ಸಮಿತಿಯು ಇಂದು ಜಿಲ್ಲಾಧಿಕಾರಿಗಳ ಕಚೇರಿಯದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರಭಾಕರ್ ಬಿ ಕೃಷ್ಣಪ್ಪನವರು ಪರಿಶಿಷ್ಟ ಜಾತಿಗಳಲ್ಲಿ ಶ್ರೇಣಿಕೃತ ಜಾತಿ ವ್ಯವಸ್ಥೆ ಇರುವುದರಿಂದ ಬಲಾಢ್ಯಜಾತಿಗಳು ದುರ್ಬಲ ಜಾತಿಗಳ ಮೀಸಲಾತಿಯನ್ನು ಕಳುಹಿಸುತ್ತಿವೆ ಆದ್ದರಿಂದ ಪರಿಶಿಷ್ಟ ಜಾತಿ ಒಳಗಿನ ಉಪಜಾತಿಗಳಿಗೆ ಒಳ ಮೀಸಲಾತಿ ಹೋರಾಟವನ್ನೇ ಕಲ್ಪಿಸಬೇಕೆಂದು ಆರಂಭಿಸಿದ್ದರು.
ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ 2024ನೇ ಸಾಲಿನ ಆಗಸ್ಟ್ ಒಂದರಂದು ಆದೇಶ ಹೊರಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಾಗಮೋಹನ್ ದಾಸ್ ನೀಡಿದ ವರದಿಯ ಅನುಸಾರ ಐದು ವಿಭಾಗಗಳಲ್ಲಿ ಮೀಸಲಾತಿಯನ್ನು ವಿಂಗಡಿಸಿದ್ದನ್ನು ಪರಿಷ್ಕರಿಸಿ 3 ವರ್ಗಕ್ಕೆ ಸೀಮಿತಗೊಳಿಸಿದೆ.
ಇದರ ಅನುಸಾರ ಮಾದಿಗ ಮತ್ತು ಸಂಬಂಧಿಸಿದ 18 ಜಾತಿಗಳಿಗೆ ವಲಯ ಮತ್ತು ಸಂಬಂಧಿಸಿದ 20 ಜಾತಿಗಳಿಗೆ ಶೇಕಡ 60 ಲಂಬಾಣಿ ಭೋವಿ ಕೊರಚ ಪರಮ ಮತ್ತು 59 ಅಲೆಮಾರಿ ಜಾತಿಗಳನ್ನು ಸೇರಿಸಿ ಶೇಕಡ ಐದರಷ್ಟು ಮೀಸಲಾತಿಯನ್ನು ನೀಡಿದೆ ಆದರೆ ಅಲಮಾರಿ ಜಾತಿಗಳಿಗಾಗಿ ಶೇಕಡ ಒಂದರಷ್ಟು ನೀಡಿದ್ದ ಮೀಸಲಾತಿಯನ್ನು ತೆಗೆದು ಅದನ್ನು ಗೊಳಿಸಿರುವುದು ಸರಿಯಾದ ಕ್ರಮವಲ್ಲವೆಂದು ಸಮಿತಿ ಮನವಿಯಲ್ಲಿ ಆಗ್ರಹಿಸಿದೆ.
ಅಲೆಮಾರಿ ಸಮುದಾಯಗಳಿಗೆ ನಾಗಮೋಹನ್ ದಾಸ್ ಆಯೋಗವು ಶೇಕಡ ಒಂದರಷ್ಟು ಪ್ರತ್ಯೇಕ ಮೀಸಲಾತಿ ಕಲ್ಪಿಸಿದ್ದರು ಸಹ ಸರ್ಕಾರ ಪರಿಗಣಿಸದೆ ಇರುವುದು ದುರದೃಷ್ಟಕರ ಹಾಗಾಗಿ ಸರ್ಕಾರ ಮತ್ತೊಮ್ಮೆ ತನ್ನ ನಿರ್ಧಾರವನ್ನು ಪರಿಷ್ಕರಿಸಬೇಕು 59 ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ದಲಿತ ಸಂಘರ್ಷ ಸಮಿತಿ ಪ್ರೊಫೆಸರ್ ಕೃಷ್ಣಪ್ಪರವರು ಸ್ಥಾಪಿತ ಸಂಘಟನೆ ಮನವಿಯಲ್ಲಿ ಒತ್ತಾಯಿಸಿದೆ.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಟಿ ಗಿರೀಶ್ ಜಯಮ್ಮ ಸುಡುಗಾಡು ಸಿದ್ಧ ಸಮಾಜದ ಗಂಗಣ್ಣ ಸಿಂದೋಳು ಸಮಾಜದ ಮಾರುತಿ ಶಿಳ್ಳೆಕ್ಯಾತೆ ಸಮಾಜದ ಮಾಜಿ ಅಧ್ಯಕ್ಷ ಆರ್ ರಾಜೀವ್ ಮೊದಲಾದವರು ಭಾಗಿಯಾಗಿದ್ದರು.
DSS demands revision of internal reservation