SUDDILIVE || SHIVAMOGGA
ಭದ್ರಾವತಿ ಟಿ.ಕೆ ರಸ್ತೆಯಲ್ಲಿ ಹಜರತ್ ಸೈಯದ್ ಸಾದಾತ್ ಷಾ ದರ್ಗಾಗೆ ಚುನಾವಣೆ ದಿನಾಂಕ ಫಿಕ್ಸ್-Election date fixed for Hazrat Syed Sadat Shah Dargah on Bhadravati TK Road
ಭದ್ರಾವತಿಯ ಟಿಕೆ ರಸ್ತೆಯಲ್ಲಿರುವ ಹಜರತ್ ಸೈಯದ್ ಸಾದಾತ್ ಷಾ ಖಾದ್ರಿ ದರ್ಗಾ, ಸುನ್ನಿ ಮತ್ತು ಖಬರ್ ಸ್ಥಾನ್ ಗೆ ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡಿದೆ. 11 ಜನ ವ್ಯವಸ್ಥಾಪನ ಸಮಿತಿ ಸದಸ್ಯರ ಚುನಾವಣೆ ಸೆ.28 ರಂದು ಮತದಾನ ನಡೆಯಲಿದೆ.
ಚುನಾವಣೆ ಅಧಿಕಾರಿಯಾಗಿ ಜಿಲ್ಲಾ ವಕ್ಫ್ ಅಧಿಕಾರಿ ಸೈಯ್ಯದ್ ಜುನೇದ್ ಪಾಷಾ ಅವರನ್ನು ನೇಮಿಸಲಾಗಿದೆ ಸೆಪ್ಟೆಂಬರ್ 8 ರಂದು ನಾಮಪತ್ರ ಅರ್ಜಿ ಯನ್ನ ಪಡೆಯಬಹುದಾಗಿದೆ. ಸೆ.16 ರಂದು ನಾಮಪತ್ರ ಸಲ್ಲಿಸುವ ಕೊನೆಯ ದಿನವಾಗಿದೆ. ನಾಮಪತ್ರವನ್ನ ಭದ್ರಾವತಿಯ ಟಿ.ಕೆ ರಸ್ತೆಯಲ್ಲಿರುವ ದರ್ಗಾ ದಲ್ಲಿ ಸೆ.8 ರಿಂದ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಪಡೆಯ ಬಹುದಾಗಿದೆ.
ಉಮೇದುವಾರರು ಭರ್ತಿ ಮಾಡಿದ ನಾಮಪತ್ರವನ್ನ ಸೆ.16 ರಂದು ಮಧ್ಯಾಹ್ನ 3 ಗಂಟೆಯ ಒಳಗೆ ಸಲ್ಲಿಸಬೇಕಿದೆ. ಸೆ.17 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅಂದೇ ಅರ್ಹ ಅಭ್ಯರ್ಥಿಗಳ ಪಟ್ಟಿ ಹೊರಬೀಳಲಿದೆ. ಸೆ.18 ರಂದು ಮದ್ಯಾಹ್ನ 3 ಗಂಟೆಯ ಒಳಗೆ ನಾಮಪತ್ರ ವಾಪಾಸ್ ಪಡೆಯಲು ಅವಕಾಶ ನೀಡಲಾಗಿದೆ.
ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನ ಸೆ.18 ರಂದು ನಾಮಪತ್ರ ಹಿಂಪಡೆಯುವ ಸಮಯ ಮುಗಿದ ನಂತರ ಪ್ರಕಟಿಸಲಾಗುವುದು. ಸೆ.20 ರಂದು ಮದ್ಯಾಹ್ನ 3 ಗಂಟೆಯ ಒಳಗೆ ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಲಾಗುವುದು. ಈ ಎಲ್ಲಾ ಪ್ರಕ್ರಿಯೆಯು ದರ್ಗಾ, ದಲ್ಲಿ ಚುನಾವಣೆ ಅಧಿಕಾರಿಗಳ ಎದುರು ನಡೆಯಲಿದೆ.
ಸೆ.28 ರಂದು ಭಾನುವಾರ ಬೆಳಿಗ್ಗೆ 8 ರಿಂದ ಮದ್ಯಾಹ್ನ 3 ರವರೆಗೆ ಭದ್ರಾವತಿ ಓಲ್ಡ್ ಟೌನ್ ನ ಕೋರ್ಟ್ ರಸ್ತೆಯಲ್ಲಿರುವ ಅಲ್ ಮಹಮೂದ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ನಡೆಯಲಿದೆ. ಅಂದು ಮಧ್ಯಾಹ್ನ 4 ಗಂಟೆಯ ನಂತರ ಮತ ಎಣಿಕೆ ನಡೆಯಲಿದೆ. ಮತ ಎಣಿಜೆಯ ನಂತರ ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣೆ ಅಧಿಕಾರಿ ಸಯ್ಯದ್ ಜುನೈದ್ ಪಾಷ ಚುನಾವಣೆ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
Election date fixed for Hazrat Syed Sadat Shah Dargah