SUDDILIVE || SAGARA
ಗಾಂಧಿ ಪ್ರತಿಮೆಯ ಎದುರು ಅಹೋರಾತ್ರಿ ಧರಣಿ-Day and night protest-in in front of Gandhi statue
ನಾಳೆ ಮುಂಜಾನೆಯಿಂದ ದೇಶ ವ್ಯಾಪ್ತಿಯಲ್ಲಿ 79ನೇ ಸ್ವತಂತ್ರ ದಿನಾಚರಣೆಯ ಸಂಭ್ರಮ ಒಂದು ಕಡೆ ಇದ್ದರೆ ಮತ್ತೊಂದು ಕಡೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಾರಂಗಿ ಹೋಬಳಿಯ ಬಾಣಕೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಊರಲಗಲ್ಲು ಮಜರೇ ಸೇರಿದಂತೆ ಇನ್ನಿತರೆ ಗ್ರಾಮಗಳ ಗ್ರಾಮಸ್ಥರು ನಮಗೆ ಸ್ವಾತಂತ್ರ್ಯ ನೀಡಿ ನಮಗೂ ಕೂಡ ಬದುಕಲು ಅವಕಾಶ ನೀಡಿ ಎಂದು ಘೋಷವಾಕ್ಯದೊಂದಿಗೆ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಗ್ರಾಮಸ್ಥರಿಂದ ಸಾಗರ ನಗರದ ನಗರಸಭೆ ಅವರಣದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ದಿನೇಶ್ ಶಿರವಾಳ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.
Day and night protest-in in front of Gandhi statue