ad

12 ವರ್ಷದ ನಂತರ ನೆಹರೂ ಕ್ರೀಡಾಂಗಣದಲ್ಲಿ ನಡೆಯಿತು ಸ್ವಾತಂತ್ರ್ಯೋತ್ಸವ-independence day in SHIVAMOGGA Nehru stadium

 SUDDILIVE || SHIVAMOGGA

12 ವರ್ಷದ  ನಂತರ ನೆಹರೂ ಕ್ರೀಡಾಂಗಣದಲ್ಲಿ ನಡೆಯಿತು ಸ್ವಾತಂತ್ರ್ಯೋತ್ಸವ-independence day in SHIVAMOGGA Nehru stadium

Indeoendence, Shivamogga


12 ವರ್ಷದ ಬಳಿಕ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸಚಿವ ಮಧು ಬಂಗಾರಪ್ಪನವರಿಂದ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯೋತ್ಸವಕ್ಕೆ ಚಾಲನೆ ನೀಡಲಾಯಿತು.

2013 ರಲ್ಲಿ ಕೊನೆಯದಾಗಿ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮವನ್ನ ಈ ನೆಹರೂ ಕ್ರೀಡಾಂಗಣದಲ್ಲಿ ನಡೆಸಲಾಗಿತ್ತು. ರನ್ನಿಂಗ್ ಟ್ರ್ಯಾಕ್ ಹಾಳಾಗಲಿದೆ ಎಂಬ ಕಾರಣಕ್ಕೆ 12 ವರ್ಷ ಪೊಲೀಸ್ ಡಿಎಆರ್ ಮೈದಾನದಲ್ಲಿ ಕಾರ್ಯಕ್ರಮಗಳು ನಡೆದಿದ್ದವು. ಡಿಸಿ ಗುರುದತ್ತ ಹೆಗಡೆ ಅವರ ಖಡಕ್ ನಿರ್ಧಾರದ ಆಧಾರದ ಮೇರೆಗೆ ಇಂದು 79 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತಿದೆ. 

ಸರಿಯಾಗಿ 9 ಗಂಟೆಗೆ ಸಚಿವ ಮಧು ಬಂಗಾರಪ್ಪ ಧ್ವಜಾರೋಹಣ ನಡೆಸಿದರು. ನಂತರ ಪ್ರಮಾಣ ವಚನ ಸ್ವೀಕರಿಸಿದರು ಸೋಮಶೇಖರಪ್ಪ ಹೆಚ್ ಪಿ ಸ್ವೀಕರಿಸಲಾಯಿತು ಕವಾಯಿತು ಗೌರವವಂಧನೆ ಸ್ವೀಕರಿಸಲಾಯಿತು. 29 ಕವಾಯಿತುಗಳ ಗೌರವ ವಂದನೆಯನ್ನ ತೆರೆದ ಜೀಪಿನಲ್ಲಿ ಸಚಿವರು ಸ್ವೀಕರಿಸಿದರು. ನಂತರ ಪಥ ಸಂಚಲ ನಡೆಸಲಾಯಿತು.



ಮಹಾತ್ಮರ ಪ್ರಾಣ ತ್ಯಾಗ ಬಲಿದಾನದಿಂದ ಸ್ವಾತಂತ್ರ ದೊರೆತಿದೆ. ನಮ್ಮ ಜಿಲ್ಲೆಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಜಿಲ್ಲೆ 4 ಸಿಎಂಗಳನ್ನ ಮತ್ತು ಕುವೆಂಪು ಸೇರಿದಂತೆ ಹಲವಾರು ಸಾಹಿತಿಗಳನ್ನ ನೀಡಲಾಗಿದೆ. 3,87,638 ಫಲಾನುಭವಿಗಳಿಗೆ 1567.74 ಕೋಟಿ ಗೃಹಲಕ್ಷ್ಮಿ ಯೋಜನೆ ಅಡಿ ಹಣ ನೀಡಲಾಗಿದೆ. ಅನ್ನಭಾಗ್ಯ 3.5843?2 ಪಡಿತರ ಕಾರ್ಡರಿಗೆ ಹಣ ನೀಡಲಾಗುತ್ತಿದೆ. 

ಗೃಹಜ್ಯೋತಿ ಅಡಿ, 481.04 ಕೋಟಿ ಹಣವನ್ನ ಜಿಲ್ಲೆಯಲ್ಲಿ ವಿದ್ಯುತ್ ಸಬ್ಸಿಡಿಯನ್ನ 4.69 ಕುಟುಂಬ ಪಡೆದುಕೊಂಡಿದೆ. ಜಿಲ್ಲೆ ಉತ್ತಮ ಮಳೆಯಾಗಿದೆ. ಐದು ಪಶು ಆಸ್ಪತ್ರೆಗೆ ಮಂಜೂರಾಗಿದೆ. ಆನವಟ್ಟಿ ಪಟ್ಟಣ ಪಂಚಾಯಿತಿಗೆ ಶರಾವತಿಯಿಂದ ಕುಡಿಯುವ ನೀರು ಹಂಚಲಾಗಿದೆ. sslc  ಪರೀಕ್ಷೆಯಲ್ಲಿ ನಾಲ್ಕೇನೇ ಸ್ಥಾನವನ್ನ ಜಿಲ್ಲೆ ಪಡೆದಿದೆ. ಐದು ಸಾವಿರ ಸರ್ಕಾರಿ ಶಾಲೆಯಲ್ಲಿ ಎಲ್ ಕೆಜಿ ಆರಂಭಿಸಲಾಗಿದೆ. 16 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ ಜರುಗಿಸಲಾಗಿದೆ. 25 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ಪರೀಕ್ಷೆ ತರಬೇತಿ ನೀಡಲಾಗಿದೆ ಎಂದರು. 

4000 ಸರ್ಕಾರಿ ಶಾಲೆಯಲ್ಲಿ ದ್ವಿಭಾಷ ಶಿಕ್ಷಣ ನೀಡಲು ಕ್ರಮ‌ಜರುಗಿಸಲಾಗಿದೆ. ಇದರಿಂದ ಸರ್ಕಾರಿ ಶಾಲೆಗೆ ಹೆಚ್ಚಿನ‌ಮಕ್ಕಳು ಆಗಮಿಸಿಸಲು ಸಾಧ್ಯವಾಗುತ್ತಿದೆ. ಅಧಂತ್ವ ಮುಕ್ಕ ಅಭಿಯಾನ ಜಿಲ್ಲೆಯಲ್ಲಿ ಆರಙಭಿಸಲಾಗಿದ್ದು, ಮೆಗ್ಗಾನ್ ನ್ನ ಉನ್ನತೀಕರಣಗೊಳಿಸಲು ಕ್ರಮ ಜರುಗಿಸಲಾಗಿದೆ. 162 ಕಿಮಿ ರಸ್ತೆ 118 ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಅಡಿ ಕ್ರಮ ಜರುಗಿಸಲಾಗಿದೆ ಎಂದರು. 

ನಂತರ ತುಕಡಿಗಳ ನಿರ್ಗಮನಕ್ಕೆ ಆದೇಶ ಪಡೆಯಲಾಯಿತು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿಸಲಾಯಿತು. 

ಕಾರ್ಯಕ್ರಮದಲ್ಲಿ ಎಂಎಲ್ಎ ಚೆನ್ನಬಸಪ್ಪ, ಎಂಎಲ್ ಸಿ ಡಾ.ಧನಂಜಯ ಸರ್ಜಿ, ಬಲ್ಕಿಸ್ ಭಾನು, ಡಿ.ಎಸ್.ಅರುಣ್, ಕಾಂಗ್ರೆಸ್ ನ ಹೆಚ್ ಸಿ ಯೋಗೀಶ್,  ಹಾಪ್ ಕಾಮ್ಸ್ ನ  ವಿಜಯಕುಮಾರ್, ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಡಿಸಿ ಗುರುದತ್ತ ಹೆಗಡೆ, ಎಸ್ಪಿ ಮಿಥುನ್ ಕುಮಾರ್ ಮೊದಲಾದವರು ಭಾಗಿಯಾಗಿದ್ದರು. 

independence day in SHIVAMOGGA Nehru stadium

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close